Advertisement

ವೆನ್ಲಾಕ್ ನಿಂದ ಸೋಂಕಿತ ಪರಾರಿ ; ಪತ್ತೆಗೆ ಸಹಕರಿಸುವಂತೆ ಪೊಲೀಸರ ಮನವಿ

10:16 PM Jul 05, 2020 | Hari Prasad |

ಮಂಗಳೂರು: ಇಲ್ಲಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಿಂದ ಕೋವಿಡ್ 19 ಸೊಂಕು ಪೀಡಿತ ಯುವಕನೊಬ್ಬ ಪರಾರಿಯಾಗಿರುವ ಘಟನೆ ವರದಿಯಾಗಿದೆ.

Advertisement

ಕೋವಿಡ್ ರೋಗ ಲಕ್ಷಣಗಳಿವೆ ಎಂದು ಹೇಳಿಕೊಂಡು ಪುತ್ತೂರು ಮೂಲದ ಯುವಕನೊಬ್ಬ ಜುಲೈ 1ರಂದು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಬಂದಿದ್ದ.

ಈತನನ್ನು ದಾಖಲಿಸಿಕೊಂಡ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಈ ನಡುವೆ ಈ ಯುವಕನ ಗಂಟಲ ಮಾದರಿ ವರದಿ ಇಂದು ಕೈ ಸೇರಿದ್ದು ಅದರಲ್ಲಿ ಪಾಸಿಟಿವ್ ಬಂದಿದೆ.

ನಂತರ ಸುಮಾರು 4 ಗಂಟೆಯ ಸಮಯ ವೆನ್ ಲಾಕ್ ಆಸ್ಪತ್ರೆಯ ಕೋವಿಡ್ ಬ್ಲಾಕ್ ನಿಂದ ಈ ಯುವಕ ತಪ್ಪಿಸಿಕೊಂಡು ಹೋಗಿದ್ದಾನೆ.

ಇದನ್ನೂ ಓದಿ: ಸೋಂಕಿಗಿಲ್ಲ ಲಾಕ್ ಡೌನ್ ; ಒಂದೇ ದಿನ 1925 ಕೋವಿಡ್ 19 ಪ್ರಕರಣ ; 38 ಸಾವು!

Advertisement

ಇದೀಗ ಪರಾರಿಯಾಗಿರುವ ಈ ಯುವಕನ ಮೇಲೆ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ‌.

ಈತನ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಿಳಿದರೆ ಮತ್ತು ಎಲ್ಲಿಯಾದರೂ ಕಂಡು ಬಂದರೆ ನಗರ ಪೊಲೀಸ್ ಕಂಟ್ರೋಲ್ ನಂಬರ್ 9480802300 ಹಾಗೂ ಪಾಂಡೇಶ್ವರ ಪೊಲೀಸ್ ಠಾಣಾ 0824 2220530 ಈ ನಂಬರ್ ಗೆ ಮಾಹಿತಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕೋವಿಡ್ ಸೋಂಕಿತ ವ್ಯಕ್ತಿ ಪುತ್ತೂರು ಮೂಲದವನಾಗಿದ್ದು ಮಂಗಳೂರಿನಲ್ಲಿ ಅಜ್ಜಿ ಮನೆಯಲ್ಲಿ ವಾಸವಾಗಿದ್ದ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next