Advertisement

ಬೆಳಗಾವಿಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ: 42ಕ್ಕೇರಿದ ಸೋಂಕಿತರ ಸಂಖ್ಯೆ

01:03 PM Apr 18, 2020 | keerthan |

ಬೆಳಗಾವಿ: ಕೋವಿಡ್-19 ವೈರಸ್ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತಷ್ಟು ತಲ್ಲಣ ಸೃಷ್ಟಿಸಿದ್ದು, ಶನಿವಾರ ಹಿರೇಬಾಗೇವಾಡಿಯ ಮತ್ತೊಬ್ಬ ಸೋಂಕಿತ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 42 ಕ್ಕೇರಿದೆ.

Advertisement

ರಾಜ್ಯ ಸರಕಾರ ಬಿಡುಗಡೆ ಮಾಡಿದ ವೈದ್ಯಕೀಯ ವರದಿಯಂತೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಸೋಂಕಿತ ಸಂಖ್ಯೆ 128ರ ಸಂಪರ್ಕದಲ್ಲಿದ್ದ 45 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿರುವುದು ಖಚಿತವಾಗಿದೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಹಿರೇಬಾಗೇವಾಡಿ ಗ್ರಾಮ ಹಾಟ್ ಸ್ಪಾಟ್ ಆಗಿದ್ದು, ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.

ನಗರದಲ್ಲಿ ಶುಕ್ರವಾರ ಬಂದ ಐದು ಪಾಸಿಟಿವ್ ವರದಿಗಳ ಪ್ರಕಾರ ಕ್ಯಾಂಪ್  ಪ್ರದೇಶದ ಮೂರು, ಅಮನ್ ನಗರ ಹಾಗೂ ಸಂಗಮೇಶ್ವರ ನಗರ ಆಸ್ಮಾ ಕಾಲೋನಿಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದ್ದು, ಈ ಎರಡೂ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next