Advertisement

ಬಾಲಿವುಡ್ ನಟಿ ಕತ್ರಿನಾ ಕೈಫ್‍ಗೆ ಕೋವಿಡ್‍-19 ಪಾಸಿಟಿವ್

05:42 PM Apr 06, 2021 | Team Udayavani |

ಮುಂಬೈ : ಸೆಲೆಬ್ರಿಟಿಗಳಲ್ಲಿ ಕೋವಿಡ್ ಸೋಂಕು ಮುಂದುವರೆದಿದೆ. ಇದೀಗ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರಿಗೂ ಮಹಾಮಾರಿ ಕೋವಿಡ್ ಸೋಂಕು ವಕ್ಕರಿಸಿಕೊಂಡಿದೆ.

Advertisement

ಈ ವಿಚಾರವನ್ನು ಸ್ವತಃ ಕತ್ರಿನಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದು, ನನಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ತಕ್ಷಣವೆ ಐಸೋಲೇಶನ್ ಹಾಗೂ ಹೋಮ್ ಕ್ವಾರೆಂಟೈನ್‍ಗೆ ಒಳಗಾಗಿದ್ದೇನೆ. ವೈದ್ಯರ ಸಲಹೆಯಂತೆ ಎಲ್ಲ ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ನನ್ನ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿರುವ ಕ್ಯಾಟ್, ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಚಿರಋಣಿ, ಎಲ್ಲರೂ ಸುರಕ್ಷಿತವಾಗಿ ಮನೆಯಲ್ಲಿ ಇರಿ ಎಂದು ಮನವಿ ಮಾಡಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್, ಆಮೀರ್ ಖಾನ್, ಗೋವಿಂದ್, ಆರ್ ಮಾಧವನ್, ನಟಿ ಆಲಿಯಾ ಭಟ್, ಗಾಯಕ ಆದಿತ್ಯಾ ನಾರಾಯಣ್ ಅವರಲ್ಲೂ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.

ಇಂದು ಮುಂಜಾನೆ ಕುನಾಲ್ ಕಮ್ರಾ ಅವರಿಗೂ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದೆ. ಅದೇ ರೀತಿ ಸೋಮವಾರ ಬಾಲಿವುಡ್ ನಟ ವಿಕ್ಕಿ ಕೌಶಾಲ್ ಹಾಗೂ ನಟಿ ಭೂಮಿ ಪಡ್ನೆಕರ್ ಅವರಿಗೂ ಕೂಡ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next