Advertisement
ಈ ಸೆಕ್ಷನ್‌ಗಳು ಏನು ಹೇಳುತ್ತವೆ, ಇದನ್ನು ಯಾವಾಗ, ಹೇಗೆ ಬಳಸಲಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ:
ಮಾರಣಾಂತಿಕ ಕಾಯಿಲೆ ಅಥವಾ ಸೋಂಕನ್ನು ಇತರರಿಗೆ ಹರಡದಂತೆ ಎಚ್ಚರಿಕೆ ವಹಿಸದೆ, ಬೇಜವಾಬ್ದಾರಿ ವಹಿಸುವವರ ಮೇಲೆ ಐಪಿಸಿಯ 269ನೇ ವಿಧಿಯನ್ನು ಪ್ರಯೋಗಿಸಲಾಗುತ್ತದೆ. ಇನ್ನು, ಐಪಿಸಿ 270ನೇ ವಿಧಿಯು ಪ್ರಜಾದ್ರೋಹಕ್ಕೆ ಸಂಬಂಧಿಸಿದ್ದಾಗಿದೆ. ತನಗೆ ಮಾರಣಾಂತಿಕ ಕಾಯಿಲೆ ಇರುವುದು ತಿಳಿದಿದ್ದರೂ ಉಳಿದ ಪ್ರಜೆಗಳಿಗೆ ಹರಡುವಂಥ ನಡೆಯನ್ನು ಅನುಸರಿಸಿದ್ದಕ್ಕಾಗಿ ಇದರನ್ವಯ ಪ್ರಯೋಗ ದಾಖಲಿಸಬಹುದಾಗಿದೆ.
Related Articles
ಸೋಂಕು ಹರಡುವವರ ವಿರುದ್ಧ ಬಳಸಲಾಗುವ ಸೆಕ್ಷನ್ 269, 270 ಹೊರತಾಗಿ ಸೆಕ್ಷನ್ 188 ಅನ್ನೂ ದಾಖಲಿಸಬಹುದಾಗಿದೆ. ಸರಕಾರದ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಇದನ್ನು ಬಳಸಲಾಗುತ್ತದೆ. ಉದಾಹರಣೆಗೆ, ಈಗ ದೇಶದೆಲ್ಲೆಡೆ ಲಾಕ್‌ಡೌನ್ ಪರಿಸ್ಥಿತಿ ಇದ್ದು ಈ ನಿಬಂಧನೆಯನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಸೆಕ್ಷನ್ 188 ಬಳಸಬಹುದು.
Advertisement
ಶಿಕ್ಷೆಯ ಪ್ರಮಾಣ ಹೇಗೆ?ಐಪಿಸಿ 269ನೇ ವಿಧಿಯನ್ವಯ ಅಪರಾಧಿಗಳಿಗೆ 6 ತಿಂಗಳು ಜೈಲು ಅಥವಾ ದಂಡ ವಿಧಿಸಬಹುದು. ವಿಶೇಷ ಸಂದರ್ಭ ಗಳಲ್ಲಿ ಇವೆರಡನ್ನೂ ವಿಧಿಸಬಹುದು. ಐಪಿಸಿ 270ನೇ ವಿಧಿಯನ್ವಯ ಎರಡು ವರ್ಷ ಜೈಲು ಅಥವಾ ದಂಡ ವಿಧಿಸಬಹುದು. ಕೆಲವೊಮ್ಮೆ ಇವೆರಡನ್ನೂ ಸೇರಿಸಿ ಶಿಕ್ಷೆ ಪ್ರಕಟಿಸಬಹುದು. ಹಿಂದಿನ ಪ್ರಕರಣಗಳು
1886ರಲ್ಲಿ ವ್ಯಕ್ತಿಯೊಬ್ಬ ತನಗೆ ಕಾಲರಾ ಇದ್ದರೂ ರೈಲಿನಲ್ಲಿ ಪ್ರಯಾಣಿಸಿದ್ದಕ್ಕೆ ಆತನ ವಿರುದ್ಧ ಸೆಕ್ಷನ್ 269ರ ಅನ್ವಯ ಮದ್ರಾಸ್ ಹೈಕೋರ್ಟ್ ಶಿಕ್ಷೆ ಜಾರಿಗೊಳಿಸಿತ್ತು. 2015ರಲ್ಲಿ ಮ್ಯಾಗಿ ನೂಡಲ್ಸ್ ಬಗ್ಗೆ ಜಾಹೀರಾತು ನೀಡಿದ್ದಕ್ಕೆ ಬಾಲಿವುಡ್ ನಟ ನಟಿಯರಾದ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್, ಪ್ರೀತಿ ಝಿಂಟಾ ಹಾಗೂ ನೆಸ್ಲೆ ಕಂಪನಿಯ ಇಬ್ಬರು ಅಧಿಕಾರಿಗಳ ವಿರುದ್ಧ ಸೆಕ್ಷನ್ 270, 273 (ಅಪಾಯಕಾರಿ ತಿನಿಸು ಮಾರಾಟಕ್ಕೆ ಸಹಕಾರ) ಮತ್ತು 420 (ಮೋಸ) ಪ್ರಕಾರ ಕೇಸ್ ದಾಖಲಾಗಿತ್ತು.