Advertisement

ಕೋವಿಡ್ ತಪಾಸಣೆ ನೆಗೆಟಿವ್ ಎಂದು ಖುಷಿಯಲ್ಲಿ ಮನೆಗೆ ಬಂದವನಲ್ಲಿ ಪಾಸಿಟಿವ್

05:47 PM Apr 30, 2020 | Hari Prasad |

ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್‌ ಬಂದಿದೆ ಎಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದ ವ್ಯಕ್ತಿಗೆ ಮತ್ತೆ ಕರೆ ಮಾಡಿದ ವೈದ್ಯರು ನಿಮಗೆ ಕೋವಿಡ್ ಸೋಂಕು ತಗಲಿದೆ ಎಂದು ತಿಳಿಸಿ ಆಸ್ಪತ್ರೆಗೆ ದಾಖಲಿಸಿಕೊಂಡಿರುವ ಘಟನೆ ಜಲಂಧರ್‌ನಲ್ಲಿ ನಡೆದಿದೆ.

Advertisement

ಜಲಂಧರ್‌ ಸಿವಿಲ್‌ ಆಸ್ಪತ್ರೆಗೆ ದಾಖಲಾಗಿದ್ದ 25 ವರ್ಷದ ವ್ಯಕ್ತಿಯಲ್ಲಿ ಕೋವಿಡ್ 19 ವೈರಸ್ ಸೋಂಕಿನ ಲಕ್ಷಣಗಳು ಪತ್ತೆಯಾಗಿಲ್ಲವೆಂಬ ಕಾರಣಕ್ಕೆ ವೈದ್ಯರು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು ಇದನ್ನು ಕೇಳಿದ ಆತನೂ ಖುಷಿಯಿಂದ ಮನೆಗೆ ಹೋಗಿದ್ದ.

ಬಳಿಕ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಸಂತೋಷ ಹಂಚಿಕೊಂಡ ಕೆಲವೇ ಕೆಲ ಗಂಟೆಗಳ ಬಳಿಕ ವಿಷಯ ತಿಳಿಸಿರುವ ವೈದ್ಯರು, ನಿಮಗೆ ಕೋವಿಡ್ ಸೋಂಕಿರುವುದರಿಂದ ಮತ್ತೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ.

ಆರಂಭದಲ್ಲಿ ಕೋವಿಡ್ ಲಕ್ಷಣ ಪತ್ತೆಯಾಗದಿದ್ದರೂ, ಬಳಿಕ ಬಂದ ವೈದ್ಯಕೀಯ ವರದಿಯಲ್ಲಿ ಈ ವೈರಸ್ ಪಾಸಿಟಿವ್‌ ಇರುವುದು ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಈ ಘಟನೆಯ ಲೋಪಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next