Advertisement
ಆದರೆ ಕೋವಿಡ್-19 ಬಿಕ್ಕಟ್ಟಿನಿಂದಾಗಿ ಈ ವಾಣಿಜ್ಯ ನಗರಿ ನಲುಗುತ್ತಿದ್ದು, ಮುಖ್ಯವಾಗಿ ಪ್ರವಾಸಿಗರನ್ನೇ ನೆಚ್ಚಿ ಕೊಂಡಿದ್ದ ಹೊಟೇಲ್ ಉದ್ಯಮಿಗಳು ಮತ್ತು ಬೀದಿ ಬದಿ ಕ್ಯಾಂಟೀನ್‌ಗಳನ್ನು ನಡೆಸಿ ಜೀವನ ಮಾಡುತ್ತಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಿಂಗಾಪುರದಲ್ಲಿ ಕೆಲ ಹೆಸರಾಂತ ಫುಡ್ ಸ್ಟ್ರೀಟ್ ಗಳಿದ್ದು, ಉತ್ತಮ ರುಚಿಯೊಂದಿಗೆ ಅಗ್ಗದ ಬೆಲೆಯಲ್ಲಿ ಆಹಾರ ಸಿಗುತ್ತದೆ. ಇದು ಪ್ರವಾಸಿಗರ ಆಕರ್ಷಣೀಯ ಸ್ಥಳಗಳೂ ಹೌದು. ಆದರೆ ಕೋವಿಡ್-19 ಆರ್ಭಟ ಪ್ರಾರಂಭವಾಗುವ ಮುನ್ನವೇ ಆರ್ಥಿಕ ಸಂಕಷ್ಟಕ್ಕೆ ಈ ಉದ್ಯಮಗಳು ಸಿಲುಕಿದ್ದು, ಈಗ ಮತ್ತಷ್ಟು ಹದಗೆಟ್ಟಿವೆ ಎಂದು ಅಲ್ ಜಜೀರಾ ವರದಿ ಮಾಡಿದೆ. ದೇಶದಲ್ಲಿ ಏಪ್ರಿಲ್ 7 ರಿಂದ ಲಾಕ್‌ಡೌನ್ ಜಾರಿಯಲ್ಲಿದೆ. ಪರಿಣಾಮ ನಗರದ ಪ್ರತಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಕನಿಷ್ಠ ಜೂನ್ 1 ರವರೆಗೆ ಕಡೆ ಇದೇ ಸ್ಥಿತಿ ಇರ ಬಹುದು ಎನ್ನಲಾಗುತ್ತಿದೆ. ಈಗಾಗಲೇ ವ್ಯಾಪಾರ ಪ್ರಮಾ ಣದಲ್ಲಿ ಮೂರನೇ ಎರಡು ಭಾಗದಷ್ಟು ಕುಸಿತವಾಗಿದೆ. ಆದ ಕಾರಣ ಇದೇ ವೃತ್ತಿಯನ್ನು ನಂಬಿಕೊಂಡವರೆಲ್ಲಾ ಅತಂತ್ರರಾಗಿದ್ದಾರೆ. ಇದರ ಮಧ್ಯೆ ಜೀವನ ಶೈಲಿ ಹಾಗೂ ಮತ್ತಿತರ ಕಾರಣಗಳಿಂದ ಜನರೂ ಸಣ್ಣ ಪುಟ್ಟ ಹೋಟೆಲ್-ಕ್ಯಾಂಟೀನ್‌ಗಳಲ್ಲಿನ ಆಹಾರ ಸೇವನೆಯಿಂದ ದೂರ ಉಳಿಯುತ್ತಿದ್ದಾರೆ. ಸರಕಾರವು ಸದ್ಯಕ್ಕೆ ಅಗತ್ಯ ವಸ್ತುಗಳ ಖರೀದಿಸುವಿಕೆಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ. ಆದರೆ ನಮ್ಮನ್ನು ಮರೆತೇ ಬಿಟ್ಟಿದೆ ಎಂದು ಮಾಧ್ಯಮ ಗಳಿಗೆ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
Related Articles
Advertisement
ಹೋಮ್ ಡೆಲಿವರಿ ಉಪಾಯಉದ್ಯಮವನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಕೆಲವು ಉದ್ಯಮಿಗಳು ಹಾಗೂ ಕಂಪೆನಿಗಳು ಹೋಮ್ ಡೆಲಿವರಿಗೆ ಮುಂದಾಗಿವೆ. ವ್ಯಾಪಾರಿಗಳು ಮತ್ತು ಗ್ರಾಹಕರ ನಡುವೆ ಸಂಪರ್ಕ ಕಲ್ಪಿಸಲು ಫೇಸ್‌ಬುಕ್ ಮೊರೆಹೋಗಿದ್ದಾರೆ. ಯುನೈಟೆಡ್ -ಡಬಾವೊ 2020 ( ಹೋಮ್ ಡೆಲೆವರಿ ಎಂಬ ಅರ್ಥವನ್ನು ನೀಡಲಿದ್ದು ಅಲ್ಲಿನ ಆಡು ಭಾಷೆ ಇದಾಗಿದೆ ) ಎಂಬ ಖಾತೆ ತೆರೆದಿದ್ದು, ಸ್ಥಗಿತಗೊಂಡಿದ್ದ ವ್ಯಾಪಾರ ಚಟುವಟಿಕೆಗಳಿಗೆ ಪುನರಾರಂಭಿಸುವ ಪ್ರಯತ್ನ ನಡೆದಿದೆ. ಎಪ್ರಿಲ್ ಮೊದಲ ವಾರದಲ್ಲಿ ಈ ಖಾತೆ ರಚನೆಯಾಗಿದ್ದು, ಆರಂಭದ ದಿನಗಳಲ್ಲಿ ಕೇವಲ ಬೆರಳೆಣಿಕೆ ಯಷ್ಟು ಜನರಿ ದ್ದರು. ಆದರೆ ಪ್ರಸ್ತುತ ಸುಮಾರು 2.5 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ಅಂಗಡಿಗಳಲ್ಲಿ ನಡೆಯುತ್ತಿದ್ದ ನಿಗದಿತ ವ್ಯಾಪಾರ ಪ್ರಮಾಣದಲ್ಲಿ ಶೇ.20ರಷ್ಟು ಕಡಿಮೆಯಾದರೂ, ಸಾಮಾಜಿಕ ಜಾಲತಾಣ ಮೂಲಕ ಗ್ರಾಹಕರು ಆರ್ಡರ್‌ಗಳನ್ನು ನೀಡುತ್ತಿದ್ದು, ಒಟ್ಟಾರೆ ವ್ಯವಹಾರದಲ್ಲಿ ಶೇ.50ರಷ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ.