Advertisement

ರಾಯಚೂರಲ್ಲಿ ಶತಕ ದಾಟಿದ ಕೋವಿಡ್-19 ಸೋಂಕಿತರ ಸಂಖ್ಯೆ

02:02 PM May 29, 2020 | keerthan |

ರಾಯಚೂರು: ಜಿಲ್ಲೆಯಲ್ಲಿ ಕೋವಿಡ್-19 ಅಟ್ಟಹಾಸ ಎಗ್ಗಿಲ್ಲದೇ ಸಾಗಿದ್ದು, ಶುಕ್ರವಾರ ಒಂದೇ ದಿನ 62 ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಆ ಮೂಲಕ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದ್ದು ಸೋಂಕಿತರ ಸಂಖ್ಯೆ134 ಕ್ಕೆ ತಲುಪಿದೆ.

Advertisement

ಇಂದಿನ ಎಲ್ಲಾ 62 ಪಾಸಿಟಿವ್ ಪ್ರಕರಣಗಳು ಮಹಾರಾಷ್ಟ್ರದಿಂದ ವಲಸೆ ಬಂದವರೇ ಆಗಿದ್ದು, ಅವರನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು.

ಕೇವಲ 10 ದಿನಗಳಲ್ಲೇ ಇಷ್ಟೊಂದು ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣ ಬರುತ್ತಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ಮಸ್ಕಿಯ ಬ್ಯಾಂಕ್ ಸಿಬ್ಬಂದಿ, ಮಲಯಾಬಾದ್ ನ  2 ವರ್ಷದ ಬಾಲಕಿ ಹಾಗೂ ಸಿಂಗನೋಡಿ ವ್ಯಕ್ತಿ ಬಿಟ್ಟರೆ ಉಳಿದವರೆಲ್ಲ ಸರ್ಕಾರಿ ಕ್ವಾರಂಟೈನ್ ಗಳಲ್ಲೇ ಇದ್ದರು. ಅವರಿಂದ ಉಳಿದವರಿಗೂ ಸೋಂಕು ತಗುಲಿದೆಯಾ ಎಂಬ ಆತಂಕ ಶುರುವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next