Advertisement

ಕೋವಿಡ್ 19 ಕಡಿವಾಣ: ಕನ್ನಡಿಗ ಸ್ಟಾರ್ಟ್‌ಅಪ್‌ಗಳ ಸಾಧನೆ

02:40 AM Jul 08, 2020 | Hari Prasad |

ಬೆಂಗಳೂರು: ಕೋವಿಡ್ 19 ಸೋಂಕು ಪತ್ತೆಹಚ್ಚಲು ಮತ್ತು ನಿವಾರಿಸಲು ಸಹಾಯಕವಾಗಬಲ್ಲ ಆರು ಪ್ರಮುಖ ಉತ್ಪನ್ನಗಳನ್ನು ಕನ್ನಡಿಗ ವಿಜ್ಞಾನಿಗಳು ಮತ್ತು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

Advertisement

ಇದರೊಂದಿಗೆ ಕೋವಿಡ್‌ ವಿರುದ್ಧದ ಸಮರದಲ್ಲಿ ರಾಜ್ಯಕ್ಕೆ ಮಹತ್ವದ ಮುನ್ನಡೆ ಸಿಕ್ಕಿದೆ.

ಇದುವರೆಗೂ ಗಂಟಲ ದ್ರವ ಮತ್ತಿತರ ಮಾದರಿಗಳನ್ನು ಪಡೆದು ಕೋವಿಡ್‌ ಪತ್ತೆ ಮಾಡಲಾಗುತ್ತಿತ್ತು. ಈಗ ಕೋವ್‌ – ಅಸ್ತ್ರದ ಮೂಲಕ ಕೇವಲ ರೋಗಿಯ ಎದೆಯ ಭಾಗದ

ಎಕ್ಸ್‌ರೇ ತೆಗೆದು ವೈರಸ್‌ ಇದೆಯೇ ಇಲ್ಲವೇ ಎಂಬುದನ್ನು ಪತ್ತೆ ಮಾಡಬಹುದಾಗಿದೆ. ಶೀಲೆಡೆಕ್ಸ್‌ 24ರಿಂದ ಕೊರೊನಾ ವೈರಸನ್ನು ನಿರ್ಮೂಲನೆ ಮಾಡಬಹುದು!

ಭ್ರೂಣ ನಿಗಾ ಯಂತ್ರದಿಂದ (ಫೀಟಲ್‌ ಮಾನಿಟರಿಂಗ್‌ ಡಿವೈಸ್‌) ಗರ್ಭಿಣಿ ಹೊಟ್ಟೆಯಲ್ಲಿರುವ ಭ್ರೂಣದ ಹೃದಯ ಬಡಿತವನ್ನೂ ವೈದ್ಯರು ತಿಳಿಯಬಹುದು!

Advertisement

ರಾಜ್ಯದ ಐಟಿ-ಬಿಟಿ ಇಲಾಖೆ ವ್ಯಾಪ್ತಿಯ ಬೆಂಗಳೂರು ಬಯೋ ಇನ್ನೋವೇಶನ್‌ ಕೇಂದ್ರದ ಅಡಿಯಲ್ಲಿ ಸಂಶೋಧನೆಯಲ್ಲಿ ನಿರತವಾಗಿರುವ ವಿವಿಧ ಸ್ಟಾರ್ಟ್‌ ಅಪ್‌ಗಳು ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿವೆ ಎಂದು ಇಂತಹ ಆರು ಕೋವಿಡ್‌ ನಿಗ್ರಹಿಸುವ ಉತ್ಪನ್ನಗಳನ್ನು ಮಂಗಳವಾರ ಬಿಡುಗಡೆ ಮಾಡಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಆರೂ ಉತ್ಪನ್ನಗಳಿಗೆ ಐಸಿಎಂಆರ್‌ (ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ) ಮಾನ್ಯತೆ ಸಿಕ್ಕಿದೆ ಎಂಬುದನ್ನು ಅವರು ಪ್ರಕಟಿಸಿದರು. ಈ ಕ್ಷಣದಿಂದಲೇ ಇವೆಲ್ಲವನ್ನು ಎಲ್ಲರೂ ಬಳಸಬಹುದು, ಖರೀದಿಸಬಹುದು. ಜತೆಗೆ ಸರಕಾರವು ಈ ಉತ್ಪನ್ನಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಲಿದೆ ಎಂದು ಮಾಹಿತಿಯಿತ್ತರು.

ಯುವ ಸಂಶೋಧಕರು, ವಿಜ್ಞಾನಿಗಳು ಈ ಉತ್ಪನ್ನಗಳನ್ನು ತಯಾರಿಸಿದ್ದು, ವಿದೇಶದಿಂದ ನಾವು ಆಮದು ಮಾಡಿಕೊಳ್ಳುತ್ತಿದ್ದ ಉತ್ಪನ್ನಗಳಿಗಿಂತ ಉತ್ತಮ ಗುಣಮಟ್ಟದವು. ಅವುಗಳಿಗಿಂತ ಮುಂದುವರಿದ ತಂತ್ರಜ್ಞಾನವನ್ನು ಹೊಂದಿವೆ. ಕರ್ನಾಟಕ ಮಾತ್ರವಲ್ಲದೆ ಭಾರತ ನಡೆಸುತ್ತಿರುವ ಕೋವಿಡ್‌ ವಿರುದ್ಧದ ಹೋರಾಟಕ್ಕೆ ಇದರಿಂದ ದೊಡ್ಡ ಬಲ ಬಂದಂತಾಗಿದೆ ಎಂದು ಡಿಸಿಎಂ ಹೇಳಿದರು.

ಯಾವ ಉಪಕರಣ

1. ಶೀಲೆಡೆಕ್ಸ್‌ 24

2. ಫ್ಲೋರೋಸೆನ್ಸ್‌ ಪ್ರೋಬ್ಸ್

3. ಭ್ರೂಣ ನಿಗಾ ಯಂತ್ರ (ಫೀಟಲ್‌ ಮಾನಿಟರಿಂಗ್‌ ಡಿವೈಸ್‌)

4. ವಿಟಿಎಂ (ವೈರಲ್‌ ಟ್ರಾನ್ಸ್‌ಪೊàರ್ಟ್‌ ಮೀಡಿಯಾ)

5. ಕೋವ್‌-ಅಸ್ತ್ರ

6.ಆ್ಯಂಟಿ ಮೈಕ್ರೋಬಿಯಲ್‌ ಫೇಸ್‌ ವಾಶ್‌

Advertisement

Udayavani is now on Telegram. Click here to join our channel and stay updated with the latest news.

Next