Advertisement

ಒಂದು ಮಿನರಲ್ ವಾಟರ್ ಬಾಟಲ್ ರೇಟ್ ಗಿಂತಲೂ ಕಡಿಮೆ ಬೆಲೆಗೆ ಲಭಿಸಲಿದೆ ‘ಕೊವ್ಯಾಕ್ಸಿನ್!’

10:30 PM Aug 04, 2020 | Hari Prasad |

ತೆಲಂಗಾಣ: ಕೋವಿಡ್ 19 ಸೋಂಕು ವಿಶ್ವವ್ಯಾಪಿಯಾಗಿರುವ ಈ ಸಂದರ್ಭದಲ್ಲಿ ಎಲ್ಲರ ದೃಷ್ಟಿಯೂ ಈ ಮಹಾಮಾರಿಗೆ ಸಿದ್ಧಗೊಳ್ಳಲಿರುವ ಲಸಿಕೆಯ ಕಡೆಗೆ ನೆಟ್ಟಿದೆ.

Advertisement

ವಿಶ್ವಾದ್ಯಾಂತ ಹಲವಾರು ವೈದ್ಯಕೀಯ ಸಂಸ್ಥೆಗಳು ಹಾಗೂ ಔಷಧಿ ತಯಾರಿ ಕಂಪೆನಿಗಳು ಕೋವಿಡ್ 19 ಸೋಂಕಿಗೆ ಲಸಿಕೆ ಕಂಡುಹುಡುಕುವ ಸಿದ್ಧತೆಗಳಲ್ಲಿವೆ ಮತ್ತು ಇವುಗಳಲ್ಲಿ ಹಲವಾರು ಅಂತಿಮ ಪ್ರಯೋಗದ ಹಂತಕ್ಕೆ ಬಂದಿವೆ.

ಈ ರೀತಿಯಾಗಿ ಭಾರತದಲ್ಲಿ ಬಹಳ ನಿರೀಕ್ಷೆ ಮೂಡಿಸಿರುವುದು ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸುತ್ತಿರುವ ‘ಕೊವ್ಯಾಕ್ಸಿನ್’ ಎಂಬ ಲಸಿಕೆ. ಈ ಲಸಿಕೆ ಪ್ರಯೋಗ ಯಶಸ್ವಿಯಾಗಿ ಮಾರುಕಟ್ಟೆಗೆ ಬಂದರೆ ಈ ‘ಕೊ ವ್ಯಾಕ್ಸಿನ್’ ಒಂದು ನೀರಿನ ಬಾಟಲ್ ದರಕ್ಕಿಂತಲೂ ಕಡಿಮೆ ದರದಲ್ಲಿ ಜನರಿಗೆ ಲಭಿಸಲಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.

ಪ್ರಥಮ ಹಂತದಲ್ಲಿ ಡೋಸ್ ಒನ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿರುವ ಕೊವ್ಯಾಕ್ಸಿನ್ ಲಸಿಕೆಯ ದರಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಎಂ.ಡಿ. ಕೃಷ್ಣ ಯೆಲ್ಲಾ ಅವರು ಈ ಕುತೂಹಲಕಾರಿ ಮಾಹಿತಿಯನ್ನು ನೀಡಿದ್ದಾರೆ.

ಪ್ರಯೋಗಾಲಯ ಪರೀಕ್ಷೆ ಹಾಗೂ ಮೊದಲ ಹಂತದ ಕ್ಲಿನಿಕಲ್ ಪರೀಕ್ಷಾ ಹಂತವನ್ನು ಈ ಲಸಿಕೆ ಇದೀಗ ಯಶಸ್ವಿಯಾಗಿ ಪೂರೈಸಿದೆ. ಎಲ್ಲವೂ ಸುಗಮವಾಗಿ ನಡೆದರೆ 2021ರಲ್ಲಿ ಈ ಲಸಿಕೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Advertisement

ಮತ್ತು ಪ್ರಥಮ ಹಂತದ ಪರೀಕ್ಷೆಯಲ್ಲಿ ಈ ಲಸಿಕೆಯನ್ನು ಪಡೆದುಕೊಂಡಿರುವ ವ್ಯಕ್ತಿಗಳಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮಗಳು ಕಂಡುಬಂದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ. ಇದೀಗ ಇವರೆಲ್ಲರಿಗೆ ಈ ಲಸಿಕೆಯ ಎರಡನೇ ಡೋಸ್ ನೀಡಲಾಗುತ್ತಿದೆ.

ಮತ್ತು ಕೊ ವ್ಯಾಕ್ಸಿನ್ ಲಸಿಕೆಯ ಎರಡನೇ ಹಂತದ ಪ್ರಯೋಗ ಸೆಪ್ಟಂಬರ್ ಮೊದಲ ವಾರದಲ್ಲಿ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ.

ಅಮೆರಿಕಾ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಈ ಲಸಿಕೆ ತಯಾರಿಯಲ್ಲಿ ಬಹಳಷ್ಟು ಪ್ರೋತ್ಸಾಹವನ್ನು ನೀಡುತ್ತಿದೆ ಎಂದು ಕೃಷ್ಣ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next