ತುಮಕೂರು: ಲಾಕ್‌ಡೌನ್ ವೇಳೆಯಲ್ಲಿ ಸಮಾಜಮುಖೀಯಾಗಿ ಸೇವೆ ಸಲ್ಲಿಸಿದ ಕೋವಿಡ್ 19 ವಾರಿಯರ‍್ಸ್ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸೇವೆ ಅನನ್ಯವಾದುದು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಜಿಲ್ಲಾಡಳಿತ ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಾಂಕೇತಿಕವಾಗಿ ಕೋವಿಡ್ 19 ನಿವಾರಣೆಯ ಸಲುವಾಗಿ ಸೇವೆ ಸಲ್ಲಿಸಿದ ಕೋವಿಡ್ 19 ವಾರಿಯರ‍್ಸ್ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗೌರವಿಸಿ ಮಾತನಾಡಿದರು.
ಸುಮಾರು 250 ಜನ ಪ್ರತಿನಿಧಿಗಳು ಸಹಕಾರ ನೀಡಿರುವುದನ್ನು ಪ್ರಶಂಸನೀಯ, ಲಾಕ್‌ಡೌನ್ ಸಂದರ್ಭದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದೀರಿ ಎಂದರು. ಈಗ ಸಾಂಕೇತಿಕ ವಾಗಿ ಕೋವಿಡ್ 19 ವಾರಿಯರ‍್ಸ್ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಗೌರವಿಸಲಾಗುತ್ತಿದೆ. ಉಳಿದ ಕೋವಿಡ್ 19 ವಾರಿಯರ‍್ಸ್‌ರನ್ನು ಮತ್ತೂಂದು ದಿನ ಕರೆಸಿ ಸನ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾ ಪತಿ ಎಸ್.ನಾಗಣ್ಣ ಮಾತನಾಡಿ, ಕಾರ್ಯ ನಿರ್ವಹಿಸಿದ ಪ್ರತಿಯೊಬ್ಬರೂ ಅಭಿನಂದ ನಾರ್ಹರು. ಅವರ ಸೇವೆ ಇದೇ ರೀತಿ ಮುಂದುವರಿಯಲಿ, ಸಮಾಜಕ್ಕೆ ಅವರಿಂದ ಒಳಿತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಸುಭಾಷಿಣಿ ಆರ್. ಕುಮಾರ್, ಸಾಗರನಹಳ್ಳಿ ಪ್ರಭು. ಕೋವಿಡ್ -19 ನೋಡಲ್ ಅಧಿಕಾರಿಗಳಾದ ಬಿ.ಆರ್. ಉಮೇಶ್, ಪೊ›.ಕೆ.ಚಂದ್ರಣ್ಣ ಮಾತನಾಡಿ ದರು. 10 ಸಂಘ ಸಂಸ್ಥೆಗಳಿಗೆ ಹಾಗೂ 10 ಕೋವಿಡ್ 19 ವಾರಿಯರ‍್ಸ್‌ಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾ ಖೆಯ ಉಪನಿರ್ದೇಶಕ ನಟರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಬಿ.ನಾಗೇಂದ್ರಪ್ಪ ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಸದಸ್ಯ ರಾದ ಜಿ.ವಿ.ವಾಸುದೆವ್, ಎಚ್.ಜಿ. ಚಂದ್ರ ಶೇಖರ್, ಕೆ.ಜಿ.ಶಿವಕುಮಾರ್, ಸುರೇಂದ್ರ ಎ ಷಾ, ಮಲ್ಲೇಶಯ್ಯ, ಜಿ.ವಿ.ರಾಮಮೂರ್ತಿ, ಬಿ.ಆರ್. ವೇಣುಗೋಪಾಲಕೃಷ್ಣ ಇದ್ದರು.