Advertisement

ಕಾಡಿನಲ್ಲಿ ಇನ್ನೂ ಭಯಾನಕ ವೈರಸ್‌ಗಳುಂಟು: ಝೆಂಗ್ಲಿ

02:32 AM May 29, 2020 | Hari Prasad |

ಬೀಜಿಂಗ್‌: ನಾವು ಇಲ್ಲಿಯ ತನಕ ನೋಡಿರುವ ವೈರಸ್‌ಗಳು ಕೇವಲ ಅತೀ ಅಲ್ಪವಷ್ಟೇ. ಭಯಾನಕ, ಜೀವಕ್ಕೆ ನಡುಕ ಹುಟ್ಟಿಸುವ ವೈರಸ್‌ಗಳು ಕಾಡಿನಲ್ಲಿ ಇನ್ನೂ ಇವೆ.

Advertisement

ಜಗತ್ತಿನ ಎಲ್ಲ ದೇಶಗಳ ಸಹಕಾರ ದಿಂದಷ್ಟೇ ಅವುಗಳನ್ನು ಸಂಶೋಧಿಸಿ, ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಚೀನದ ವೈರಾಣು ತಜ್ಞೆ ಶಿ ಝೆಂಗ್ಲಿ ಹೇಳಿದ್ದಾರೆ.

ಬಾವಲಿಗಳಲ್ಲಿನ ವೈರಸ್‌ ಸಂಶೋಧನೆಯಿಂದಲೇ ಖ್ಯಾತಿಪಡೆದ ಶಿ ಝೆಂಗ್ಲಿ, ‘ಮುಂದಿನ ಪೀಳಿಗೆಗಳನ್ನು ತಬ್ಬಿಬ್ಬು ಮಾಡುವಂಥ ವೈರಾಣುಗಳನ್ನು ತಡೆಯಬೇಕಾದರೆ, ನಾವು ಈಗಲೇ ಕಾಡಿನಲ್ಲಿರುವ ಮೃಗಗಳಲ್ಲಿನ ವೈರಸ್‌ಗಳ ಬಗ್ಗೆ ಸಂಶೋಧನೆ ಆರಂಭಿಸಬೇಕು. ಇಲ್ಲದಿದ್ದರೆ ಮನುಕುಲ ಇನ್ನಷ್ಟು ಆಪತ್ತು ಎದುರಿಸಬೇಕಾಗುತ್ತದೆ’ ಎಂದು ಟಿವಿ ಸಂದರ್ಶನವೊಂದರಲ್ಲಿ ಎಚ್ಚರಿಸಿದ್ದಾರೆ.

ಲ್ಯಾಬ್‌ ಸೃಷ್ಟಿ ಅಲ್ಲ: ‘ನನ್ನ ಜೀವದ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ, ಕೋವಿಡ್ ಯಾವುದೇ ಲ್ಯಾಬ್‌ನ ಸೃಷ್ಟಿ ಅಲ್ಲ. ಅದು ನೈಸರ್ಗಿಕವಾಗಿ ಪ್ರಾಣಿಗಳಿಂದ ದಾಟಿದೆ. ಈ ಬಗೆಗಿನ ಸುಳ್ಳು ಸುದ್ದಿಗಳು ನಿಜಕ್ಕೂ ಬೇಸರ ಹುಟ್ಟಿಸುತ್ತವೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next