Advertisement

ಸ್ಪೇನ್ ಪ್ರಧಾನಿ ಪತ್ನಿ ಬೆಗೊನಾ ಗೊಮೇಜ್ ಗೂ ಕೊರೊನಾ ಸೋಂಕು

10:53 PM Mar 20, 2020 | keerthan |

ಮ್ಯಾಡ್ರಿಡ್: ಕೊರೊನಾ ವೈರಸ್ ವೇಗವಾಗಿ ಹಬ್ಬುತ್ತಿರುವ ಸ್ಪೇನ್ ದೇಶದ ಪ್ರಧಾನಿಯ ಪತ್ನಿಗೂ ಸೋಂಕು ತಗುಲಿದೆ.

Advertisement

ಸ್ಪೇನ್ ನ ಪ್ರಧಾನ ಮಂತ್ರಿ ಪೆಡ್ರೋ ಶ್ಯಾನ್ಶೇಜ್ ಪತ್ನಿ ಬೆಗೊನಾ ಗೊಮೇಜ್ ಅವರು ಕೊರೊನಾ ವೈರಸ್ ಗೆ ಪೀಡಿತರಾಗಿರುವುದು ದೃಢಪಟ್ಟಿದೆ. ಕರೊನಾ ವೈರಸ್ ಪ್ರಕರಣಗಳು ಜಾಸ್ತಿಯಾಗುತ್ತಿರುವ ಕಾರಣ ಸಂಪೂರ್ಣ ದೇಶದಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ಪತ್ನಿಗೆ ಕೊರೊನಾ ವೈರಸ್ ಖಾತ್ರಿಯಾಗಿದೆ.

ಇಟಲಿ ಹೊರತುಪಡಿಸಿದರೆ ಯುರೋಪ್ ದೇಶಗಳಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳಿರುವುದು ಸ್ಪೇನ್ ನಲ್ಲಿ. ಇದುವರೆಗೆ ಸ್ಪೇನ್ ನಲ್ಲಿ 5753 ಜನರು ಕೊರೊನಾ ಸೋಂಕು ಪೀಡಿತರಾಗಿದ್ದು, 183 ಜನರು ಸಾವನ್ನಪ್ಪಿದ್ದಾರೆ.

ಸ್ಪೇನ್ ನಲ್ಲಿ ಜನರು ರಸ್ತೆಯಲ್ಲಿ ಓಡಾಡುವುದನ್ನು ಕೂಡ ನಿರ್ಬಂಧಿಸಲಾಗಿದೆ. ಜನರು ಆದಷ್ಟು ಮನೆಯಲ್ಲಿಯೇ ಇರಬೇಕೆಂದು ಸೂಚಿಸಲಾಗಿದೆ. ಔಷದಿ ಮಳಿಗೆಗಳು ಮತ್ತು ಸೂಪರ್ ಮಾರ್ಕೆಟ್ ಹೊರತು ಪಡಿಸಿ ಉಳಿದೆಲ್ಲಾ ವಹಿವಾಟುಗಳನ್ನು ತಡೆಹಿಡಿಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next