Advertisement

ದೇಶದಲ್ಲಿ 25 ಒಮಿಕ್ರಾನ್ ಪ್ರಕರಣಗಳು : ಮಾಸ್ಕ್ ಗಳ ಬಳಕೆ ಕಡಿಮೆ;ಎಚ್ಚರಿಕೆ

07:56 PM Dec 10, 2021 | Team Udayavani |

ನವದೆಹಲಿ: ಕೊರೊನ ವೈರಸ್‌ನ ರೂಪಾಂತರ ಒಮಿಕ್ರಾನ್ ಬಗ್ಗೆ ಕಳವಳದ ಮಧ್ಯೆ ದೇಶದಲ್ಲಿ ಮಾಸ್ಕ್ ಗಳ ಬಳಕೆ ಕಡಿಮೆಯಾಗುತ್ತಿರುವ ಬಗ್ಗೆ ಶುಕ್ರವಾರ ಸರಕಾರ ಎಚ್ಚರಿಕೆ ನೀಡಿದ್ದು, ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಲು ಮತ್ತು ಪ್ರಕರಣಗಳ ಉಲ್ಬಣವನ್ನು ತಡೆಗಟ್ಟಲು ಲಸಿಕೆಯನ್ನು ಪಡೆಯುವಂತೆ ಜನರನ್ನು ಒತ್ತಾಯಿಸಿದೆ.

Advertisement

ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್‌ನ ಮೌಲ್ಯಮಾಪನವನ್ನು ಉಲ್ಲೇಖಿಸಿ, ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ ಕೆ ಪಾಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಮಾಸ್ಕ್ ಗಳ ಬಳಕೆಯು ಎರಡನೇ ಅಲೆಯ ಆರಂಭದ ಮಟ್ಟಕ್ಕೆ ಕುಸಿದಿದೆ ನಾವು ಮತ್ತೆ ಅಪಾಯ ವಲಯ ಪ್ರವೇಶಿಸಿದ್ದೇವೆ ಎಂದರು.

ರಕ್ಷಣಾ ಸಾಮರ್ಥ್ಯದ ದೃಷ್ಟಿಕೋನದಿಂದ,ದೇಶದಲ್ಲಿ ಮಾಸ್ಕ್‌ಗಳ ಬಳಕೆ ಕಡಿಮೆಯಾಗುತ್ತಿದೆ ನಾವು ಈಗ ಕಡಿಮೆ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ, ಅಪಾಯಕಾರಿ ಮತ್ತು ಸ್ವೀಕಾರಾರ್ಹವಲ್ಲದ ಮಟ್ಟದಲ್ಲಿದ್ದೇವೆ ಎಂದು ಅವರು ಹೇಳಿದರು.

ಜಾಗತಿಕ ಪರಿಸ್ಥಿತಿಯಿಂದ ಜನರು ಕಲಿಯಬೇಕು.ಎರಡು ಲಸಿಕೆಗಳು ಮತ್ತು ಮಾಸ್ಕ್ ಗಳು ಎರಡೂ ಮುಖ್ಯವೆಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಪಾಲ್ ಒತ್ತಿ ಹೇಳಿದರು.

ನಮ್ಮನ್ನು ಮತ್ತು ನಮ್ಮ ಸುತ್ತಮುತ್ತಲಿನವರನ್ನು ರಕ್ಷಿಸಿಕೊಳ್ಳಲು ನಾವು ಈ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಶ್ರದ್ಧೆಯಿಂದ ಪಾಲಿಸಬೇಕು
ಯುರೋಪಿಯನ್ ದೇಶಗಳಲ್ಲಿ ಕಂಡುಬರುವಂತೆ ಪ್ರಕರಣಗಳ ಉಲ್ಬಣವನ್ನು ತಡೆಗಟ್ಟಲು ನಾಗರಿಕರು ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಅವರು ಹೇಳಿದರು.

Advertisement

ಭಾರತದಲ್ಲಿ ಇದುವರೆಗೆ ಕೊರೊನ ವೈರಸ್‌ನ ಒಮಿಕ್ರಾನ್ ರೂಪಾಂತರಿ 25 ಪ್ರಕರಣಗಳು ಪತ್ತೆಯಾಗಿವೆ, ಎಲ್ಲಾ ಪ್ರಕರಣಗಳಲ್ಲಿ ಸೌಮ್ಯ ರೋಗಲಕ್ಷಣಗಳನ್ನು ಗುರುತಿಸಲಾಗಿದೆ ಎಂದು ಸರಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next