ನವ ದೆಹಲಿ : ಕೋವಿಡ್ ಲಸಿಕೆಗಳು ಸೋಂಕಿನ ಎಲ್ಲಾ ರೂಪಾಂತರಿಗಳ ವಿರುದ್ಧ ಶೇಕಡಾ 97.4 ರಷ್ಟು ಪರಿಣಾಮಕಾರಿತ್ವವನ್ನು ಹೊಂದಿವೆ ಎಂದು ಅಧ್ಯಯನ ವರದಿಯೊಂದು ತಿಳಸಿದೆ.
ಕೋವಿಡ್ ಲಸಿಕೆ ಹಾಕಿಸಿಕೊಂಡ ಆರೋಗ್ಯ ಕಾರ್ಯಕರ್ತರಲ್ಲಿ (ಎಚ್ ಸಿ ಡಬ್ಲ್ಯು) ಕೋವಿಡ್ ಸೋಂಕಿನ ಸಂಭವವನ್ನು ತನಿಖೆ ಮಾಡಲು ಮತ್ತು ಅವರ ರೋಗದ ತೀವ್ರತೆಯನ್ನು ವಿಶ್ಲೇಷಿಸಲು ಅಪೊಲೊ ಆಸ್ಪತ್ರೆಗಳ ಸಮೂಹ ನಡೆಸಿದ ಅಧ್ಯಯನವು ತಿಳಿಸಿದೆ.
ಇದನ್ನೂ ಓದಿ : ಟೋಕಿಯೊ ಒಲಿಂಪಿಕ್ಸ್: ಸ್ಪೇನ್ ವಿರುದ್ಧ 3-0 ಅಂತರದಿಂದ ಗೆದ್ದ ಭಾರತ ತಂಡ
2480 ಮಂದಿ ಎರಡೂ ಡೋಸ್ ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಂಡ ಹಾಗೂ 755 ಮಂದಿ ಮೊದಲ ಡೋಸ್ ಹಾಕಿಕೊಂಡ ಒಟ್ಟು 3,235 ಆರೋಗ್ಯ ಕಾರ್ಯಕರ್ತರನ್ನು ಈ ಅಧ್ಯಯನಕ್ಕೆ ಒಳಪಡಿಸಿಕೊಳ್ಳಲಾಗಿದ್ದು, ಲಸಿಕೆ ಹಾಕಿಸಿಕೊಂಡವರಲ್ಲಿ ಯಾವುದೇ ರೋಗ ಲಕ್ಷಗಳಾಗಲಿ ಅಥವಾ ಅಡ್ಡಪರಿಣಾಮಗಳಾಗಲಿ ಕಾಣಿಸಿಕೊಂಡಿಲ್ಲ. ಮಾತ್ರವಲ್ಲದೇ, ಕೋವಿಡ್ ಲಸಿಕೆಗಳು ಸಂಪೂರ್ಣ ಸುರಕ್ಷಿತ ಎನ್ನುವುದು ಸಾಬೀತಾಗಿದೆ.
ಇನ್ನು, ಅಧ್ಯಯನಕ್ಕೆ ಒಳಪಡಿಸಿಕೊಳ್ಳಲಾದ 3, 235 ಆರೋಗ್ಯ ಕಾರ್ಯಕರ್ತರಲ್ಲಿ 85 ಮಂದಿಗೆ ಕೋವಿಡ್ ಲಸಿಕೆ ಪಡೆದುಕೊಂಡ ಮೇಲು ಸಣ್ಣ ಪ್ರಮಾಣದಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದರೂ ಕೂಡ ರೋಗ ಲಕ್ಷಣಗಳು ತೀವ್ರ ಮಟ್ಟಕ್ಕೆ ತಲುಪಿಲ್ಲ ಎನ್ನುವುದು ಈ ಅಧ್ಯಯನದಲ್ಲಿ ಕಂಡು ಬಂದಿದೆ. ಮಾತ್ರವಲ್ಲದೇ, ಕೋವಿಡ್ ಲಸಿಕೆಗಳು ಪ್ರತಿಶತ 97.4 ರಷ್ಟು ಸುರಕ್ಷಿತವಾಗಿದೆ ಎಂದು ತಿಳಿಸಿದೆ.
ಅಧ್ಯಯನ ಮಾಡಿದ ಆರೋಗ್ಯ ಕಾರ್ಯಕರ್ತರುಗಳಲ್ಲಿ, ಕೇವಲ ಶೇಕಡಾ 0.06 ಮಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು, ಯಾರಿಗೂ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆದವರಲ್ಲ ಮತ್ತು ಯಾವುದೇ ಸಾವುಗಳು ಸಂಭವಿಸಿಲ್ಲ. ಎಲ್ಲಾ 85 ಸೋಂಕಿತ ಪ್ರಕರಣಗಳಲ್ಲಿ, ಕೆಮ್ಮಿನಂತಹ ಸೌಮ್ಯ ಲಕ್ಷಣಗಳಿವೆ ಎಂದು ಅಧ್ಯಯನವು ತಿಳಿಸಿದೆ. , ಜ್ವರ, ಅಸ್ವಸ್ಥತೆ ಮತ್ತು ರುಚಿ ಹಾಗೂ ವಾಸನೆ ಗೃಹಿಸುವುದರಲ್ಲಿ ವ್ಯತ್ಯಾಸವಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ : ಅಸ್ಸಾಂ-ಮಿಜೋರಾಂ ಗಡಿ ವಿವಾದ: ಹಿಂಸಾಚಾರದಲ್ಲಿ ಎಂಟು ಪೊಲೀಸರು ಹುತಾತ್ಮ