Advertisement

ಮುಂದಿನ ವಾರದಲ್ಲಿ 2-6 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯ 2ನೇ ಡೋಸ್ ಪ್ರಯೋಗ..!

12:29 PM Jul 23, 2021 | Team Udayavani |

ನವ ದೆಹಲಿ : ಕೋವಿಡ್ 19 ಲಸಿಕಾ ಪ್ರಯೋಗಗಳ ಭಾಗವಾಗಿ, ಭಾರತ್ ಬಯೋಟೆಕ್ ಸಂಸ್ಥೆ ಮುಂದಿನ ವಾರ 2 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Advertisement

ಈಗಾಗಲೆ 6 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಎರಡನೇ ಡೋಸ್ ನ ಪ್ರಯೋಗ ದೆಹಲಿಯ ಆಲ್ ಇಂಡಿಯಾ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ನಲ್ಲಿ ಮಾಡಲಾಗಿದೆ.

ಇದನ್ನೂ ಓದಿಕಾಂಗ್ರೆಸ್ ಗೆ ಬರಬೇಕೆಂದು ಇಷ್ಟ ಇರೋರು ಬಹಳಷ್ಟು ಜನ ಇದ್ದಾರೆ, ಆದ್ರೆ ಹೆಸರೇಳಲ್ಲ : ಡಿಕೆಶಿ

ದೆಹಲಿಯ ಏಮ್ಸ್ ಲಸಿಕಾ ಪ್ರಯೋಗ ಕೇಂದ್ರದಲ್ಲಿ ಈಗಾಗಲೇ 18 ವರ್ಷದ ಒಳಗಿನವರಿಗೆ ಲಸಿಕೆ ಪ್ರಯೋಗವನ್ನು ಮಾಡಲಾಗಿದೆ. ಈ ಪ್ರಯೋಗಾತ್ಮಕ ಪರೀಕ್ಷೆಯ ಎಲ್ಲಾ ಫಲಿತಾಂಶವು ಎಲ್ಲಾ ವರ್ಷದ ಗುಂಪಿನ ಪ್ರಯೋಗಳು ಮುಗಿದು ಒಂದು ತಿಂಗಳಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.

ಲಸಿಕಾ ಪ್ರಯೋಗಾತ್ಮಕ ಪರೀಕ್ಷೆಗೆ 12 ರಿಂದ 18, 6 ರಿಂದ 12 ಹಾಗೂ 2 ರಿಂದ 6 ವರ್ಷಗಳ ಮೂರು ಗುಂಪುಗಳನ್ನಾಗಿ ಮಾಡಲಾಗಿದ್ದು, ಸದ್ಯ 2 ರಿಂದ 6 ವರ್ಷದ ಮಕ್ಕಳಿಗೆ ಲಸಿಕೆಯ ಎರಡನೇ ಡೋಸ್ ನೀಡುವ ಪ್ರಯೋಗಕ್ಕೆ ಮುಂದಾಗಿದೆ.

Advertisement

ಇನ್ನು, ಇತ್ತೀಚೆಗೆ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆಯ ಪ್ರಯೋಗವನ್ನು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ದೆಹಲಿ ಹೈ ಕೋರ್ಟ್ ಗೆ ಕೇಂದ್ರ ಹೇಳಿದೆ.

ಇದನ್ನೂ ಓದಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 35,342 ಕೋವಿಡ್ ಪ್ರಕರಣ ಪತ್ತೆ, 483 ಮಂದಿ ಸಾವು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next