Advertisement

ಕೋವಿಡ್ 19 ವೈರಸ್ ಗೆ ಸೆಪ್ಟಂಬರ್ ನಲ್ಲಿ ಸಿದ್ಧಗೊಳ್ಳಿದೆಯೇ ಔಷಧಿ? ತಜ್ಞರು ಹೇಳುವುದೇನು?

11:11 AM Apr 14, 2020 | Hari Prasad |

ಲಂಡನ್: ಜಗತ್ತನ್ನೇ ಕಂಗೆಡಿಸಿರುವ ಅಗೋಚರ ವೈರಾಣು ಕೋವಿಡ್ 19ಗೆ ಸದ್ಯಕ್ಕಂತೂ ಯಾವುದೇ ಸಿದ್ಧ ಔಷಧವಿಲ್ಲ. ಮನುಷ್ಯನಲ್ಲಿರುವ ಪ್ರತಿರೋಧಕ ಶಕ್ತಿ ಮತ್ತು ಸ್ವಲ್ಪ ಮಟ್ಟಿಗೆ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರವೇ ಕೋವಿಡ್ ವೈರಸ್ ಗೆ ಪ್ರತಿರೋಧ ಒಡ್ಡಲು ಸಾಧ್ಯ ಎನ್ನುವುದು ಗೊತ್ತಾಗಿದೆ.

Advertisement

ಆದರೆ ಈ ಸಾರ್ಸ್ ಮಾದರಿಯ ಭೀಕರ ಸೋಂಕಿಗೆ ಸದ್ಯಕ್ಕೆ ವಿಶ್ವಾದ್ಯಂತ ಔಷಧ ಕಂಡುಹಿಡಿಯಲು ಸುಮಾರು 30 ಪ್ರಾಜೆಕ್ಟ್ ಗಳು ಜಾರಿಯಲ್ಲಿವೆ. ಮುಂಬರುವ ಸೆಪ್ಟಂಬರ್ ವೇಳೆಗೆ ಈ ಮಹಾಮಾರಿ ವೈರಸ್ ಅನ್ನು ಮಣಿಸುವ ಔಷಧಿ ಖಂಡಿತ ಸಿದ್ಧವಾಗಲಿದೆ ಎನ್ನುತ್ತಿದ್ದಾರೆ ಆಕ್ಸ್ ಪರ್ಡ್ ವಿಶ್ವವಿದ್ಯಾನಿಲಯದಲ್ಲಿ  ವ್ಯಾಕ್ಸಿನಾಲಜಿ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ಸಾರಾ ಗಿಲ್ಬರ್ಟ್ ಅವರು.

ಈ ನಿಟ್ಟಿನಲ್ಲಿ ಸಿದ್ಧಗೊಂಡಿರುವ ಕೆಲವೊಂದು ಔಷಧಿಗಳ ಕ್ಲಿನಿಕಲ್ ಟ್ರಯಲ್ ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ಸಾರಾ ಅವರು ಹೇಳಿದ್ದಾರೆ. ಮತ್ತು ಇದನ್ನು ಆದ್ಯತೆಯ ಮೇರೆಗೆ ಮುಗಿಸುವ ಇಚ್ಛೆಯನ್ನೂ ಸಹ ಇವರು ವ್ಯಕ್ತಪಡಿಸಿದ್ದು ಈ ಮೂಲಕ ಮಾರಕ ಮಹಾಮಾರಿಯನ್ನು ಮಣಿಸುವ ಔಷಧಿ ಶೀಘ್ರವೇ ವಿಶ್ವಾದ್ಯಂತ ಕೋವಿಡ್ ಸೋಂಕಿತ ರೋಗಿಗಳಿಗೆ ಸಿಗುವಂತಾಗಬೇಕೆಂಬುದು ಇವರೆಲ್ಲರ ಉದ್ದೇಶವಾಗಿದೆ.

ಯುಕೆ ಔಷಧ ನಿಯಂತ್ರಕ ಮತ್ತು ನೈತಿಕ ಪರಿಶೀಲಕರಿಂದ ಈಗಾಗಲೇ ಸಮ್ಮತಿಯನ್ನು ಪಡೆದುಕೊಂಡಿರುವ ChAdOxl nCOV-19 ಎಂಬ ಔಷಧಿಯನ್ನು ತಮ್ಮ ಮೇಲೆ ಪರೀಕ್ಷಿಸಿಕೊಳ್ಳಲು ಈಗಾಗಲೇ 18 ರಿಂದ 55 ವರ್ಷ ಪ್ರಾಯದ 510 ಸ್ವಯಂಸೇವಕರು ಸಿದ್ಧಗೊಂಡಿದ್ದು ಇವರ ಮೇಲೆ ಈ ಔಷಧಿಯ ಪರೀಕ್ಷೆ ಶೀ‍ಘ್ರವೇ ನಡೆಯಲಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next