ಆನೇಕಲ್/ದೇವನಹಳ್ಳಿ: ಜಿಲ್ಲೆಯಲ್ಲಿ ಒಂದೇ ದಿನ 14 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ದೊಡ್ಡ ಬಳ್ಳಾಪುರದಲ್ಲಿ 1, ಆನೇಕಲ್‌ನಲ್ಲಿ 8, ದೇವನಹಳ್ಳಿಯಲ್ಲಿ 5 ಪ್ರಕರಣಗಳು ಪತ್ತೆಯಾಗಿದೆ. ತಾಲೂಕಿನ ಯರ್ತಿಗಾನಹಳ್ಳಿ ಗ್ರಾಮದ 39 ವರ್ಷದ ಮಹಿಳೆ, ದೇವನಹಳ್ಳಿ ನಗರದ ಶಾಂತಿ ನಗರದ ಜ್ಞಾನ ಗಂಗೋತ್ರಿ ಶಾಲಾ ರಸ್ತೆಯಲ್ಲಿರುವ 30 ವರ್ಷದ ಯುವಕ ಹಾಗೂ 24 ವರ್ಷದ ಕೋಡಿಮಂಚೇನಹಳ್ಳಿ ಯುವಕ,
ಗೋರಿಬಾಗಿಲಿನ 28 ವರ್ಷದ ಖಾಸಗಿ ಶಿಕ್ಷಕಿಯೊಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿರುತ್ತದೆ. ಅವರನ್ನು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ. ನಗರದ ಬಿಬಿ ರಸ್ತೆಯ ಸಮಾಜ ಕಲ್ಯಾಣ ಇಲಾಖೆ ಬಾಲಕರ ವಸತಿ ನಿಲಯದಲ್ಲಿ ಕ್ವಾರಂಟೈನ್‌ನಲ್ಲಿದ್ದವರ ಪೈಕಿ ಮೂವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟಿರುವ ಕಡೆಗಳಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಸಂಜಯ್ ನೇತೃತ್ವದಲ್ಲಿ ಆ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಈ ಪ್ರದೇಶಗಳಲ್ಲಿ ಕಂಟೈನ್‌ಮೆಂಟ್ ಜೋನ್ ಎಂದು ಗುರ್ತಿಸಲಾಗಿದ್ದು, ಸಾರ್ವಜನಿಕರ ಪ್ರವೇಶ ನಿರ್ಬಂದಿಸಲಾಗಿದೆ. ಮುಂಜಾಗೃತ ಕ್ರಮವಾಗಿ ಪುರಸಭೆ ವ್ಯಾಪ್ತಿಯ ಮೂರು ಕಡೆ ಪುರಸಭಾ ಮುಖ್ಯಾಧಿಕಾರಿ ನೇತೃತ್ವದಲ್ಲಿ ಆರೋಗ್ಯ ಅಧಿಕಾರಿಗಳು ಪುರಸಭೆ ಸಿಬ್ಬಂದಿಗೆ ಪಿಪಿಕಿಟ್ ಧರಿಸಿ ಔಷಧ ಸಿಂಪಡಣೆ ಮತ್ತು ಸ್ಯಾನಿಟೆ„ಸ್ ಮಾಡಲಾಯಿತು. ಈಗಾಗಲೇ ನಗರದಲ್ಲಿ ಕೊರೊನ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಪ್ರತಿ ಜನರಲ್ಲಿ ಆತಂಕ ಮನೆ ಮಾಡಿದೆ.
8 ಮಂದಿಗೆ ಕೋವಿಡ್ 19 ಸೋಂಕು ದೃಢ!: ತಾಲೂಕಿನಲ್ಲಿ ಕೋವಿಡ್ 19 ಓಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಒಟ್ಟು 8 ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ ಎಂದು ತಹಶೀಲ್ದಾರ್ ಮಹದೇವಯ್ಯ ತಿಳಿಸಿದ್ದಾರೆ. ಜಿಗಣಿ ಪಟ್ಟಣದಲ್ಲೇ 6 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಬೆಸ್ಕಾಂ ಅಧಿಕಾರಿ ಸೇರಿರುವುದು ಇಲಾಖೆಯ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದೆ.
ಜಿಗಣಿ ಪಟಾಲಮ್ಮ ದೇವಸ್ಥಾನದ ಬಳಿಯ 26 ವರ್ಷ ವ್ಯಕ್ತಿ, ಕುಂಟ್ಲರೆಡ್ಡಿ ಬಡಾವಣೆಯ 35 ವರ್ಷದ ಬ್ಯಾಂಕ್ ಉದ್ಯೋಗಿಗೆ ಸೋಂಕಿರುವುದು ದೃಢಪಟ್ಟಿದ್ದು, ಆತನ ಸಂಪರ್ಕ ದಲ್ಲಿದ್ದ 5 ಜನರನ್ನು ಕ್ವಾರಂಟೈನ್‌ಗೊಳಿಸಲಾಗಿದೆ. ಜಿಗಣಿ ಬಳಿಯ ನೆಸ್ಟ್ ಇಯರ್ ಕೈಗಾರಿಕೆ ಪ್ರದೇಶದಲ್ಲಿ ಕೆಲಸ ಮಾಡು ತ್ತಿದ್ದ 40 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಅವರ ಸಂಪರ್ಕ ದಲ್ಲಿದ್ದ 6 ಮಂದಿ ಯನ್ನು ಕ್ವಾರಂಟೈನ್‌ಗೊಳಿಸಲಾಗಿದೆ.
ಜಿಗಣಿಯ ಎಪಿಸಿ ವೃತ್ತ ಬಳಿಯ ನಿವಾಸಿ 35 ವರ್ಷದ ಬ್ಯಾಂಕ್ ನೌಕರ ಈತನಿಗೂ ಸೋಂಕು ತಗುಲಿದೆ. ಜಿಗಣಿ ಕೈಗಾರಿಕೆ ಪ್ರದೇಶದ ಮಲ್ಲಿಕ್ ಇಂಜಿನಿ ಯರ್ ಕಂಪನಿಯ 50 ವರ್ಷದ ಉದ್ಯೋಗಿಗೂ ಸೋಂಕು ತಗುಲಿದೆ. ಹಾಗೆ ಸರ್ಜಾಪುರ ಮತ್ತು ಯಾರಂಡಹಳ್ಳಿ ತಲಾ ಒಬ್ಬೊಬ್ಬರಿಗೆ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ. ಎಲ್ಲರನ್ನು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಹಶೀಲ್ದಾರ್ ಮಹದೇವಯ್ಯ ತಿಳಿಸಿದರು.