Advertisement

ಕೋವಿಡ್ 19 ವೈರಸ್ ವೈರಸ್‌ದಶಾವತಾರ ; ಎ2ಎ ವೈರಾಣು ಪ್ರಭಾವವೇ ಹೆಚ್ಚು

08:12 AM Apr 30, 2020 | Hari Prasad |

ಹೊಸದಿಲ್ಲಿ: ಚೀನದಲ್ಲಿ ಮೊದಲು ಕಂಡು ಬಂದ ಕೋವಿಡ್ 19 ವೈರಸ್‌ 10 ವಿಧಗಳಾಗಿ ರೂಪಾಂತರಗೊಂಡಿದೆ.

Advertisement

ಆ ಪೈಕಿ ಎ2ಎ ಎಂಬ ಒಂದು ವಿಧವು ಜಗತ್ತಿನಾದ್ಯಂತ ಹೆಚ್ಚಿನ ಪ್ರದೇಶಗಳಿಗೆ ಹಬ್ಬುವ ಮೂಲಕ ಪ್ರಬಲ ಕಣವಾಗಿ ಮಾರ್ಪಾಡಾಗಿದೆ ಎಂದು ಭಾರತೀಯ ಸಂಸ್ಥೆಯೊಂದರ ಜಾಗತಿಕ ಅಧ್ಯಯನ ವರದಿ ಹೇಳಿದೆ.

ಪಶ್ಚಿಮ ಬಂಗಾಲದ ಕಲ್ಯಾಣಿಯಲ್ಲಿನ ನ್ಯಾಷನಲ್‌ ಇನ್‌ ಸ್ಟಿಟ್ಯೂಟ್‌ ಆಫ್ ಬಯೋ ಮೆಡಿಕಲ್‌ ಜೆನಾಮಿಕ್ಸ್‌ ಎಂಬ ಸಂಸ್ಥೆಯ ನಿಧಾನ್‌ ಬಿಸ್ವಾಸ್‌ ಮತ್ತು ಪಾರ್ಥ ಮಜುಂದಾರ್‌ ಅವರೇ ಈ ಅಧ್ಯಯನ ನಡೆಸಿದವರು. ಈ ಅಧ್ಯಯನ ವರದಿಯು ಸದ್ಯದಲ್ಲೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಪ್ರಕಟಿಸುವ ವೈದ್ಯಕೀಯ ಜರ್ನಲ್ ನಲ್ಲಿ ಪ್ರಕಟವಾಗಲಿದೆ.

ಎ2ಎ ರೂಪಾಂತರದ ವೈರಸ್‌ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವೇಗವಾಗಿ ಮಾನವನ ಶ್ವಾಸಕೋಶದೊಳಕ್ಕೆ ಪ್ರವೇಶ ಪಡೆಯುತ್ತದೆ. ಈ ಹಿಂದೆ ಅಂದರೆ 10 ವರ್ಷಗಳ ಹಿಂದೆ ವಿಶ್ವದ 800 ಮಂದಿಯನ್ನು ಬಲಿಪಡೆದಿದ್ದ ಸಾರ್ಸ್‌-ಕೋವ್‌ ವೈರಸ್‌ ಕೂಡ ಶ್ವಾಸಕೋಶವನ್ನು ಕ್ಷಿಪ್ರವಾಗಿ ಪ್ರವೇಶಿಸುವ ಸಾಮರ್ಥ್ಯ ಹೊಂದಿತ್ತಾದರೂ, ಅದು ಎ2ಎಯಷ್ಟು ಪ್ರಬಲವಾಗಿರಲಿಲ್ಲ ಎಂದೂ ವರದಿ ಹೇಳಿದೆ.

ಈ ವರದಿಯು ಕೋವಿಡ್ 19 ವೈರಸ್ ಗೆ ಲಸಿಕೆ ಅಭಿವೃದ್ಧಿಪಡಿಸುವವರಿಗೆ ನೆರವಾಗಲಿದೆ ಎಂದು ಹೇಳಲಾಗಿದೆ.
ಕೋವಿಡ್ 19 ವೈರಸ್ ‌ನ ಪೂರ್ವದ ಹಂತ “0′ ದಿಂದ ಈ ಹತ್ತು ವಿಧಗಳು ಸೃಷ್ಟಿಯಾಗಿವೆ. ಇವುಗಳು ರೂಪಾಂತರಗೊಳ್ಳಲು 4 ತಿಂಗಳು ತೆಗೆದುಕೊಂಡಿವೆ. ಮಾರ್ಚ್‌ ಅಂತ್ಯದಲ್ಲಿ ಎ2ಎ ವಿಧವು ಜಗತ್ತಿನಾದ್ಯಂತ ಇತರೆ ಎಲ್ಲ ವಿಧಗಳನ್ನೂ ಹಿಂದಿಕ್ಕಿತು.

Advertisement

ಕೋವಿಡ್ 19 ವೈರಸ್ ‌ನ ಪ್ರಬಲ ಹಾಗೂ ಬಲಿಷ್ಠ ರೂಪಾಂತರ ಎಂಬ ಹೆಸರು ಪಡೆಯಿತು ಎಂದು ಮಜುಂದಾರ್‌ ಹೇಳಿದ್ದಾರೆ. ಜತೆಗೆ, 2019ರ ಡಿಸೆಂಬರ್‌ನಿಂದ 2020ರ ಎಪ್ರಿಲ್‌ 6ರವರೆಗೆ 55 ದೇಶ ಗಳ 3,600 ಕೋವಿಡ್ 19 ವೈರಸ್‌ ಸೋಂಕಿತರ ಆರ್‌ಎನ್‌ಎಗಳನ್ನು ಸಂಗ್ರಹಿಸಿ ಈ ಅಧ್ಯಯನ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next