Advertisement

ಕೋವಿಡ್ -19: ಭಾರತದಲ್ಲಿ ಎರಡು ವರ್ಷಗಳಷ್ಟು ಜೀವಿತಾವಧಿ ಕಡಿಮೆ ಮಾಡಿದೆಯೇ..?

01:54 PM Oct 23, 2021 | