ನವದೆಹಲಿ: ಹಲವು ದೇಶಗಳಲ್ಲಿ ಮಂಗನಗುಳ್ಳೆ (ಮಂಕಿಪಾಕ್ಸ್) ಕಾಯಿಲೆ ಶುರುವಾಗಿದೆ. ಇದರ ಬೆನ್ನಲ್ಲೇ ಕೆಲವರು ಊಹಾಪೋಹಗಳನ್ನು ಹಬ್ಬಿಸಲು ಶುರು ಮಾಡಿದ್ದಾರೆ.
ಮಂಗನಗುಳ್ಳೆ ರೋಗಕ್ಕೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಸಿದ್ಧಪಡಿಸಿದ ಅಸ್ಟ್ರಾಝೆನೆಕಾ ಲಸಿಕೆಯೇ ಕಾರಣ ಎಂಬ ವದಂತಿ ಜೋರಾಗಿದೆ!
ಇದೇ ಲಸಿಕೆಯನ್ನು ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ನೀಡಲಾಗುತ್ತಿದೆ. ಈ ವದಂತಿಯನ್ನು ಹಬ್ಬಿಸುತ್ತಿರುವ ಹಲವರಲ್ಲಿ ಮುಖ್ಯರಾದವರು ಇನ್ಫೋವಾರ್‌ನ ಅಲೆಕ್ಸ್ ಜೋನ್ಸ್. ಇವರು ಸುಳ್ಳುಸುದ್ದಿಯನ್ನು ಹಬ್ಬಿಸುವುದರಲ್ಲಿ ನಿಸ್ಸೀಮರು ಎಂದೇ ಖ್ಯಾತರಾಗಿದ್ದಾರೆ.
ಈ ಲಸಿಕೆಯಲ್ಲಿ ವಿಜ್ಞಾನಿಗಳು ಚಿಂಪಾಂಜಿಯ ವಂಶವಾಹಿಯನ್ನು ಸೇರಿಸಿರುವುದೇ ಮಂಕಿಪಾಕ್ಸ್ ಕಾಯಿಲೆ ಹಬ್ಬಲು ಕಾರಣ ಎನ್ನುವುದು ಅವರ ವಾದ.
ಇನ್ನೂ ಕೆಲವರ ಪ್ರಕಾರ ಕೊರೊನಾ ಲಸಿಕೆಯನ್ನು ಮಂಗನ ಜೀವಕೋಶಗಳ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಇನ್ನು ಕೆಲವರ ಪ್ರಕಾರ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಎಲ್ಲದ್ದಕ್ಕೆ ಕಾರಣ!