Advertisement

ಔಷಧ ಇಲ್ಲದೆ ಸೋಂಕು ಗೆದ್ದ ಗಟ್ಟಿಗಿತ್ತಿ!

01:24 AM Mar 21, 2020 | Hari Prasad |

ಮೆಲ್ಬೊರ್ನ್ ನಲ್ಲಿ ಸೋಂಕಿಗೆ ತುತ್ತಾಗಿದ್ದ 47 ವರ್ಷದ ಮಹಿಳೆಯೊಬ್ಬರು ಯಾವುದೇ ಔಷಧಗಳ ನೆರವಿಲ್ಲದೆ 10 ದಿನದಲ್ಲಿ ಸೋಂಕಿನಿಂದ ಪಾರಾಗಿದ್ದಾರೆ. ಈ ಬಗ್ಗೆ “ನೇಚರ್‌ ಮೆಡಿಸಿನ್‌ ಜರ್ನಲ್‌’ನಲ್ಲಿ ಲೇಖನ ಪ್ರಕಟವಾಗಿದೆ.

Advertisement

ಕೋವಿಡ್ 19ನ ತವರು ಮನೆಯೆನಿಸಿದ ಚೀನದ ವುಹಾನ್‌ಗೆ ಕೆಲವು ತಿಂಗಳ ಹಿಂದೆ ಪ್ರವಾಸ ಹೋಗಿ ಬಂದಿದ್ದರಿಂದ ಆಕೆಗೆ ಸೋಂಕು ತಗುಲಿತ್ತು. ಆಕೆಯ ದೇಹ ಅಗತ್ಯ ಸಂಖ್ಯೆಯಲ್ಲಿ ಪ್ರತಿಜೀವಗಳನ್ನು (ಆ್ಯಂಟಿ ಬಾಡೀಸ್‌) ಉತ್ಪತ್ತಿ ಮಾಡಿದ್ದರಿಂದ 10 ದಿನಗಳಲ್ಲಿ ಸೋಂಕು ಮಾಯವಾಗಿದೆ ಎಂದು ಈಕೆಯ ಪ್ರಕರಣವನ್ನು ಅಧ್ಯಯನ ಮಾಡಿರುವ ತಜ್ಞರು ತಿಳಿಸಿದ್ದಾರೆ.

ಕಿಟ್‌ ತಯಾರಿಕೆಗೆ ಅನುಮತಿ: ಸ್ವಿಟರ್ಲೆಂಡ್‌ ಮೂಲದ “ರೋಚ್‌ ಡಯಾಗ್ನೋಸ್ಟಿಕ್ಸ್‌ ಇಂಡಿಯಾ’ ಎಂಬ ಖಾಸಗಿ ಸಂಶೋಧನಾ ಸಂಸ್ಥೆಗೆ ಕೊರೊನಾ ತಪಾಸಣೆ ಮಾಡುವ ಕಿಟ್‌ಗಳನ್ನು ತಯಾರಿಸಲು ಕೇಂದ್ರ ಔಷಧ ಗುಣಮಟ್ಟ ಹಾಗೂ ನಿಯಂತ್ರಣ ಸಂಸ್ಥೆ (ಸಿಡಿಸಿಎಸ್‌ಒ) ಲೈಸನ್ಸ್‌ ನೀಡಿದೆ. ಭಾರತದ ಟ್ವಿವಿಟ್ರಾನ್‌ ಹೆಲ್ತ್‌ಕೇರ್‌ ಹಾಗೂ ಮೈಲ್ಯಾಬ್‌ ಡಿಸ್ಕವರಿ ಸೊಲ್ಯೂಷನ್ಸ್‌ ಕಂಪೆನಿಗಳೂ ಅನುಮತಿಗಾಗಿ ಕಾಯುತ್ತಿವೆ.

ನಮ್ಮಲ್ಲೇ ಔಷಧ ತಯಾರು?: ಖ್ಯಾತ ಔಷಧ ತಯಾರಿಕಾ ಕಂಪೆನಿಯಾದ ಸಿಪ್ಲಾ ಹಾಗೂ ಸರಕಾರಿ ಸಂಸ್ಥೆಗಳಾದ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನ ಕೌನ್ಸೆಲ್‌ (ಸಿಐಎಸ್‌ಆರ್‌) ಹಾಗೂ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಕೆಮಿಕಲ್‌ ಟೆಕ್ನಾಲಜಿ (ಐಐಸಿಟಿ), ಜಂಟಿ ಸಹಬಾಗಿತ್ವದಲ್ಲಿ ಕೊರೊನಾ ವೈರಸ್‌ ಚಿಕಿತ್ಸೆಗೆ ಔಷಧ ಕಂಡುಹಿಡಿ ಯುವ ಸಾಹಸಕ್ಕೆ ಕೈ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next