Advertisement

ನಿರೀಕ್ಷೆ ಹುಸಿಮಾಡಿದ ಆಕ್ಸ್‌ಫ‌ರ್ಡ್‌ ಲಸಿಕೆ ಪ್ರಯೋಗ

01:44 AM May 22, 2020 | Hari Prasad |

ಲಂಡನ್‌: ಕೋವಿಡ್ ಲಸಿಕೆ ಸಂಶೋಧನೆಯಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಆಕ್ಸ್‌ ಫ‌ರ್ಡ್‌ ಮುಗ್ಗರಿಸಿದೆ.

Advertisement

ಕೋತಿಗಳ ಮೇಲೆ ಲಸಿಕೆ ಪ್ರಯೋಗಿಸಿದ್ದ ಆಕ್ಸ್‌ಫ‌ರ್ಡ್‌ನ ತಜ್ಞರು, ನಿರೀಕ್ಷಿತ ಫ‌ಲಿತಾಂಶ ಸಿಗದೆ ನಿರಾಶೆ ಅನುಭವಿಸಿದ್ದಾರೆ.

‘ಭಾರತ ಮೂಲದ 6 ರೀಸಸ್‌ ಮಕಾಕ್‌ಗಳ ಮೇಲೆ ಪ್ರಯೋಗಿಸಿದ್ದ ಲಸಿಕೆ ಯಾವುದೇ ಪರಿಣಾಮ ಬೀರುತ್ತಿಲ್ಲ. ನಾವು ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ’ ಎಂದು ಇಂಗ್ಲೆಂಡ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಸ್ಪಷ್ಟಪಡಿಸಿದ್ದಾರೆ.

‘ಮಾಡರ್ನ್’ ಯಶಸ್ಸು: ಇನ್ನೊಂದೆಡೆ, ಅಮೆರಿಕದ ಬಯೋಟೆಕ್ನಾಲಜಿ ಸಂಸ್ಥೆ ಮಾಡರ್ನ್ ಇಂಕ್‌ನ ಲಸಿಕೆ ಸಫ‌ಲತೆ ಕಾಣುತ್ತಿದೆ. 8 ಸೋಂಕಿತರ ಮೇಲೆ ಪ್ರಯೋಗ ನಡೆದಿದ್ದು, ದೈಹಿಕ ಪರಿಣಾಮಗಳ ಬಗ್ಗೆ ಅಧ್ಯಯನ ಸಾಗಿದೆ. ಕೆಲವರಲ್ಲಿ ನೋವು, ಇಂಜೆಕ್ಷನ್‌ ಚುಚ್ಚಿದ ಜಾಗ ಕೆಂಪಾಗಿರುವುದು, ಜ್ವರ ಇತ್ಯಾದಿ ಅಡ್ಡ ಪರಿಣಾಮಗಳು ಕಂಡುಬಂದಿದ್ದು, ಇದು ಲಸಿಕೆಯ ಸಫ‌ಲತೆಯನ್ನು ಸೂಚಿಸುತ್ತವೆ ಎನ್ನಲಾಗುತ್ತಿದೆ.

ಥಾಯ್‌ ಪ್ರವೇಶ: ಇನ್ನೊಂದೆಡೆ ಥಾಯ್ಲೆಂಡ್‌ ಕೂಡ ಲಸಿಕೆ ಓಟಕ್ಕೆ ಜಿಗಿದಿದ್ದು, ಇಲಿಗಳ ಮೇಲಿನ ಪ್ರಯೋಗಕ್ಕೆ ಆರಂಭಿಕ ಯಶಸ್ಸು ಸಿಕ್ಕಿದೆ. ಥಾಯ್‌ ರಾಷ್ಟ್ರೀಯ ಲಸಿಕಾ ಸಂಸ್ಥೆ ಶೀಘ್ರವೇ ಕೋತಿಗಳ ಮೇಲೆ ಪ್ರಯೋಗ ಮುಂದುವರಿಸಲಿದೆ.

Advertisement

ಅಮೆರಿಕ- ಜರ್ಮನಿ ಜಂಟಿ: ಅಮೆರಿಕ ಮೂಲದ ಫಿಫೈಜರ್‌, ಜರ್ಮನಿಯ ಬಿಎನ್‌ಟೆಕ್‌ ಸಂಸ್ಥೆಯ ಜತೆಗೂಡಿ ನಡೆಸುತ್ತಿರುವ ಸಂಶೋಧನೆ, ಮಾನವ ಪ್ರಯೋಗಕ್ಕೆ ಸಜ್ಜಾಗಿದ್ದು, 160 ಮಂದಿ ಪರೀಕ್ಷೆಗೊಳಪಡಲಿದ್ದಾರೆ. ಈಗಾಗಲೇ ಪ್ರಪಂಚದಲ್ಲಿ 100ಕ್ಕೂ ಅಧಿಕ ಸಂಶೋಧನೆಗಳು ಚಾಲ್ತಿಯಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next