Advertisement
ಕಳೆದೊಂದು ವಾರದಲ್ಲೇ ಕನಿಷ್ಠ 3 ರಾಜ್ಯಗಳು ಇಂಥದ್ದೊಂದು ಸುಳಿವನ್ನು ನೀಡಿವೆ. ಮೊದಲನೆಯದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಸ್ವತಃ, ಸೋಂಕು ರಾಜ್ಯದ ಕೆಲವು ಕರಾವಳಿ ಪ್ರದೇಶಗಳಲ್ಲಿ ಸಮುದಾಯ ಮಟ್ಟದಲ್ಲಿ ವ್ಯಾಪಿಸಿರುವ ಲಕ್ಷಣ ಕಾಣಿಸುತ್ತಿದೆ ಎಂದು ಹೇಳಿದ್ದರು. ಅದಾದ ಬಳಿಕ, ತೆಲಂಗಾಣ ಕೂಡ ತನ್ನ ಕೋವಿಡ್ 19 ಸ್ಥಿತಿಯನ್ನು ಉಲ್ಲೇಖಿಸುತ್ತಾ ಇದೇ ರೀತಿಯ ಅನುಮಾನವನ್ನು ವ್ಯಕ್ತಪಡಿಸಿದೆ.
ಭಾರತದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 14 ಲಕ್ಷ ಸಮೀಪಿಸುತ್ತಿದ್ದು, ಶನಿವಾರದಿಂದ ರವಿವಾರಕ್ಕೆ 24 ಗಂಟೆಗಳ ಅವಧಿಯಲ್ಲಿ 48,661 ಮಂದಿಗೆ ಸೋಂಕು ದೃಢಪಟ್ಟಿದೆ. ಜತೆಗೆ 705 ಸೋಂಕಿತರು ಅಸುನೀಗುವ ಮೂಲಕ, ಸಾವಿನ ಸಂಖ್ಯೆ 32 ಸಾವಿರ ದಾಟಿದೆ. ಪ್ರಸ್ತುತ ದೇಶದಲ್ಲಿ 4.67 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಸತತ 4ನೇ ದಿನವೂ ದೈನಂದಿನ ಸೋಂಕಿತರ ಸಂಖ್ಯೆ 45 ಸಾವಿರದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
Related Articles
ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೂ ದೇಶದಲ್ಲಿ ಗುಣಮುಖ ಪ್ರಮಾಣದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಇದೇ ಮೊದಲ ಬಾರಿಗೆ ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 36,145 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
Advertisement
ಈ ಮೂಲಕ ಗುಣಮುಖ ಪ್ರಮಾಣವು ಶೇ.63.92ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಒಟ್ಟಿನಲ್ಲಿ ಈವರೆಗೆ 8.85 ಲಕ್ಷಕ್ಕೂ ಅಧಿಕ ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದೇ ವೇಳೆ, ದೇಶದ ಮರಣ ಪ್ರಮಾಣ ಶೇ.2.31ಕ್ಕಿಳಿದಿರುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.