Advertisement

ಕೊಪ್ಪಳ: 139ಕ್ಕೆ ಏರಿಕೆಯಾದ ಕೋವಿಡ್ 19 ಸೋಂಕಿತರ ಸಂಖ್ಯೆ

07:51 PM Jul 06, 2020 | Hari Prasad |

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

Advertisement

ಸೋಮವಾರ 8 ಜನರಿಗೆ ಸೋಂಕು ದೃಢಪಡುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 139ಕ್ಕೆ ಏರಿಕೆಯಾದಂತಾಗಿದೆ.

ಇನ್ನೂ 1405 ಜನರ ಗಂಟಲು ದ್ರವ ಮಾದರಿಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.

ಇನ್ನೂ ಸೋಮವಾರ 8 ಜನರಿಗೆ ಸೋಂಕು ದೃಢಪಟ್ಟವರ ಪೈಕಿ ಹೊಸಪೇಟೆ ತಾಲೂಕಿನ ಕಂಪ್ಲಿ ನಿವಾಸಿ 27 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದ್ದು, ಈತ ಜು.3ರಂದು ಬೆಂಗಳೂರಿನಿಂದ ಕೊಪ್ಪಳ ಜಿಲ್ಲೆಗೆ ಬಂದವನಾಗಿರುತ್ತಾನೆ. ಈತನಿಗೆ ಐಎಲ್‌ಐನಡಿ ಸೋಂಕು ದೃಢಪಟ್ಟಿದೆ.

ಇನ್ನೂ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ 24 ವರ್ಷದ ಯುವತಿಗೆ ಸೋಂಕು ಬಂದಿದ್ದು, ಈಕೆ ಜೂ.26ರಂದು ಮಧ್ಯಪ್ರದೇಶದಿಂದ ಜಿಲ್ಲೆಗೆ ಆಗಮಿಸಿದವರಾಗಿದ್ದಾರೆ, ಈ ಯುವತಿಯಲ್ಲಿ ಸೋಂಕಿನ ಲಕ್ಷಣಗಳಿಲ್ಲ.

Advertisement

ಇನ್ನು ಕುಷ್ಟಗಿ ತಾಲೂಕಿನ ಪುರ ಗ್ರಾಮದ 10 ವರ್ಷದ ಬಾಲಕ ಹಾಗೂ 54 ವರ್ಷದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದ್ದು ಇವರಿಬ್ಬರಲ್ಲೂ ಸೋಂಕಿನ ಲಕ್ಷಣಗಳಿಲ್ಲ.

ಇನ್ನೂ ಗಂಗಾವತಿ ತಾಲೂಕಿನ ತೊಂಡಿಹಾಳ ಕ್ಯಾಂಪಿನ 41 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಇವರಿಗೆ ಯಾವುದೇ ರೀತಿಯ ಪ್ರಯಾಣದ ಹಿನ್ನಲೆಯೂ ಇರುವುದಿಲ್ಲ, ಸೋಂಕಿನ ಲಕ್ಷಣಗಳೂ ಇಲ್ಲ.

ಇನ್ನು, ಗಂಗಾವತಿ ನಗರದ 70 ವರ್ಷದ ಮಹಿಳೆ, 28 ವರ್ಷದ ಮಹಿಳೆ, ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದ 23 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. 23 ವರ್ಷದ ಯುವಕ ತುಮಕೂರಿನಿಂದ ಜು.1ರಂದು ಜಿಲ್ಲೆಗೆ ಆಗಮಿಸಿದ ಹಿನ್ನಲೆಯನ್ನು ಹೊಂದಿದ್ದಾನೆ.

ಇದೀಗ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಕೋವಿಡ್ 19 ಸೋಂಕಿತರ ಸಂಖ್ಯೆ 139ಕ್ಕೆ ಏರಿಕೆಯಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next