Advertisement

ಚಿಣ್ಣರಲ್ಲಿ ಭಿನ್ನ ಲಕ್ಷಣಗಳನ್ನು ತೋರಿಸುತ್ತಿರುವ ಕೋವಿಡ್ ವೈರಾಣು

12:00 AM May 02, 2020 | Hari Prasad |

ಲಂಡನ್: ಇಂಗ್ಲೆಂಡಿನ ಮಕ್ಕಳಲ್ಲಿ ಕೋವಿಡ್ 19 ವೈರಸ್ ತೀವ್ರವಾಗಿ ಹಬ್ಬುತ್ತಿದೆ. ಸೋಂಕಿಗೆ ತುತ್ತಾದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ವಿಚಿತ್ರ ಲಕ್ಷಣಗಳು, ಇದೀಗ ವೈದ್ಯರನ್ನೇ ಚಿಂತೆಗೆ ತಳ್ಳಿದೆ.

Advertisement

ಸೋಂಕಿತ ಮಕ್ಕಳ ಅಂಗಾಂಗಗಳಲ್ಲಿ ಊತ ಕಾಣಿಸಿಕೊಳ್ಳುತ್ತಿದ್ದು, ಕೋವಿಡ್ 19 ವೈರಸ್ ನೊಂದಿಗೆ ಬೇರೆ ವೈರಾಣುಗಳೂ ಇದಕ್ಕೆ ಕಾರಣ ಇದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ವಯಸ್ಕರಲ್ಲಿನ ಕೋವಿಡ್ 19 ವೈರಸ್ ಗೂ ಮಕ್ಕಳಲ್ಲಿನ ಸೋಂಕಿಗೂ ಸಾಕಷ್ಟು ವ್ಯತ್ಯಾಸ ಕಂಡುಬಂದಿರುವುದನ್ನು ಅಲ್ಲಿನ ಪೀಡಿಯಾಟ್ರಿಕ್‌ ಇಂಟೆನ್ಸಿವ್‌ ಕೇರ್‌ ಸೊಸೈಟಿ ಪತ್ತೆಮಾಡಿದೆ.

ಲಕ್ಷಣಗಳೇನು?
‘ಮಕ್ಕಳಿಗೆ ಇದ್ದಕ್ಕಿದ್ದಂತೆ ಹೊಟ್ಟೆನೋವು ಬರುತ್ತೆ. ಅಪೆಂಡಿಸೈಟಿಸ್‌ನಂತೆ ಒಂದೇ ಸಮನೆ ನರಳಾಡಲು ಆರಂಭಿಸುತ್ತಾರೆ. ಹೆಚ್ಚುವರಿ ಪರೀಕ್ಷೆ ಮಾಡಿದಾಗ, ಹೃದಯದಲ್ಲಿ ಊತ ಇರುವುದು ಕಂಡುಬರುತ್ತದೆ. ಕ್ರಮೇಣ ಈ ಊತ ಇಡೀ ದೇಹವನ್ನು ಆವರಿಸುತ್ತದೆ’ ಎಂದು ಬ್ರಿಟನ್‌ ವೈದ್ಯರ ಸಂಘದ ಡಾ. ರಮೇಶ್‌ ವಿವರಿಸಿದ್ದಾರೆ.

ಬೆಂಗಳೂರಲ್ಲೂ ಪ್ರಕರಣ?
ಈಗಾಗಲೇ ಇಂಗ್ಲೆಂಡಿನಲ್ಲಿ ಇಂಥ 30 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು, ಕೋಲ್ಕತಾ, ಮುಂಬಯಿಯಲ್ಲಿರುವ ನನ್ನ ಸಹೋದ್ಯೋಗಿಗಳು ಪರೀಕ್ಷಿಸಿದ ಸೋಂಕಿತ ಮಕ್ಕಳಲ್ಲೂ ಇಂಥ ಲಕ್ಷಣ ಹೋಲಿಕೆ ಕಂಡುಬಂದಿದೆ. ಕೋವಿಡ್ 19 ವೈರಸ್ ಮಕ್ಕಳಲ್ಲಿ ನಿಗೂಢ ಲಕ್ಷಣಗಳನ್ನು ಹೊರಹಾಕುತ್ತಿದೆ’ ಎನ್ನುತ್ತಾರೆ, ರಮೇಶ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next