Advertisement

ಕೋವಿಡ್ 19: ವೈರಲ್‌ ಆಗುತ್ತಿದೆ ವಿಡಂಬನೆಯ ಸಂದೇಶಗಳು

12:16 PM Apr 13, 2020 | sudhir |

ಉಡುಪಿ: ವಿಶ್ವದೆಲ್ಲೆಡೆ ಈಗ ಕೋವಿಡ್ 19 ಉಂಟು ಮಾಡಿರುವ ಹಾವಳಿ ಆತಂಕ ಸೃಷ್ಟಿಸಿದೆ. ಇದರ ಮಧ್ಯೆ ಹಾಸ್ಯ ಚಟಾಕಿಗಳಿಗೇನೂ ಬರವಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಕೋವಿಡ್ 19ಕ್ಕೆ ಸಂಬಂಧಿಸಿದ ಹಲವು ಸಂಗತಿಗಳ ವಿಡಂಬನೆಯ ಪೋಸ್ಟ್‌ಗಳು ನಿತ್ಯವೂ ಹರಿದಾಡುತ್ತಿವೆ.

Advertisement

ವಾಟ್ಸಾಪ್‌ ಫೇಸ್‌ಬುಕ್‌, ಟ್ವೀಟರ್‌ಗಳಲ್ಲಿ ಸಾಕಷ್ಟು ಸಂದೇಶಗಳನ್ನು ಹಂಚಿಕೊಂಡು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದರ ಜತೆಯಲ್ಲಿ ಹಾಸ್ಯ ಚಟಾಕಿಗಳಿಗೇನು ಕಮ್ಮಿಯಿಲ್ಲ. ಲಾಕ್‌ಡೌನ್‌ ಆಧಾರಿಸಿ ಸುತ್ತಮುತ್ತಲು ನಡೆಯುವ ವಿದ್ಯಾಮಾನಗಳ ಕುರಿತು ಹಾಸ್ಯ, ನಗೆ ತರಿಸುವ ವಿಡಂಬನೆಯ ಪೋಸ್ಟ್‌ಗಳು ಜಾಲತಾಣಗಳಲ್ಲಿ ಬರುತ್ತಿವೆ. ಲಾಕ್‌ಡೌನ್‌ ಮೂಡ್‌ನ‌ಲ್ಲಿ ಮನೆಯಲ್ಲಿ ಉಳಿದುಕೊಂಡ ಮಂದಿ ರಂಜನೆಗಳ ಮೂಲಕ ಸಮಯ ಕಳೆಯುತ್ತಿದ್ದಾರೆ.

ಹಾಸ್ಯ ಬರೆಹ, ವೀಡಿಯೋ ತುಣುಕು, ಸಿನೆಮಾ, ಹಾಸ್ಯ ನಟರ ವಿವಿಧ ಭಂಗಿಯ ದೃಶ್ಯಾವಳಿಗಳ ಟ್ರೋಲ್‌ಗ‌ಳನ್ನು ಹರಿದು ಬಿಟ್ಟು ರಂಜನೆಯ ಸುಖ ಅನುಭವಿಸುತ್ತಿದ್ದಾರೆ. ಕೋವಿಡ್ 19 ಪೀಡಿತರ ಅಂಕಿ ಸಂಖ್ಯೆಗಳು ಒಲಿಂಪಿಕ್ಸ್‌ ಮೆಡಲ್‌ ಪಟ್ಟಿಯಂತೆ ಎಂದ, ತೆಂಗಿನಕಾಯಿ ಗೆರಟೆ ಮುಖಕ್ಕೆ ಕಟ್ಟಿಕೊಂಡ ವ್ಯಕ್ತಿಯ ಚಿತ್ರ, ದಟ್ಟ ಹೊಗೆ ಉಗುಳುವ ಬಸ್ಸಿನ ಬಗ್ಗೆ ಕೋವಿಡ್ 19 ವೈರಸ್‌ಗೆ ಮದ್ದು ಸಿಂಪಡಿಸುವುದು, ಬರೆದಿ¨ªೆಲ್ಲ ಕವನ ಅಲ್ಲ, ಕೆಮ್ಮಿ¨ªೆಲ್ಲ ಕೋವಿಡ್ 19 ಇತ್ಯಾದಿ ಬರೆಹಗಳು, ಹೀಗೆ ಅನೇಕ ತುಣುಕುಗಳ ಜತೆ ಭಿನ್ನ ಭಾಷೆಗಳ ಹಾಸ್ಯ ಕಲಾವಿದರ ಟ್ರೋಲ್‌ಗ‌ಳ ವಿಡಂಬನೆಗಳು ಹೆಚ್ಚು ವೈರಲ್‌ ಆಗುತ್ತಿವೆ. ಕುಡುಕರು ಹತಾಶ ಪರಿಸ್ಥಿತಿ, ಮನೆಯಲ್ಲಿ ಇರೋ ಗಂಡ-ಹೆಂಡತಿಯರ ಬಗೆಗಿನ ಸಂಗತಿಗಳನ್ನು ಕಟ್ಟಿಕೊಡುವ ಹಲವು ಮನೋರಂಜನೆಗಳು, ಟ್ರೋಲ್‌ಗ‌ಳೂ ಇವೆ.

Advertisement

Udayavani is now on Telegram. Click here to join our channel and stay updated with the latest news.

Next