Advertisement

ಕೇರಳದಲ್ಲೊಂದು ಹೈಡ್ರಾಮಾ; ಸೋಂಕಿತ ವಶಕ್ಕೆ!

12:15 AM Mar 21, 2020 | Hari Prasad |

ಕೊರೊನಾ ವ್ಯಾಪಿಸದಂತೆ ಸರಕಾರಗಳು ಹರಸಾಹಸ ಪಡುತ್ತಿರುವಂತೆಯೇ ಕೇರಳದಲ್ಲೊಂದು ಹೈಡ್ರಾಮಾ ನಡೆದಿದೆ. 18 ಮಂದಿ ಪ್ರವಾಸಿಗರ ತಂಡದೊಂದಿಗೆ ಕೇರಳಕ್ಕೆ ಬಂದಿದ್ದ ಯು.ಕೆ. ನಾಗರಿಕರೊಬ್ಬರು ಮುನ್ನಾರ್‌ನ ರೆಸಾರ್ಟ್‌ನ ನಿಗಾ ಕೇಂದ್ರದಿಂದ ತಪ್ಪಿಸಿಕೊಂಡು, ದುಬಾೖಗೆ ಇನ್ನೇನು ಹಾರಬೇಕು ಎನ್ನುವಷ್ಟರಲ್ಲಿ ಸಿಕ್ಕಿಬಿದ್ದಿದ್ದಾರೆ.

Advertisement

ನಿಗಾ ಕೇಂದ್ರದಿಂದ ತಪ್ಪಿಸಿ ಡು ಆ ವ್ಯಕ್ತಿ ತನ್ನ ತಂಡದೊಂದಿಗೆ ಕೊಚ್ಚಿಯಿಂದ ದುಬಾೖಗೆ ತೆರಳುತ್ತಿದ್ದ ವಿಮಾನ ಹತ್ತಿದ್ದ. ಆ ವ್ಯಕ್ತಿಗೆ ಕೊರೊನಾ ಸೋಂಕಿರುವುದು ದೃಢವಾಗುತ್ತಿದ್ದಂತೆ, ಆತ ವಿಮಾನ ನಿಲ್ದಾಣ ತಲುಪಿರುವ ಮಾಹಿತಿ ಸಿಕ್ಕಿತು. ಅಷ್ಟರಲ್ಲಿ ಅವರೆಲ್ಲರೂ ವಿಮಾನ ಹತ್ತಿಯಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ವಿಮಾನದಲ್ಲಿದ್ದ ಎಲ್ಲ 290 ಪ್ರಯಾಣಿಕರನ್ನೂ ಕೆಳಗಿಳಿಸಿದರು.

ಅನಂತರ, ಸೋಂಕಿತ ವ್ಯಕ್ತಿ ಮತ್ತು ಆತನೊಂದಿಗಿದ್ದ 18 ಮಂದಿಯನ್ನು ವಶಕ್ಕೆ ಪಡೆದು, ಉಳಿದವರನ್ನು ವಿಮಾನ ಹತ್ತಿಸಿದರು. ಈಗ ಸೋಂಕಿತ ಮತ್ತು ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ 17 ಮಂದಿಯನ್ನು ನಿಗಾ ಕೇಂದ್ರಕ್ಕೆ ಕಳುಹಿ ಸಲಾಗಿದೆ ಎಂದು ಕೇರಳ ಸಚಿವ ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ರೋಗಲಕ್ಷಣ ಇಲ್ಲದಿದ್ರೂ ಹರಡುತ್ತಿದೆ ಸೋಂಕು?
ರೋಗಲಕ್ಷಣ ಕಂಡುಬರದೇ ಇರುವಂಥ ಸೋಂಕಿತ ವ್ಯಕ್ತಿಗಳಿಂದಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹಬ್ಬುತ್ತಿದೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಮೆಸಾಚ್ಯುಸೆಟ್ಸ್‌ ನಲ್ಲಿ ನಡೆಸಲಾದ ಅಧ್ಯಯನವೊಂದು ಈ ವಿಚಾರ ತಿಳಿಸಿದೆ.

ಇಲ್ಲಿ ಕನಿಷ್ಠ 82 ಪ್ರಕರಣಗಳು ರೋಗಲಕ್ಷಣ ಕಂಡುಬರದೇ ಇದ್ದಂಥ ವ್ಯಕ್ತಿಗಳಿಂದಲೇ ಹಬ್ಬಿರುವುದುಗೊತ್ತಾಗಿದೆ. 6ಕ್ಕೂ ಹೆಚ್ಚು ಅಧ್ಯಯನಗಳು ಇದೇ ವಾದ ಮಂಡಿಸಿದ್ದು, ಬಹುತೇಕ ಸೋಂಕಿನ ಪ್ರಕರಣಗಳಿಗೆ ಕೆಮ್ಮು, ನೆಗಡಿ, ಜ್ವರ ಕಂಡುಬರದೇ ಇರುವವರಿಂದಲೇ ಹರಡಿದೆ ಎಂದಿವೆ.

