Advertisement
ದೊಡ್ಡಬಳ್ಳಾಪುರದ ಮೂವರು ಸೋಂಕಿತರು ಮುಂಬೈನಿಂದ ಬಂದಿದ್ದವರಾಗಿದ್ದರೆ, ನೆಲಮಂಗಲ ತಾಲೂಕಿನ ತಾಲೂಕಿನ ವೀರಸಾಗರದ 55 ವರ್ಷದ ರೈತ ಮಹಿಳೆ ಯಲ್ಲಿ ಸೋಂಕು ಪತ್ತೆಯಾಗಿದೆ. ತಾಲೂಕಿನ ತಿಪ್ಪೂರು ಗ್ರಾಪಂ ವ್ಯಾಪ್ತಿಯ ಹೊಸಹಳ್ಳಿ ತಾಂಡ್ಯದ 6 ಮಂದಿ ಕಾರ್ಮಿಕರು ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದು, ಅವರಲ್ಲಿ 3 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.
Related Articles
Advertisement
ನೆಲಮಂಗಲಕ್ಕೆ ಕಾಲಿಟ್ಟ ಕೋವಿಡ್ 19: ತಾಲೂಕಿನ ವೀರಸಾಗರದ 55 ವರ್ಷದ ರೈತ ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಪರೀಕ್ಷೆ ನಂತರ (ಪಿ.1686) ಕೋವಿಡ್ 19 ಪಾಸಿಟಿವ್ ಎಂದು ಗೊತ್ತಾಗಿದೆ. ಸೋಂಕಿತೆ 20 ದಿನಗಳ ಹಿಂದೆ ಕೊರಟಗೆರೆ ತಾಲೂಕಿನ ಬೈಚನಹಳ್ಳಿ ಗ್ರಾಮದ ಅಣ್ಣನ ಮನೆಗೆ ಹೋಗಿದ್ದರು. ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕ್ವಾರಂಟೈನ್: ತಾಲೂಕಿನಲ್ಲಿ ಸೋಂಕಿತ ಮಹಿಳೆ ಸಂಪರ್ಕದಲ್ಲಿದ್ದ 11 ಮಂದಿಯನ್ನು ಕ್ವಾರಂಟೈನ್‌ನಲ್ಲಿರಿಸಬೇಕಾಗಿದ್ದು, ಸೋಂಕಿತ 1207ರ ಸಂಪರ್ಕದ ಅಲಂಕಾರ್ ಡಾಬದ 9 ಮಂದಿ, ಸೋಂಕಿತ 1364ರ ಸಂಪರ್ಕದ ಹುಲ್ಲರಿವೆ ಗ್ರಾಮದ 7 ಜನರು ಸೇರಿದಂತೆ ತಾಲೂಕಿನಲ್ಲಿ 82 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.
ಮಹಿಳೆಗೆ ಪಾಸಿಟಿವ್ ಪತ್ತೆಯಾದ ಬೆನ್ನಲ್ಲೆ ವೀರಸಾಗರಕ್ಕೆ ಭೇಟಿನೀಡಿದ ತಾಲೂಕು ಆರೋಗ್ಯಾಧಿಕಾರಿಗಳ ತಂಡ ಪ್ರಾಥಮಿಕ ಸಂಪರ್ಕದ ಮಾಹಿತಿ ಪಡೆದು ಮನೆಗಳ ಮೇಲೆ ಎಚ್ಚರಿಕೆ ಸಂದೇಶದ ಜತೆ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇರುವಂತೆ ಸಲಹೆ ನೀಡಿದ್ದಾರೆ.