Advertisement

ಕೋವಿಡ್ ವೈರಸ್ ಬೀದಿಗಿಳಿದು ಬಂದು ಬೈಕ್ ಸವಾರರಿಗೆ ಬುದ್ದಿ ಹೇಳಿದಾಗ!

09:38 AM Mar 28, 2020 | Hari Prasad |

ಚೆನ್ನೈ: ಮಹಾಮಾರಿ ಕೋವಿಡ್ 19 ದೇಶಾದ್ಯಂತ ವ್ಯಾಪಿಸಿರುವಂತೆಯೇ ಇದನ್ನು ತಡೆಗಟ್ಟಲು ಕೇಂದ್ರ ಸರಕಾರ 21 ದಿನಗಳ ಕಂಪ್ಲೀಟ್ ಲಾಕ್ ಡೌನ್ ಘೋಷಿಸಿದೆ. ಆದರೂ ಜನರು ಬೀದಿಗಿಳಿಯುವುದು ಮತ್ತು ಸೂಕ್ತ ಅಂತರ ಕಾಪಾಡಿಕೊಳ್ಳದೇ ಮಾರುಕಟ್ಟೆಗಳಲ್ಲಿ ಜನಸಂದಣಿಯಲ್ಲಿ ಹೋಗುವುದನ್ನು ತಡೆಯಲು ಕಷ್ಟವಾಗುತ್ತಿದೆ.

Advertisement

ಪೊಲೀಸರು ಸಹ ಈ ವಿಚಾರದಲ್ಲಿ ಜನರಿಗೆ ತಿಳಿಹೇಳಿ ಬೇಸತ್ತಿದ್ದಾರೆ. ಕೆಲವು ಕಡೆಗಳಲ್ಲಿ ಇಂತವರಿಗೆ ಪೊಲೀಸರು ಲಾಠಿ ರುಚಿಯನ್ನೂ ಸಹ ತೋರಿಸಿಯಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಮನೆಯಲ್ಲಿ ಕಳಿತುಕೊಳ್ಳದೇ ಬಿದಿಗಿಳಿಯುವ ಜನರಲ್ಲಿ ಪೊಲೀಸರು ಕೈ ಮುಗಿದು ಮನೆಯಲ್ಲೇ ಇರುವಂತೆ ಕೇಳಿಕೊಳ್ಳುತ್ತಿದ್ದಾರೆ.

ಇತ್ತ ತಮಿಳುನಾಡು ಪೊಲೀಸರು ವಿನೂತನವಾದ ವಿಧಾನವೊಂದನ್ನು ಪ್ರಯೋಗಿಸುತ್ತಿದ್ದಾರೆ. ಚೆನ್ನೈನ ರಸ್ತೆಯೊಂದರಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕೋವಿಡ್ ವೈರಸ್ 19 ಸ್ವರೂಪವನ್ನು ಹೋಲುವ ಹೆಲ್ಮೆಟ್ ಒಂದನ್ನು ಧರಿಸಿಕೊಂಡು ಲಾಕ್ ಡೌನ್ ನಿಯಮ ಉಲ್ಲಂಘಿಸುವವರನ್ನು ತಡೆದು ಅವರಿಗೆ ಬುದ್ದಿವಾದ ಹೇಳುವ ಕೆಲಸವನ್ನು ಮಾಡುತ್ತಿದ್ದಾರೆ.


ದೇಶಾದ್ಯಂತ ಕೋಟ್ಯಂತರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೋವಿಡ್ 19 ಮಹಾಮಾರಿಯ ವಿರುದ್ಧ ಸರಕಾರ ಸಾರಿರುವ ಸಮರದಲ್ಲಿ ಕಾನೂನು ಪಾಲಕರಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದಾರೆ. ಅವರೆಲ್ಲರ ಶ್ರಮಕ್ಕೆ ಬೆಲೆ ಕೊಡಬೇಕಾದರೆ, ನಾವು ಇನ್ನು 19 ದಿನಗಳ ಕಾಲ ಮನೆಯಲ್ಲಿಯೇ ಇರಬೇಕು.

Advertisement

Udayavani is now on Telegram. Click here to join our channel and stay updated with the latest news.

Next