Advertisement

ವೈರಲ್‌ ಬೈಟ್ಸ್‌
– ವೈರಸ್‌ ಭೀತಿಯಿಂದ ಭಾರತ-ಬಾಂಗ್ಲಾದೇಶ ಪ್ರಯಾಣಿಕ ರೈಲು ಸೇವೆ ರದ್ದು
– ಪಾಕಿಸ್ಥಾನದ ಕರ್ತಾರ್ಪುರ ಸಾಹಿಬ್‌ ಗುರುದ್ವಾರ ಯಾತ್ರೆ ಸ್ಥಗಿತ
– ಸ್ಪೇನ್‌ನ ಪ್ರಧಾನಿ ಪೆಡ್ರೋ ಸ್ಯಾಂಚೆಝ್ ಅವರ ಪತ್ನಿ ಬೆಗೋನಾ ಗೋಮೆಜ್‌ ಅವರಿಗೂ ಕೊರೊನಾ ಸೋಂಕು ತಗುಲಿರುವುದು ದೃಢ.
– ಬಕಿಂಗ್‌ಹ್ಯಾಂ ಅರಮನೆಯಿಂದ ವಿಂಡ್ಸರ್‌ ಕ್ಯಾಸಲ್‌ಗೆ ರಾಣಿ 2ನೇ ಎಲಿಜಬೆತ್‌ ಶಿಫ್ಟ್.
– ಸಾಮೂಹಿಕ ಪ್ರವಾಸ ಕೈಗೊಳ್ಳದಂತೆ ಟೂರ್‌ ಆಪರೇಟರ್‌ಗಳಿಗೆ ಮಹಾರಾಷ್ಟ್ರ ಪೊಲೀಸರ ಆದೇಶ; ನಿಷೇಧಾಜ್ಞೆ ಜಾರಿ.
– ಪಶ್ಚಿಮ ಬಂಗಾಲದ ರೆಡ್‌ ಲೈಟ್‌ ಏರಿಯಾ ಖಾಲಿ ಖಾಲಿ. ಗ್ರಾಹಕರಿಲ್ಲದೇ ಭಣಗುಡುತ್ತಿರುವ ಪ್ರದೇಶ. ಬದುಕು ಸಾಗಿಸಲು ಹೆಣಗಾಡುತ್ತಿರುವ ಲೈಂಗಿಕ ಕಾರ್ಯಕರ್ತೆಯರು
– ಮಾಸ್ಕ್ ತಯಾರಿಯಲ್ಲಿ ತೊಡಗಿರುವ ಮಧ್ಯಪ್ರದೇಶದ ಜೈಲಿನ ಕೈದಿಗಳು. ಆರೋಗ್ಯ ಇಲಾಖೆಗೆ 2 ಸಾವಿರ ಮಾಸ್ಕ್ ಪೂರೈಕೆ
– ಪಾಕಿಸ್ಥಾನದಲ್ಲಿ ಸೋಂಕಿತರ ಸಂಖ್ಯೆ 53ಕ್ಕೇರಿಕೆ
– ಆಂಧ್ರಪ್ರದೇಶದ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆ
– ವಿದೇಶ ಪ್ರವಾಸದಿಂದ ಯುಎಇಗೆ ವಾಪಸಾದ ಭಾರತೀಯನಿಗೆ ಸೋಂಕು ದೃಢ
– ತಮಿಳುನಾಡಿನಲ್ಲೂ ಮಾ.31ರವರೆಗೆ ಕೆಜಿ, ಪ್ರಾಥಮಿಕ ಶಾಲೆಗಳಿಗೆ ರಜೆ, ಸಿನೆಮಾ ಮಂದಿರಗಳನ್ನು ಮುಚ್ಚಲು ಆದೇಶ
– ಅಮೆರಿಕ ಅಧ್ಯಕ್ಷ ಟ್ರಂಪ್‌ ರಕ್ತದ ಮಾದರಿ ಪರೀಕ್ಷೆ- ಕೊರೊನಾ ಇಲ್ಲ ಎಂದು ದೃಢ.

Advertisement

Udayavani is now on Telegram. Click here to join our channel and stay updated with the latest news.

Next