Advertisement

ರಾಜ್ಯದ 18 ಜಿಲ್ಲೆಗಳಲ್ಲೂ ಕೋವಿಡ್‌ 19 ಅಬ್ಬರ

07:21 AM May 22, 2020 | Lakshmi GovindaRaj |

ಬೆಂಗಳೂರು: ಗುರುವಾರ ಒಂದೇ ದಿನ ರಾಜ್ಯದ 18 ಜಿಲ್ಲೆಗಳಲ್ಲಿಯೂ ಕೋವಿಡ್‌ 19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 147 ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 1,609ಕ್ಕೆ  ಏರಿಕೆಯಾಗಿದ್ದು, 996 ಸಕ್ರಿಯ ಪ್ರಕರಣಗಳಿವೆ. ಮಂಡ್ಯದಲ್ಲಿ ಮುಂಬೈನಿಂದ ಬಂದ ವಲಸೆ ಕಾರ್ಮಿಕರ ಸೋಂಕು ಪ್ರಕರಣಗಳು ನಿರಂತರ ಏರಿಕೆಯಾಗುತ್ತಿದ್ದು, ಗುರುವಾರ 33 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಂತೆಯೇ  ಮಹಾರಾಷ್ಟ್ರದ ವಿವಿಧ ನಗರದಿಂದ ಬಂದವರಲ್ಲಿ ಉಡುಪಿಯಲ್ಲಿ 21 ಮಂದಿ, ಹಾಸನದಲ್ಲಿ 11 ಮಂದಿ, ಬಳ್ಳಾರಿಯಲ್ಲಿ 11 ಮಂದಿ ಸೋಂಕಿತರಾದ ಹಿನ್ನೆಲೆ ಆಯಾ ಜಿಲ್ಲೆಗಳಲ್ಲಿ ಎರಡಂಕಿ ಪ್ರಕರಣಗಳು ವರದಿಯಾಗಿವೆ.

Advertisement

ದುಬೈನಿಂದ ಬಂದ 7 ಮಂದಿಗೆ ಸೋಂಕು: ದುಬೈನಲ್ಲಿ ಸಿಲುಕಿದ್ದ ಕನ್ನಡಿಗರನ್ನು ಇತ್ತೀಚೆಗೆ ವಿಶೇಷ ವಿಮಾನದಲ್ಲಿ ರಾಜ್ಯಕ್ಕೆ ಕರೆತರಲಾಗಿತ್ತು. ಈ ಪೈಕಿ ಗುರುವಾರ ದಕ್ಷಿಣ ಕನ್ನಡದಲ್ಲಿ 6 ಮಂದಿ ಹಾಗೂ ಉಡುಪಿಯಲ್ಲಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟಾರೆ ಲಾಕ್‌ಡೌನ್‌ನಿಂದ ವಿದೇಶದಲ್ಲಿ ಸಿಲುಕಿ ವಂದೇ ಭಾರತ್‌ ಅಭಿಯಾನದಡಿ ಕರ್ನಾಟಕಕ್ಕೆ ಬಂದರಲ್ಲಿ ದಕ್ಷಿಣ ಕನ್ನಡದ 21 ಮಂದಿ, ಉಡುಪಿಯ ಆರು ಮಂದಿ, ಬೆಂಗಳೂರಿನ ಒಬ್ಬ ಸೇರಿ ಒಟ್ಟು 28  ಮಂದಿಗೆ ಸೋಂಕು ತಗುಲಿದಂತಾಗಿದೆ.

ಏಳು ಸಾವಿರಕ್ಕೂ ಹೆಚ್ಚು ಪರೀಕ್ಷೆ: ಗುರುವಾರ ರಾಜ್ಯದಲ್ಲಿ ಒಟ್ಟು 7,516 ಮಂದಿ ಶಂಕಿತರ ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ 7,285 ಮಂದಿ ವರದಿ ನೆಗೆಟಿವ್‌, 143 ಮಂದಿ ವರದಿ ಪಾಸಿಟಿವ್‌ ಬಂದಿದ್ದು, ಬಾಕಿ  ವರದಿಗಳ ಫ‌ಲಿತಾಂಶ ಬರಬೇಕಿದೆ. ಒಟ್ಟಾರೆ ಇಲ್ಲಿಯವರೆಗೂ 1,71,484 ಮಂದಿ ಶಂಕಿತರ ವರದಿಗಳು ನೆಗೆಟಿವ್‌ ಬಂದಿದೆ. ಸದ್ಯ ರಾಜ್ಯದಲ್ಲಿ 46 ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿ ನಾಲ್ಕು  ಪ್ರಯೋಗಾಲಯಗಳಿಗೆ ಕೇಂದ್ರದಿಂದ ಅನುಮತಿ ಸಿಕ್ಕಿದೆ.

15 ಮಂದಿ ಗುಣಮುಖ: ಸೋಂಕಿತರ ಪೈಕಿ ಬಾಗಲಕೋಟೆಯಲ್ಲಿ 6 ಮಂದಿ, ದಾವಣಗೆರೆಯಲ್ಲಿ 5, ದಕ್ಷಿಣ ಕನ್ನಡದಲ್ಲಿ ಮೂವರು, ಮಂಡ್ಯದಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ಒಟ್ಟಾರೆ ಗುಣಮುಖರಾದವರ ಸಂಖ್ಯೆ 571,  ಸಾವಿಗೀಡಾದವರು 41 ಮಂದಿ.

