Advertisement

ಕೋವಿಡ್ ಸೋಂಕಿನ ಚೇತರಿಕೆ ಪ್ರಮಾಣ ಶೇ.81.25

04:33 PM Sep 28, 2020 | Nagendra Trasi |

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರು ಚೇತರಿಸಿಕೊಳ್ಳುತ್ತಿರುವ ಪ್ರಮಾಣ ಸತತ ಐದನೇ ದಿನವೂ ಹೆಚ್ಚಾಗಿದೆ. ಶೇಕಡಾವರು ಹೇಳುವುದಿದ್ದರೆ ಅದರ ಪ್ರಮಾಣ 81.25 ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

Advertisement

ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 89,746 ಮಂದಿ ಚೇತರಿಸಿಕೊಳ್ಳುವ ಮೂಲಕ ಒಟ್ಟು ಗುಣಮುಖರ ಸಂಖ್ಯೆ 45,87,613 ಆಗಿದೆ. ಮತ್ತೂಂದೆಡೆ ದೇಶದಲ್ಲಿ ಸೋಂಕಿತರ ಸಂಖ್ಯೆಗೆ ಹೊಸತಾಗಿ 90,020 ಸೇರ್ಪಡೆ ಯಾಗಿದ್ದರೆ, 1,085 ಮಂದಿ ಸಾವಿಗೀಡಾಗಿದ್ದಾರೆ. ದೇಶ ದಲ್ಲಿ ಸೋಂಕಿನಿಂದಾಗಿ ಅಸುನೀಗಿದವರ ಒಟ್ಟು ಸಂಖ್ಯೆ90 ಸಾವಿರ ದಾಟಿದೆ.

ಶೇ.100 ಖಾತರಿ ಸಾಧ್ಯವಿಲ್ಲ:ಉಸಿರಾಟದ ತೊಂದರೆ ಶೇ.100ರಷ್ಟು ಪರಿಹಾರ ನೀಡಲು ಯಾವುದೇ ಲಸಿಕೆಯಿಂದ ಸಾಧ್ಯವಿಲ್ಲ. ಶೇ.50 ರಿಂದ ಶೇ.100ರಷ್ಟು ಖಾತರಿ ಇರುವ ಲಸಿಕೆಯನ್ನು ಕೊರೊನಾ ಸೋಂಕಿತರಿಗೆ ನೀಡಬಹುದು ಎಂದು ಐಸಿಎಂಆರ್‌ ನಿರ್ದೇಶಕ ಡಾ.ಬಲರಾಮ ಭಾರ್ಗವ ತಿಳಿಸಿದ್ದಾರೆ. ಸುರಕ್ಷತೆ, ರೋಗತಡೆ ಮತ್ತು ಪರಿಣಾಮಕಾರಿಯಾಗುತ್ತದೆ ಎಂಬ ವಿಶ್ವ ಆರೋಗ್ಯ ಸಂಸ್ಥೆ ಸೂಚನೆಯನ್ವಯ ಲಸಿಕೆಗೆ ಅನುಮೋದನೆ ನೀಡಬೇಕಾಗುತ್ತದೆ ಎಂದರು.

ಇದೇ ವೇಳೆ ಹೈದರಾಬಾದ್‌ನ ಭಾರತ್‌ ಬಯೋ ಟೆಕ್‌ ವಾಷಿಂಗ್ಟನ್‌ ವಿವಿಯ ವೈದ್ಯಕೀಯ ವಿಭಾಗದ ಜತೆಗೆ ಲಸಿಕೆ ಸಂಶೋಧನೆ ನಿಟ್ಟಿನಲ್ಲಿ ಒಪ್ಪಂದಕ್ಕೆ ಸಹಿ
ಹಾಕಿದೆ. ಅಮೆರಿಕ, ಜಪಾನ್‌ ಮತ್ತು ಐರೋಪ್ಯ ಒಕ್ಕೂಟ ಹೊರತುಪಡಿಸಿ ಉಳಿದೆಡೆ ಅದನ್ನು ಭಾರತ್‌ ಬಯೋಟೆಕ್‌ ಪೂರೈಸಲಿದೆ.

ಸೌದಿಗೆ ಹಾರಲ್ಲ ವಿಮಾನ
ಭಾರತದಿಂದ ಸೌದಿ ಅರೇಬಿಯಾಕ್ಕೆ ಯಾವುದೇ ವಿಮಾನಗಳು ಹಾರಾಟ ನಡೆಸುವು ದಿಲ್ಲ.ಕೊರೊನಾ ಹಿನ್ನೆಲೆಯಲ್ಲಿ ಈ ಸೌದಿ ಅರೇಬಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರ (ಜಿಎಸಿಎ) ಈ ಆದೇಶ ಹೊರಡಿಸಿದೆ.

Advertisement

ಭಾರತದ ಜತೆಗೆ ಬ್ರೆಜಿಲ್‌, ಅರ್ಜೆಂಟೀನಾಕ್ಕೆ ಕೂಡ ವಿಮಾನ ಸಂಚಾರ ನಡೆಸದೇ ಇರಲು ನಿರ್ಧರಿಸಿದೆ.ಕಳೆದ ಶನಿವಾರ ದುಬೈನಿಂದ ವಿಮಾನಯಾನ ರದ್ದುಗೊಳಿಸಲಾಗಿತ್ತು. ಸೌದಿ ಅರೇಬಿಯಾ ದಲ್ಲಿ ಭಾರತೀಯ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next