Advertisement

ಕೆಎಸ್‌ಆರ್‌ಪಿಯಲ್ಲಿ ಕೋವಿಡ್‌ 19 ಅಬ್ಬರ

05:24 AM Jun 23, 2020 | Lakshmi GovindaRaj |

ಬೆಂಗಳೂರು: ಸೀಲ್‌ಡೌನ್‌, ಲಾಕ್‌ಡೌನ್‌ ಹಾಗೂ ಕಂಟೈನ್ಮೆಂಟ್‌ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಎಸ್‌ಆರ್‌ಪಿ ಸಿಬ್ಬಂದಿಯಲ್ಲಿ ಮತ್ತೆ ಕೋವಿಡ್‌ 19 ಆರ್ಭಟಿಸಿದೆ. ಕೋರಮಂಗಲದ ನಾಲ್ಕನೇ ಬೆಟಾಲಿಯನ್‌ ನಲ್ಲಿ  ಞಮವಾರ ಆರು ಜನ ಸಿಬ್ಬಂದಿಯಲ್ಲಿ ಕಾಣಿಸಿಕೊಂಡಿದ್ದು, 230ಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಅಲ್ಲದೆ, ಸೋಂಕಿತರು ಪಾದರಾಯನಪುರ ಹಾಗೂ ಇನ್ನಿತರೆ ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರವಾಗಿ ಕರ್ತವ್ಯ  ನಿರ್ವಹಿಸುತ್ತಿದ್ದರು ಎಂದು ಕೆಎಸ್‌ಆರ್‌ಪಿ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

ಈ ಹಿನ್ನೆಲೆಯಲ್ಲಿ ನಾಲ್ಕನೇ ಬೆಟಾಲಿಯನ್‌ ಕ್ವಾರ್ಟರ್ಸ್‌ ನ ಪ್ರತಿಯೊಂದು ಮನೆ ಹಾಗೂ ರಸ್ತೆಗಳಲ್ಲಿ ಸ್ಯಾನಿಟೈಸರ್‌ ಸಿಂಪಡಿಸಲಾಗುತ್ತಿದೆ. ಕ್ವಾರಂಟೈನ್‌ ನಲ್ಲಿರುವ ಮನೆಗಳಿಗೆ ದಿನಸಿ ವಸ್ತುಗಳನ್ನು  ಪೂರೈಸಲಾಗುತ್ತಿದೆ. ಸೋಂಕಿತರು ಹಾಗೂ ಅವರ ಕುಟುಂಬ ಸದಸ್ಯರ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗಿದೆ ಎಂದು ಕೆಎಸ್‌ಆರ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೆ 3 ಠಾಣೆ ಸೀಲ್‌ಡೌನ್‌: ನಗರ ಪೊಲೀಸರಲ್ಲಿ ಕೋವಿಡ್‌ 19 ದಿನೇ ದಿನೆ ಹೆಚ್ಚಾಗುತ್ತಿದ್ದು, ಸೋಮವಾರ ಒಂದೇ ದಿನ ಆರು ಮಂದಿಗೆ ಸೋಂಕು ದೃಢಪಟ್ಟಿದೆ. ಹಲಸೂರು ಗೇಟ್‌ ಠಾಣೆ, ಕುಮಾರ ಸ್ವಾಮಿ ಲೇಔಟ್‌, ಕಬ್ಬನ್‌ ಪಾರ್ಕ್‌ ಹಾಗೂ  ಸಿಸಿಬಿಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿಗೆ ಸೋಂಕು ತಗುಲಿದೆ. ಸೋಂಕು ತಗುಲಿದ್ದವರ ಜತೆ ಸಂಪರ್ಕದಲ್ಲಿದ್ದ ಸುಮಾರು 50 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಸದ್ಯ ಮೂರು ಠಾಣೆಗಳನ್ನು  ತಾತ್ಕಾಲಿಕವಾಗಿ ಸೀಲ್‌ಡೌನ್‌ ಮಾಡಲಾಗಿದೆ. ಇದೀಗ ಸೋಂಕು ದೃಢಪಟ್ಟವರನ್ನು ಹಿಂದೆಯೇ ಕ್ವಾರಂಟೈನ್‌ ಮಾಡಲಾಗಿದ್ದು, ಅವರಲ್ಲಿ ಇದೀಗ ಸೋಂಕು ಪತ್ತೆಯಾಗಿದೆ. ಇದುವರೆಗೆ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 75 ಪೊಲೀಸರಿಗೆ ಸೋಂಕು ತಗುಲಿದೆ.

Advertisement

Udayavani is now on Telegram. Click here to join our channel and stay updated with the latest news.

Next