Advertisement

ಗದುಗಿನಲ್ಲಿ ಕೋವಿಡ್ 19 ಟೆಸ್ಟ್‌ ಲ್ಯಾಬ್

06:35 PM Apr 19, 2020 | Suhan S |

ಗದಗ: ಶಾಸಕ ಎಚ್‌.ಕೆ.ಪಾಟೀಲ ಅವರ ಒತ್ತಾಯ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸಹಕಾರದಿಂದ ಇಲ್ಲಿನ ಗದಗ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕೋವಿಡ್ 19 ಟೆಸ್ಟ್‌ ಲ್ಯಾಬ್‌ ಮಂಜೂರಾಗಿದ್ದು, ಇಂದು ಸಂಜೆಯಿಂದಲೇ ಕಾರ್ಯಾರಂಭ ಮಾಡಲಿದೆ ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದ ಜಿ.ಪಂ. ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯವಾಗಿ ಕೋವಿಡ್‌-19 ಪ್ರಯೋಗಾಲಯವಿಲ್ಲದೇ, ಕೋವಿಡ್ 19  ಶಂಕಿತರ ವರದಿಗಾಗಿ ಒಂದೆರಡು ದಿನ ವಿಳಂಬವಾಗುತ್ತಿದ್ದವು. ಆದರೆ, ಇದೀಗ ಜಿಲ್ಲೆಯಲ್ಲೇ ಕೋವಿಡ್ 19  ಶಂಕಿತರ ಮಾದರಿಗಳನ್ನು ಪರೀಕ್ಷಿಸುವುದರಿಂದ ಕೆಲವೇ ಗಂಟೆಗಳಲ್ಲಿ ವರದಿಗಳು ಕೈ ಸೇರಲಿವೆ. ಇದರಿಂದ ತ್ವರಿತಗತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ಆರಂಭಿಸಬಹುದು ಎಂದು ಹೇಳಿದರು.

ಗದಗನಲ್ಲಿ 42 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿರುವುದು ದುರದೃಷ್ಟ. ಈವರೆಗೆ ಬಂದಿರುವ ಮೂರು ಪ್ರಕರಣಗಳಿಗೆ ರಂಗನವಾಡ ಓಣಿ ಕೇಂದ್ರ ಬಿಂದುವಾಗಿದೆ. ಈಗಾಗಲೇ 70 ಜನರ ಗಂಟಲಿನ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಯ ನಿರೀಕ್ಷೆಯಲ್ಲಿದ್ದೇವೆ. ಮಲ್ಲಸಮುದ್ರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಂಕಿತರ ಕ್ವಾರಂಟೈನ್‌ ಮಾಡಲಾಗಿದೆ. ಅವರಿಗೆ ಅಲ್ಲಿನ ಅಡುಗೆ ಇಷ್ಟವಾಗದಿದ್ದರೆ, ತಾವೇ ಸಿದ್ಧಪಡಿಸಿಕೊಳ್ಳಬಹುದು. ಅದಕ್ಕಾಗಿ ಗುಣಮಟ್ಟದ ಪಡಿತರ ಸಾಮಗ್ರಿಯನ್ನು ಪೂರೈಸಲಾಗುತ್ತದೆ. ಜಿಲ್ಲೆಯಲ್ಲಿ ಕೋವಿಡ್ 19 ತಡೆಗಟ್ಟಲು ಎಲ್ಲರೂ ಪಕ್ಷಭೇದ ಮರೆತು, ಸಹಕರಿಸಬೇಕು ಎಂದು ಮನವಿ ಮಾಡಿದರು.

ಹೊಳೆಆಲೂರಿನಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾದ ಆಹಾರ ಧಾನ್ಯಗಳ ಬಗ್ಗೆ ಸ್ವತಃ ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಪರಿಶೀಲಿಸಿದ್ದಾರೆ. ಗ್ರಾಮದ ಒಂದೇ ಸಮಾಜಕ್ಕೆ ಹಾಗೂ ಮುಖ್ಯಸ್ಥರಿಲ್ಲದ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಿಸಿದ್ದರಿಂದ ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತವಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಎಚ್‌.ಕೆ. ಪಾಟೀಲ ಮಾತನಾಡಿ, ಜಿಮ್ಸ್‌ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯ ಹಾಗೂ ಪರಿಣಿತ ಸಿಬ್ಬಂದಿ ಇದ್ದರೂ, ಐಎಂಸಿಆರ್‌ ನಿಂದ ಕೋವಿಡ್ 19  ಲ್ಯಾಬ್‌ಗ ಅನುಮತಿ ನೀಡುತ್ತಿಲ್ಲ ಎಂಬ ಕೊರಗು ಇತ್ತು. ಆದರೆ, ಜಿಮ್ಸ್‌ ಆಸ್ಪತ್ರೆಯಲ್ಲಿ ಲ್ಯಾಬರೋಟರಿ ಉದ್ಘಾಟನೆಗೊಳ್ಳುತ್ತಿರುವುದು ಸಮಾಧಾನಕರ ಸಂಗತಿ ಎಂದರು.

Advertisement

ನಗರದಲ್ಲಿ ಮೂರನೇ ಪಾಸಿಟಿವ್‌ ಬಂದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸರಕಾರ ನೀಡಿರುವ ಸಡಿಲಿಕೆ ಮಧ್ಯೆಯೂ ಕೋವಿಡ್‌-19 ನಿಯಮದಂತೆ ಸಾರ್ವಜನಿಕರು ಶಿಸ್ತು ಪಾಲಿಸಬೇಕು. ಜತೆಗೆ ಬ್ಯಾಂಕ್‌ ಅಧಿಕಾರಿಗಳು ಖಾತೆದಾರರ ಮನೆ ಬಾಗಿಲಿಗೆ ಅವರ ಹಣ ತಲುಪಿಸಲು ಕ್ರಮ ಕೈಗೊಳ್ಳಬೇಕು. ಎಟಿಎಂಗಳಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಬೇಕು ಎಂಬುದನ್ನು ಮತ್ತೂಬ್ಬರು ಹೇಳಿಸಿಕೊಳ್ಳಬಾರದು ಎಂದು ಹರಿಹಾಯ್ದರು.

ಜಿ.ಪಂ ಅಧ್ಯಕ್ಷ ಸಿದ್ದು ಪಾಟೀಲ, ಶಾಸಕ ಕಳಕಪ್ಪ ಬಂಡಿ, ವಿಧಾನ ಪರಿಷತ್‌ ಎಸ್‌.ವಿ.ಸಂಕನೂರ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿ.ಪಂ ಸಿಇಒ ಡಾ|ಆನಂದ ಕೆ. ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next