ಬೀಜಿಂಗ್: ಕೋವಿಡ್ ವೈರಸ್ ಗೆ ತುತ್ತಾದ ಮನುಷ್ಯ ಏಕೆ ಸಾವನ್ನಪ್ಪುತ್ತಾನೆ ಎಂಬುದಕ್ಕೆ ಚೀನದ ವಿಜ್ಞಾನಿಗಳು ಕಾರಣಗಳನ್ನು ಪತ್ತೆಹಚ್ಚಿದ್ದಾರೆ.
ದೇಹದಲ್ಲಿನ ಪ್ರತಿ ರೋಧಕಗಳ ಅತಿಚಲನಶೀಲ ಉತ್ಸಾಹವೇ, ಸಾರ್ಸ್ ಕೋವ್-2 ವೈರಾಣುಗಳನ್ನು ಶ್ವಾಸಕೋಶದೊಳಕ್ಕೆ ಆಹ್ವಾನಿಸಲು ಪ್ರೇರೇಪಿಸುತ್ತವೆ ಎಂದಿದ್ದಾರೆ.
ವೈರಾಣುಗಳು ಹಂತ ಹಂತವಾಗಿ ಜೀವಕೋಶಗಳನ್ನು ಆಕ್ರಮಿಸಿಕೊಂಡಂತೆ, ಸೋಂಕು ಹೆಚ್ಚಾಗಿ, ಸೋಲನ್ನಪ್ಪುತ್ತವೆ. ಇದರಿಂದಾಗಿ ಇನ್ನಷ್ಟು ಜೀವಕೋಶಗಳು ಶ್ವಾಸಕೋಶದೊಳಗೆ ಒಂದೇ ಸಮನೆ ನುಗ್ಗಿ ಬಂದು ‘ಸೈಕೋಟಿನ್ ಬಿರುಗಾಳಿ’ಯನ್ನು ಸೃಷ್ಟಿಸುತ್ತವೆ.
ಸೈಕೊಟಿನ್‌ಗಳು ಹೆಚ್ಚು ಬಿಡುಗಡೆಯಾದಂತೆ, ಶ್ವಾಸಕೋಶದಲ್ಲಿ ಉರಿಯೂತ ಕಾಣಿಸಿಕೊಂಡು, ಉಸಿರಾಟಕ್ಕೆ ಅಡಚಣೆ ಆಗುತ್ತದೆ ಎಂದು ‘ಫ್ರಾಂಟಿಯರ್ಸ್ ಇನ್ ಪಬ್ಲಿಕ್ ಹೆಲ್ತ್’ ಎಂಬ ಮ್ಯಾಗಜಿನ್ ವರದಿಯಲ್ಲಿ ಹೇಳಲಾಗಿದೆ.
ಏನಿದು ಸೈಕೋಟಿನ್ ಬಿರುಗಾಳಿ?: ಇದು ಬಿಳಿ ರಕ್ತ ಕಣಗಳ ಅತಿಯಾದ ಚಲನಶೀಲ. ಅದು ಹೆಚ್ಚಿದಂತೆ ಸೈಕೋಟಿನ್‌ಗಳು ಅಪಾರ ಪ್ರಮಾಣದಲ್ಲಿ ಬಿಡುಗಡೆಯಾಗುತ್ತವೆ. ಆದರೆ, ಕೆಲವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ.
ಶ್ವಾಸಕೋಶ ಗಾಯ: ಸೈಕೋಟಿನ್‌ಗಳು ಲಿಂಪೋಸೈಟ್ ಮತ್ತು ನ್ಯೂಟ್ರೋಫಿಲ್ಸ್ ಎಂಬ ಕೋಶಗಳನ್ನೂ ಶ್ವಾಸಕೋಶದೊಳಗೆ ಬೇಗನೆ ಆಕರ್ಷಿಸುತ್ತವೆ. ಇದರಿಂದಾಗಿ ಶ್ವಾಸಕೋಶದ ಒಳಭಾಗದಲ್ಲಿ ಗಾಯ ಕಾಣಿಸಿಕೊಳ್ಳುತ್ತದೆ. ಬಿರುಗಾಳಿ ಹೆಚ್ಚಾದಂತೆ, ಜ್ವರ, ರಕ್ತನಾಳಗಳ ಅತಿಯಾದ ಸೋರಿಕೆ, ರಕ್ತಹೆಪ್ಪುಗಟ್ಟುವಿಕೆ ಸಮಸ್ಯೆಗಳು ಸೃಷ್ಟಿಯಾಗಿ, ರೋಗಿ ಗಂಭೀರ ಸ್ಥಿತಿಯನ್ನು ತಲುಪುತ್ತಾನೆ.