Advertisement

ಕೋವಿಡ್ ಸೋಂಕಿನ ಎರಡನೇ ಅಲೆ ಇನ್ನೂ ಮುಗಿದಿಲ್ಲ : ಆರೋಗ್ಯ ಸಚಿವಾಲಯ

08:13 PM Jul 09, 2021 | Team Udayavani |

ನವ ದೆಹಲಿ : ಕೋವಿಡ್ ಸೋಂಕಿನ ಎರಡನೇ ಅಲೆ ಇನ್ನೂ ಮುಗಿದಿಲ್ಲ. ಸೋಂಕನ್ನು ನಿಯಂತ್ರಣ ಮಾಡುವಲ್ಲಿನ ಹೋರಾಟ ಇನ್ನೂ ನಿಂತಿಲ್ಲ. ಜನರು ಈಗಾಗಲೇ ಸಾಮೂಹಿಕವಾಗಿ ಯಾವುದೇ ಭಯವಿಲ್ಲದೇ ಸೇರುತ್ತಿದ್ದಾರೆ ಕೋವಿಡ್ ಸೋಂಕನ್ನು ನಿಯಂತ್ರಣ ಮಾಡುವಲ್ಲಿ ಜನರು ಸಹಕಾರ ನೀಡಬೇಕು ಎಂದು ನೀತಿ ಆಯೋಗದ  ಸದಸ್ಯ ವಿ. ಕೆ. ಪೌಲ್ ಹೇಳಿದ್ದಾರೆ.

Advertisement

ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು,  ಪ್ರವಾಸಿ ತಾಣಗಳಲ್ಲಿ ಹೊಸ ಅಪಾಯವನ್ನು ಕಾಣುತ್ತಿದೆ. ಜನರು ಸಾಮೂಹಿಕವಾಗಿ ಸೇರುತ್ತಿರುವುದು ಅಪಾಯಕ್ಕೆ ದಾರಿ ಮಾಡುತ್ತಿದೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುತ್ತಿಲ್ಲ. ಸರ್ಕಾರದ ಕೋವಿಡ್ ಸೋಂಕಿನ ಯಾವ ಮಾರ್ಗ ಸೂಚಿಗಳು ನಿಯಮ ಪಾಲನೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಮೂರನೇ ಅಲೆಗೆ ಕಾರಣವಾಗುತ್ತಾ ಕೋವಿಡ್ ಹೊಸ ರೂಪಾಂತರಿ ‘ಕಪ್ಪಾ’ ?

ಕೆಲವು ದೇಶಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗಿತ್ತಿದ್ದು, ನಗರಗಳಲ್ಲಿ ಮತ್ತು ಪ್ರವಾಸಿ ಸ್ಥಳಗಳಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಪ್ರವಾಸಿ ಸ್ಥಳಗಳಲ್ಲಿ ಹೊಸ ರಿಸ್ಕ್ ಎದುರಾಗುತ್ತಿದೆ. ಇದು ಗಂಭೀರ ಸ್ಥಿತಿಗೆ ಹೋಗಬಹುದು. ಈ ರೀತಿಯಲ್ಲಿ ಜನರು ಗುಂಪುಗೂಡಬಾರದು.ಇದರಿಂದ ವೈರಸ್ ಗೆ ಮನುಷ್ಯನ ದೇಹ ಪ್ರವೇಶಕ್ಕೆ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ವೈರಸ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿಲ್ಲ. ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡಲು ಮಾರ್ಗಸೂಚಿ ನೀಡಲಾಗಿದೆ. ಗರ್ಭಿಣಿಯರು ಕೋವಿಡ್ ಲಸಿಕೆ ಪಡೆಯಲು ಪೋತ್ಸಾಹಿಸಿರಿ. ಬಾಣಂತಿಯರಿಗೂ ಕೋವಿಡ್ ಲಸಿಕೆ ನೀಡಬಹುದು. ಯಾವುದೇ ಸಮಸ್ಯೆ ಇಲ್ಲ.ಸ್ಥಳೀಯ ಆಡಳಿತಗಳು ವಿಪತ್ತು ನಿರ್ವಹಣಾ ಕಾಯಿದೆ ನಿಯಮ ಜಾರಿಗೊಳಿಸಬೇಕು. ಪ್ರವಾಸಿ ಸ್ಥಳದಲ್ಲಿ ವಿಪತ್ತು ನಿರ್ವಹಣಾ ಕಾಯಿದೆ ಜಾರಿಗೊಳಿಸಿ. ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಬೇಕಾಗಿದೆ ಎಂದಿದ್ದಾರೆ.

Advertisement

ಇನ್ನು, ಬ್ರಿಟನ್, ರಷ್ಯಾ ಹಾಗೂ ಬಾಂಗ್ಲಾದೇಶದಲ್ಲಿ ಮತ್ತೆ ಕೊವಿಡ್ ಪ್ರಕರಣಗಳು ಏರಿಕೆಯಾಗಿವೆ. ನಾವು ಇನ್ನೂ ಕೊವಿಡ್ ನ ಎರಡನೇ ಅಲೆಯೊಂದಿಗೆ ಹೋರಾಡುತ್ತಿದ್ದೇವೆ. ಕೊವಿಡ್ ವಿರುದ್ಧದ ಕ್ರಮಗಳನ್ನು ನಾವು ಮುಂದುವರಿಸಬೇಕಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಇದನ್ನೂ ಓದಿ :  ಪ್ರಿಯಕರನ ಮನೆಯಲ್ಲೇ ವಿವಾಹಿತ ಯುವತಿ ಸಾವು : ಯುವತಿ ಪೋಷಕರಿಂದ ಪ್ರಿಯಕರನ ಮನೆಗೆ ಬೆಂಕಿ

Advertisement

Udayavani is now on Telegram. Click here to join our channel and stay updated with the latest news.

Next