ಉಡುಪಿ: ಕೋವಿಡ್ 19 ಸಂಕಷ್ಟ ಪರಿಸ್ಥಿತಿಯನ್ನು ಕಳೆದ ಮೂರು ತಿಂಗಳಿನಿಂದ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಸಾರ್ವಜನಿಕ ಸಂಘಟನೆಗಳ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಎದುರಿಸಿ ರಾಜ್ಯದಲ್ಲಿಯೇ ವಿಶೇಷವಾಗಿ ಗುರುತಿಸಿ ಕೊಂಡಿದ್ದೇವೆ. ಆದರೆ ಮಹಾರಾಷ್ಟ್ರ ಮತ್ತಿತರ ಅನ್ಯ ರಾಜ್ಯಗಳಿಂದ ಬಂದ ಸ್ಥಳೀಯ ನಿವಾಸಿಗಳಿಂದ ಒಂದಷ್ಟು ಸೋಂಕು ಹರಡಿದರೂ ಸಮುದಾಯ ವಲಯ ಸುರಕ್ಷಿತವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಪರಿಸ್ಥಿತಿಯೂ ನಿಯಂತ್ರಣಕ್ಕೆ ಬರಲಿದೆ. ಹೊರ ರಾಜ್ಯಗಳಿಂದ ಬಂದಂತಹ ನಿವಾಸಿಗಳಿಗೆ ಸುರಕ್ಷಿತವಾಗಿ ಅರೋಗ್ಯ ಪರಿಶೀಲನೆ ಹಾಗೂ ಚಿಕಿತ್ಸೆ ನೀಡುವ ವ್ಯವಸ್ಥೆ ಜಿಲ್ಲಾಡಳಿತದ ಮೂಲಕ ನಡೆಯುತ್ತಿದೆ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಶನಿವಾರ ಸಂಜೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ನಡೆದ ನೂತನ ಬೂತ್ ಅಧ್ಯಕ್ಷರ ಪ್ರಮಾಣ ಪತ್ರ ವಿತರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್‌ಪೂಜಾರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನೋಹರ್ ಕಲ್ಮಾಡಿ, ಕರಂಬಳ್ಳಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಕಿಶೋರ್ ಕರಂಬಳ್ಳಿ, ನಗರಸಭೆ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗಿರಿಧರ್‌ಆಚಾರ್ಯ, ಭಾರತೀ ಪ್ರಶಾಂತ್, ಗಿರೀಶ್ ಅಂಚನ್, ಮಂಜುನಾಥ್ ಮಣಿಪಾಲ, ಅರುಣಾ ಪೂಜಾರಿ, ಬೂತ್ ಅಧ್ಯಕ್ಷರಾದ ಕಿರಣ್ ಕುಮಾರ್, ಪ್ರಶಾಂತ್ ಕೋಟ್ಯಾನ್, ಗಣೇಶ್ ಶೇಟ್, ಜಯಕರ್‌ಆಚಾರ್ಯ, ಸತ್ಯನಾರಾಯಣ, ಗಿರೀಶ್, ಪಾಂಡು, ಜಯರಾಜ್, ಪ್ರಶಾಂತ್ ಅಮೀನ್, ಹೇಮನಾಥ ಹೆಗ್ಡೆ, ಮನೀಶ್ ಜತ್ತನ್, ದಿನೇಶ್ ಪೂಜಾರಿ, ಮಾಧವ ನಾಯ್ಕ, ರತ್ನಾಕರ್ ಸಾಲಿಯಾನ್, ಗಣಪತಿ ಭಟ್, ರಾಜೇಶ್, ನಾಗಾರ್ಜುನ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್ ನಿರೂಪಿಸಿ, ವಂದಿಸಿದರು.