Advertisement

ಗ್ರೀನ್ ಝೋನ್ ನಲ್ಲಿದ್ದ ರಾಯಚೂರಿಗೂ ಒಕ್ಕರಿಸಿದ ಕೋವಿಡ್-19: ಆರು ಪಾಸಿಟಿವ್ ಪತ್ತೆ

03:34 PM May 18, 2020 | keerthan |

ರಾಯಚೂರು: ಗ್ರೀನ್ ಝೋನ್ ನಲ್ಲಿದ್ದ ರಾಯಚೂರು ಜಿಲ್ಲೆಗೂ ಕೋವಿಡ್-19 ಒಕ್ಕರಿಸಿದೆ. ಆರು ಜನರಿಗೆ ಪಾಸಿಟಿವ್ ಇರುವುದು ಖಚಿತಗೊಂಡಿದೆ.

Advertisement

ಆಟೊ ನಗರದ ಒಂದೇ ಕುಟುಂಬದ  ಇಬ್ಬರು ಮಹಿಳೆಯರು, ಹಾಗು ಪುರುಷನಿಗೆ ಹಾಗೂ ಮತ್ತೊಬ್ಬ ವ್ಯಕ್ತಿಗೆ ಸೋಂಕು ಪಾಸಿಟಿವ್ ಬಂದಿದೆ.  ಈಗಾಗಲೇ ಅವರ ಪ್ರಾಥಮಿಕ ಸಂಪರ್ಕ ಹಾಗು ದ್ವಿತೀಯ ಸಂಪರ್ಕದ ಮಾಹಿತಿ ಪಡೆಯಲಾಗಿದೆ.

ಮುಂಬೈಗೆ ವಲಸೆ ಹೋಗಿದ್ದ ಇವರು ಮೇ 11ರಂದು ಆಗಮಿಸಿದ್ದರು. ಮೇ 12 ಕ್ಕೆ ಅವರ ರಕ್ತ ಹಾಗು ಕಫಾ‌ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇನ್ನು ದೇವದುರ್ಗ ತಾಲೂಕಿನ ಮಸರಕಲ್ ಹಾಗೂ ಸುಲ್ತಾನ್ ಪುರ ಮೂಲದ ಇಬ್ಬರಿಗೆ ಪಾಸಿಟಿವ್ ಬಂದಿದೆ. ಇವರು ಸರ್ಕಾರಿ ಕ್ವಾರಂಟೈನ್ ನಲ್ಲಿ ಇದ್ದರು.

ಈ ಎರಡು ಏರಿಯಾಗಳನ್ನು ಕಂಟೋನ್ಮೆಂಟ್ ವಲಯ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಘೋಷಣೆ ಮಾಡಿದ್ದಾರೆ. ಇಷ್ಟು ದಿನ ಹಸಿರು ವಲಯದಲ್ಲಿದ್ದ ರಾಯಚೂರು ಜನತೆಗೆ ಈ ಬೆಳವಣಿಗೆಯಿಂದ ಆತಂಕ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next