Advertisement

ಕೋವಿಡ್‌ 19: ಒಂದೇ ದಿನ 39 ಸೋಂಕು ದೃಢ!

05:25 AM May 31, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಒಟ್ಟು 39 ಕೋವಿಡ್‌ 19 ಪ್ರಕರಣಗಳು ದೃಢಪಟ್ಟಿವೆ. ಡಿ.ಜಿ ಹಳ್ಳಿಯ ಒಂದೇ ಕುಟುಂಬದ 14ಜನರಲ್ಲಿ ಕೋವಿಡ್‌ 19 ಸೋಂಕು ದೃಢಪಟ್ಟಿದೆ. ಡಿ.ಜಿ ಹಳ್ಳಿಯಲ್ಲಿ ಕೋವಿಡ್‌ 19  ಸೋಂಕು ದೃಢಪಟ್ಟ ಮಹಿಳೆಯ (ರೋಗಿ ಸಂಖ್ಯೆ -2810)ಸಂಪರ್ಕದಲ್ಲಿದ್ದ 44 ಜನರನ್ನು ಕ್ವಾರಂಟೈನ್‌ ಮಾಡಲಾಗಿತ್ತು.

Advertisement

ಇವರಲ್ಲಿ 14 ಜನರಿಗೆ ಕೋವಿಡ್‌ 19 ಸೋಂಕು ದೃಢಪಟ್ಟಿದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು  ತಿಳಿಸಿದ್ದಾರೆ. ನಗರದಲ್ಲಿ ಶನಿವಾರ ಒಟ್ಟು 39 ಜನರಲ್ಲಿ ಕೋವಿಡ್‌ 19 ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 339ಕ್ಕೆ ಏರಿಕೆಯಾದಂತಾಗಿದೆ. ಪಾದರಾಯನಪುರ ಪಾಲಿಕೆ ಸದಸ್ಯ ಇಮ್ರಾನ್‌ಪಾಷಾ ಅವರಿಗೆ (ಪಿ.2825) ಸೋಂಕು  ದೃಢಪಟ್ಟಿತ್ತು. ಇವರನ್ನು ಶನಿವಾರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪಾದರಾಯನ ಪುರದಲ್ಲಿ ಸಾಮುದಾಯಿಕ ಸೋಂಕು ಪರೀಕ್ಷೆಯಲ್ಲಿ ಮತ್ತಿಬ್ಬರಿಗೆ ಕೋವಿಡ್‌ 19 ದೃಢಪಟ್ಟಿದೆ. ರೂಪೇನ ಅಗ್ರಹಾರದಲ್ಲಿ 25 ವರ್ಷದ  ಗರ್ಭಿಣಿಯೊಬ್ಬರಿಗೆ, ಚಲವಾದಿಪಾಳ್ಯದಲ್ಲಿ 19 ವರ್ಷದ ಮತ್ತೂಬ್ಬ ಗರ್ಭಿಣಿಗೆ ಸೋಂಕು ದೃಢಪಟ್ಟಿದೆ. ಈ ಎರಡು ಪ್ರಕರಣಗಳು ಸೇರಿದಂತೆ ಉಳಿದ 22 ಜನರಿಗೆ ಯಾವ ಸಂಪರ್ಕದಿಂದ ಸೋಂಕು ತಗುಲಿದೆ ಎಂಬುದು ಪತ್ತೆಯಾಗಿಲ್ಲ.  ಇವುಗಳಲ್ಲಿ ( 22 ಪ್ರಕರಣಗಳಲ್ಲಿ) 9 ಪ್ರಕರಣಗಳು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿವೆ.

21 ಜನ ಬಿಡುಗಡೆ: ಶನಿವಾರ 21ಜನ ಕೋವಿಡ್‌ 19 ಸೋಂಕು ಮುಕ್ತರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆ ಯಾಗಿದ್ದಾರೆ. ಹೀಗಾಗಿ,ನಗರದಲ್ಲಿ  ಒಟ್ಟು ಗುಣಮುಖ ರಾದವರ ಸಂಖ್ಯೆ 172ಕ್ಕೆ ಏರಿಕೆಯಾದಂತಾಗಿದೆ. ಇನ್ನು 153 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next