ನವ ದೆಹಲಿ : ಕೋವಿಡ್ ಲಸಿಕೆಯ ವಿಚಾರದ ಚರ್ಚೆ ಇನ್ನೂ ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಪಾರದರ್ಶಕವಾದ ಕ್ರಮದಲ್ಲಿಯೇ ಆ್ಯಂಟಿ ಕೋವಿಡ್ 19 ಲಸಿಕೆಗಳನ್ನು ಪೂರೈಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಆಯಾಯ ರಾಜ್ಯಗಳಿಗೆ ಬೇಕಾದಷ್ಟು, ರಾಜ್ಯವಾರು ಜನಸಂಖ್ಯೆ ಹಾಗೂ ಕೋವಿಡ್ ಪಗರಕರಣಗಳು, ಪಾಸಿಟಿವಟಿ ರೇಟ್ ಹಾಗೂ ಪರಿಣಾಮಕಾರಿ ಬಳಕೆ, ಪೋಲು ಪ್ರಮಾಣಗಳ ಆಧಾರದ ಮೇಲೆ ರಾಜ್ಯಗಳಿಗೆ ಕೇಂದ್ರದಿಂದ ಲಸಿಕೆಗಳನ್ನು ನೀಡಲಾಗುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಇದನ್ನೂ ಓದಿ : ಹೀರೋ ಮೊಟೊಕಾರ್ಪ್ ನ ಎಲ್ಲಾ ದ್ವಿಚಕ್ರ ವಾಹನಗಳ ಬೆಲೆ ಜುಲೈ 1ರಿಂದ ಹೆಚ್ಚಳ.!ಮಾಹಿತಿ ಇಲ್ಲಿದೆ
ಕೇಂದ್ರ ಸರ್ಕಾರದ ಲಸಿಕೆ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದೆ. ಹೀಗೆ ಹತ್ತು ಹಲವು ಲಸಿಕೆಯ ಪೂರೈಕೆ ವಿಚಾರದಲ್ಲಿ ಕೇಳಿ ಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಪಾರದರ್ಶಕವಲ್ಲದ ರೀತಿಯಲ್ಲಿ ರಾಜ್ಯಗಳಿಗೆ ಲಸಿಕೆಯನ್ನು ಪೂರೈಕೆಯಾಗಿದೆ. ಲಸಿಕೆ ವಿಚಾರದಲ್ಲಿ ಕೇಳಿ ಬಂದಿರುವ ಆರೋಪಗಳು ಆಧಾರ ರಹಿತವಾಗಿವೆ ಎಂದು ಸಚಿವಾಲಯ ಅಲ್ಲಗೆಳೆದಿದೆ.
ಈ ಕುರಿತ ಹೇಳಿಕೆಯಲ್ಲಿ, ವೈಜ್ಞಾನಿಕ ಮತ್ತು ಪಿಡುಗಿನ ಸ್ವರೂಪ ಆಧರಿಸಿ ಹಾಗೂ ಡಬ್ಲ್ಯೂಎಚ್‌ಒ ಮಾರ್ಗದರ್ಶಿ ಸೂತ್ರಕ್ಕೆ ಅನುಸಾರವಾಗಿ ರಾಷ್ಟ್ರೀಯ ಕೋವಿಡ್ ಲಸಿಕೆ ಅಭಿಯಾನ ರೂಪಿಸಲಾಗಿದೆ ಎಂದಿದೆ.
ವ್ಯವಸ್ಥಿತವಾಗಿ ಲಸಿಕೆ ಅಭಿಯಾನವನ್ನು ಕಾರ್ಯಗತಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಕ್ರಿಯ ಭಾಗವಹಿಸುವಿಕೆ ಆಧಾರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ಗೃಹಸಾಲಗಾರನ ಒಪ್ಪಿಗೆ ಇಲ್ಲದೆ ಬಡ್ಡಿದರ ಬದಲಾಯಿಸಲು ಸಾಧ್ಯವಿಲ್ಲ: ಗ್ರಾಹಕ ಆಯೋಗ