Advertisement

ಕೋವಿಡ್‌-19 ಚಿಕಿತ್ಸೆ: ಖಾಸಗಿ ಆಸ್ಪತ್ರೆಗಳ ದರ: ತಜ್ಞರ ಸಮಿತಿ ಪರಿಷ್ಕರಣೆ

02:55 AM Jun 20, 2020 | Sriram |

ಬೆಂಗಳೂರು: ಕೋವಿಡ್‌ 19ರ ಚಿಕಿತ್ಸೆ ದರ ನಿಗದಿ ಕುರಿತು ಖಾಸಗಿ ಆಸ್ಪತ್ರೆಗಳು ಸಲ್ಲಿಸಿದ್ದ ಬೇಡಿಕೆ ದರಗಳನ್ನು ಸರಕಾರ ರಚಿಸಿದ್ದ ಎಂಟು ಜನರ ಸಮಿತಿ ಪರಿಷ್ಕರಿಸಿದ್ದು, ಈ ಕುರಿತು ಮುಂದಿನ ಸಚಿವ ಸಂಪುಟದ ಮುಂದೆ ಮಂಡಿಸಿ ಅನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

Advertisement

ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ (ಎಬಿ-ಎಆರ್‌ಕೆ) ಫ‌ಲಾನು ಭವಿಗಳಿಗೆ ಸಾಮಾನ್ಯ ವಾರ್ಡ್‌ಗೆ ದಿನಕ್ಕೆ 5,200 ರೂ. ಆಕ್ಸಿಜನ್‌ವುಳ್ಳ ವಾರ್ಡ್‌ಗೆ 7,000 ರೂ., ಐಸಿಯು ವಾರ್ಡ್‌ಗೆ 8,500 ರೂ., ಐಸಿಯು ಜತೆಗೆ ವೆಂಟಿಲೇಟರ್‌ವುಳ್ಳ ವಾರ್ಡ್‌ಗೆ 10,000 ರೂ. ನಿಗದಿ ಮಾಡಿದೆ.

ಹಾಗೆಯೇ ನಗದು ಪಾವತಿಸುವ ಮತ್ತು ವಿಮೆ ಯೋಜನೆಗಳಡಿ ಚಿಕಿತ್ಸೆ ಪಡೆಯುವವರಿಗೆ ಸಾಮಾನ್ಯ ವಾರ್ಡ್‌ಗೆ 10,000 ರೂ., ಆಕ್ಸಿಜನ್‌ ಸಹಿತ ವಾರ್ಡ್‌ಗೆ 12,000 ರೂ., ಐಸಿಯು ವಾರ್ಡ್‌ಗೆ 15,000ರೂ., ಐಸಿಯು ಜತೆ ವೆಂಟಿಲೇಟರ್‌ ಇದ್ದರೆ 25,000 ರೂ. ನಿಗದಿ ಮಾಡಿದೆ. ಇಲಾಖೆ ವತಿಯಿಂದ ಸೋಂಕು ಪರೀಕ್ಷೆಗೊಳಗಾದರೆ ಉಚಿತ ವಿದೆ. ಆದರೆ ಖಾಸಗಿಯಲ್ಲಿ 2,600 ರೂ. ದರ ನಿಗದಿ ಮಾಡಲು ಪ್ರಸ್ತಾವಿಸ ಲಾಗಿದ್ದು, ಇದಕ್ಕೆ ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ಸೂಚಿಸಿಲ್ಲ. 4,000 ರೂ. ಮೇಲ್ಪಟ್ಟು ದರ ನಿಗದಿಗೆ ಪಟ್ಟು ಹಿಡಿದಿವೆ. ಈ ಬಗ್ಗೆಯೂ ಸಂಪುಟದಲ್ಲಿ ತೀರ್ಮಾನಿಸ ಲಾಗುವುದು ಎಂದು ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next