ಗುರುವಾರ ಜಿಲ್ಲಾವಾರು ಸೋಂಕಿತರು/ ಸೋಂಕಿನ ಹಿನ್ನೆಲೆ
* ಮಂಡ್ಯ- 33. ಮುಂಬೈನಿಂದ ಹಿಂದಿರುಗಿದ್ದ ಸೋಂಕಿತನ ಸಂಪರ್ಕದಿಂದ ನಾಲ್ಕು ಮಂದಿ, ಮಹಾರಾಷ್ಟ್ರ ವಿವಿಧ ನಗರಗಳ ಪ್ರಯಾಣ ಹಿನ್ನೆಲೆ 29 ಮಂದಿ.
* ಉಡುಪಿ – 26. ಮಹಾರಾಷ್ಟ್ರದ ವಿವಿಧ ನಗರಗಳ ಪ್ರಯಾಣ ಹಿನ್ನೆಲೆ 21 ಮಂದಿ, ತೆಲಂಗಾಣ ಪ್ರಯಾಣ ಹಿನ್ನೆಲೆ ನಾಲ್ಕು ಮಂದಿ, ಯುಎಇನಿಂದ ಭಾರತಕ್ಕೆ ಮರಳಿದ್ದ ಓರ್ವ.
* ಹಾಸನ – 13. ಎಲ್ಲಾ ಮುಂಬೈ ನಗರ ಪ್ರಯಾಣ ಹಿನ್ನೆಲೆ.
* ಬಳ್ಳಾರಿ – 11. ಎಲ್ಲಾ ಮುಂಬೈ ನಗರ ಪ್ರಯಾಣ ಹಿನ್ನೆಲೆ.
* ಬೆಳಗಾವಿ – 9, ಜಾರ್ಖಂಡ್‌ ಪ್ರಯಾಣ ಹಿನ್ನೆಲೆ ಮೂವರು, ಅಜ್ಮಿರ್‌ ಧಾರ್ಮಿಕ ಪ್ರವಾಸ ಇಬ್ಬರು, ಮಹಾರಾಷ್ಟ್ರದ ವಿವಿಧ ನಗರಗಳಿಂದ ನಾಲ್ಕು ಮಂದಿ.
* ಬೆಂಗಳೂರು – 6 . ಸೋಂಕಿತರ ಸಂಪರ್ಕದಿಂದ.
* ಉತ್ತರ ಕನ್ನಡ- 7. ಎಲ್ಲಾ ಮುಂಬೈ ಪ್ರಯಾಣ ಹಿನ್ನೆಲೆ.
* ದಕ್ಷಿಣ ಕನ್ನಡ – 6. ಎಲ್ಲಾ ಯುಎಇ ಪ್ರಯಾಣ ಹಿನ್ನೆಲೆ (ವಿದೇಶದಿಂದ ಮರಳಿದವರು).
* ಶಿವಮೊಗ್ಗ – 5 ತಮಿಳುನಾಡು ಪ್ರಯಾಣ ಹಿನ್ನೆಲೆ, ತೀವ್ರ ಉಸಿರಾಟ ಸಮಸ್ಯೆ ಹಿನ್ನೆಲೆ ಒಬ್ಬರು.
* ಧಾರವಾಡ- 5, ಮುಂಬೈ ಪ್ರಯಾಣ ಹಿನ್ನೆಲೆ 3 ಮಂದಿ, ತೆಲಂಗಾಣ ಪ್ರಯಾಣ ಹಿನ್ನೆಲೆ ಇಬ್ಬರು.
* ರಾಯಚೂರು -5 ಎಲ್ಲಾ ಮಹಾರಾಷ್ಟ್ರದ ವಿವಿಧ ನಗರಗಳ ಪ್ರಯಾಣ ಹಿನ್ನೆಲೆ.
* ದಾವಣಗೆರೆ – 3. ಸೋಂಕಿತರ ಸಂಪರ್ಕದಿಂದ ಇಬ್ಬರು, ಒಬ್ಬರ ಸೋಂಕಿನ ಸಂಪರ್ಕ ಪತ್ತೆ ಮಾಡಲಾಗುತ್ತಿದೆ.
* ಚಿಕ್ಕಬಳ್ಳಾಪುರ – 6. ಸೋಂಕಿತರ ಸಂಪರ್ಕ ಇಬ್ಬರು, ಮುಂಬೈ ಪ್ರಯಾಣ ಹಿನ್ನೆಲೆ ನಾಲ್ಕು.
* ತುಮಕೂರು- ಮೈಸೂರು – ವಿಜಯಪುರ ತಲಾ – 1. ಮುಂಬೈ ಪ್ರಯಾಣ ಹಿನ್ನೆಲೆ.
* ಗದಗ – 2. ಮುಂಬೈ ಓರ್ವ, ಛತ್ತೀಸ್‌ಘಡ ಪ್ರಯಾಣ ಹಿನ್ನೆಲೆ ಓರ್ವ.
* ಕೋಲಾರ – 2, ಮುಂಬೈ ಪ್ರಯಾಣ ಹಿನ್ನೆಲೆ ಒಬ್ಬ, ಸೋಂಕಿತರ ಸಂಪರ್ಕದಿಂದ ಒಬ್ಬ.

Advertisement
Advertisement

Udayavani is now on Telegram. Click here to join our channel and stay updated with the latest news.

Next