Advertisement
ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 89,746 ಮಂದಿ ಚೇತರಿಸಿಕೊಳ್ಳುವ ಮೂಲಕ ಒಟ್ಟು ಗುಣಮುಖರ ಸಂಖ್ಯೆ 45,87,613 ಆಗಿದೆ. ಮತ್ತೂಂದೆಡೆ ದೇಶದಲ್ಲಿ ಸೋಂಕಿ ತರ ಸಂಖ್ಯೆಗೆ ಹೊಸ ತಾಗಿ 90,020 ಸೇರ್ಪಡೆ ಯಾಗಿದ್ದರೆ, 1,085 ಮಂದಿ ಸಾವಿಗೀಡಾಗಿದ್ದಾರೆ. ಸೋಂಕಿನಿಂದಾಗಿ ಅಸುನೀಗಿದವರ ಸಂಖ್ಯೆ 90 ಸಾವಿರ ದಾಟಿದೆ. ಉಸಿರಾಟದ ತೊಂದರೆ ಶೇ.100ರಷ್ಟು ಪರಿಹಾರ ನೀಡಲು ಯಾವುದೇ ಲಸಿಕೆಯಿಂದ ಸಾಧ್ಯವಿಲ್ಲ. ಶೇ.50 ರಿಂದ ಶೇ.100ರಷ್ಟು ಖಾತರಿ ಇರುವ ಲಸಿಕೆಯನ್ನು ಕೋವಿಡ್ ಸೋಂಕಿತರಿಗೆ ನೀಡಬಹುದು ಎಂದು ಐಸಿಎಂಆರ್ ನಿರ್ದೇಶಕ ಡಾ| ಬಲರಾಮ ಭಾರ್ಗವ ತಿಳಿಸಿದ್ದಾರೆ. ಸುರಕ್ಷತೆ, ರೋಗತಡೆ ಮತ್ತು ಪರಿಣಾಮಕಾರಿಯಾಗುತ್ತದೆ ಎಂಬ ವಿಶ್ವ ಆರೋಗ್ಯ ಸಂಸ್ಥೆ ಸೂಚನೆಯನ್ವಯ ಲಸಿಕೆಗೆ ಅನುಮೋದನೆ ನೀಡಬೇಕಾಗುತ್ತದೆ ಎಂದರು.
ಭಾರತದಿಂದ ಸೌದಿ ಅರೇಬಿಯಾಕ್ಕೆ ಯಾವುದೇ ವಿಮಾನಗಳು ಹಾರಾಟ ನಡೆಸುವುದಿಲ್ಲ ಎಂದು ಸೌದಿ ಅರೇಬಿಯಾ ನಾಗರಿಕ ವಿಮಾನಯಾನ ಪ್ರಾಧಿಕಾರ (ಜಿಎಸಿಎ) ಈ ಆದೇಶ ಹೊರಡಿಸಿದೆ. ಜತೆಗೆ ಬ್ರೆಜಿಲ್, ಅರ್ಜೆಂಟೀನಾಕ್ಕೆ ಕೂಡ ವಿಮಾನ ಸಂಚಾರ ನಡೆಸದೇ ಇರಲು ನಿರ್ಧರಿಸಿದೆ. ಕಳೆದ ಶನಿ ವಾರ ದುಬೈನಿಂದ ವಿಮಾನಯಾನ ರದ್ದು ಗೊಳಿಸಲಾಗಿತ್ತು. ಸೌದಿ ಅರೇಬಿಯಾದಲ್ಲಿ ಭಾರ ತೀಯ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.