Advertisement
ಈ ಸಂಶೋಧನೆ ಇನ್ನು ಮುಂದೆ ಮಾಸ್ಕ್ ಧರಿಸುವುದು ಹಾಗೂ ಇತರ ಸಾಮಾನ್ಯ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವುದರ ಮಹತ್ವವನ್ನು ಎತ್ತಿ ಹಿಡಿದಿದೆ.
Related Articles
Advertisement
ಮಾತಿನಲ್ಲಿ ಹರಡುವ ಬಗೆ ಅಮೆರಿಕದ ಡಯಬಿಟಿಸ್ ಆ್ಯಂಡ್ ಡೈಜೆಸ್ಟಿವ್ ಆ್ಯಂಡ್ ಕಿಡ್ನಿ ಡಿಸೀಸಸ್ ಸಂಸ್ಥೆ ಮತ್ತು ಪೆನ್ನಿಸಿಲ್ವೇನಿಯ ವಿವಿ ಜಂಟಿಯಾಗಿ ನಡೆಸಿದ ಸಂಶೋಧನೆ ಈ ರೀತಿ ಇದೆ: ಕೆಲವು ಸ್ವಯಂ ಸೇವಕರನ್ನು ಆರಿಸಿಕೊಂಡು ಅವರಿಗೆ sಠಿಚy ಜಛಿಚlಠಿಜy ಎಂಬ ಶಬ್ದವನ್ನು ಪದೇಪದೆ ಉಚ್ಚರಿಸಲು ಹೇಳಲಾಯಿತು. ಕಾರ್ಡ್‌ಬೋರ್ಡ್ ಪರದೆಯ ಆಚೆ ತುದಿಯಲ್ಲಿ ನಿಂತು ಶಬ್ದವನ್ನು ಉಚ್ಚರಿಸುವಾಗ ಈ ಕಡೆಯಿಂದ ಲೇಸರ್ ಕಿರಣಗಳನ್ನು ಹಾಯಿಸಿ ಆಗ ಎಷ್ಟು ಉಗುಳಿನ ಹನಿಗಳು ಸಿಡಿಯುತ್ತವೆ ಎನ್ನುವುದನ್ನು ಕಂಡುಕೊಳ್ಳಲಾಯಿತು. ಮಾತನಾಡುವಾಗ ಪ್ರತಿ ಸೆಕೆಂಡಿಗೆ ಸುಮಾರು 2,600 ಉಗುಳಿನ ಹನಿಗಳು ಸಿಡಿಯುತ್ತವೆ ಎಂಬುದು ಈ ಸಂಶೋಧನೆಯಿಂದ ದೃಢಪಟ್ಟಿದೆ. ಧ್ವನಿಯ ಏರಿಳಿತವನ್ನು ಹೊಂದಿಕೊಂಡು ಹನಿಗಳ ಗಾತ್ರವೂ ಬದಲಾಗುತ್ತದೆ. ಮೆಲುವಾಗಿ ಮಾತನಾಡುವಾಗ ಸಣ್ಣ ಹನಿಗಳು ಮತ್ತು ಜೋರಾಗಿ ಮಾತನಾಡುವಾಗ ದೊಡ್ಡ ಹನಿಗಳು ಸಿಡಿಯುತ್ತವೆ. ಈ ಪ್ರಯೋಗವನ್ನು ಆರೋಗ್ಯವಂತ ವ್ಯಕ್ತಿಗಳನ್ನು ಪರೀಕ್ಷೆಗೊಳಪಡಿಸಿ ನಡೆಸಲಾಗಿದೆ. ಸೋಂಕಿತರ ಮೇಲೆ ಹಿಂದೆ ನಡೆದ ಅಧ್ಯಯನದ ಆಧಾರದಲ್ಲಿ ಅವರು ಮಾತನಾಡುವಾಗ ಕನಿಷ್ಠ 1,000 ವೈರಸ್ ಇರುವ ಹನಿಗಳು ಸಿಡಿಯಬಹುದು ಎಂದು ಲೆಕ್ಕ ಹಾಕಲಾಗಿದೆ. ಬಾಯಿಂದ ಸಿಡಿದ ಹನಿಗಳು ಬಹಳ ಬೇಗ ಆವಿಯಾಗಿ ಹೋಗುತ್ತವೆಯಾದರೂ ಕೆಲವು ಹನಿಗಳು 14 ನಿಮಿಷಗಳ ತನಕ ಗಾಳಿಯಲ್ಲಿರುತ್ತವೆ. ಉಸಿರಾಟದ ಮೂಲಕ ಈ ಹನಿ ಬೇರೊಬ್ಬ ವ್ಯಕ್ತಿಯ ದೇಹವನ್ನು ಪ್ರವೇಶಿಸುತ್ತದೆ. ವೈರಸ್ ಸೋಂಕಿಗೊಳಗಾಳಾಗಲು ಇಂಥ ಒಂದು ಹನಿ ಸಾಕು. ಹೀಗಾಗಿ ಮಾತಿನಿಂದಲೂ ವೈರಸ್ ಹರಡುತ್ತದೆ ಎಂಬ ತೀರ್ಮಾನಕ್ಕೆ ಬರಲಾಗಿದೆ. 6 ಅಡಿ ಅಂತರ
ಕೋವಿಡ್ ವೈರಸ್‌ನಿಂದ ಸುರಕ್ಷಿತ ವಾಗಿರಬೇಕಾದರೆ ಕನಿಷ್ಠ 6 ಅಡಿಯ ಅಂತರ ಪಾಲಿಸುವುದು ಆಗತ್ಯ. ಇದು ನಮ್ಮ ದೈನಂದಿನ ಬದುಕಿನಲ್ಲಿ ರೂಢಿಯಾಗಬೇಕು ಎನ್ನುತ್ತಿದ್ದಾರೆ ವಿಜ್ಞಾನಿಗಳು. ಆದರೆ ಕೆಲವು ವಿಜ್ಞಾನಿಗಳು ಉಗುಳಿನ ಹನಿಗಳು 6 ಅಡಿಗಿಂತಲೂ ದೂರ ಸಿಡಿಯುವ ಸಾಧ್ಯತೆಯೂ ಇದೆ ಎನ್ನುತ್ತಿದ್ದಾರೆ. ಕೆಲವು ಶಬ್ದಗಳನ್ನು ಉಚ್ಚರಿಸುವಾಗ ಹೆಚ್ಚು ಉಗುಳಿನ ಹನಿಗಳು ಸಿಡಿಯುತ್ತವೆ ಎಂಬ ಅಂಶವೂ ಈ ಅದ್ಯಯನದಿಂದ ತಿಳಿದು ಬಂದಿದೆ.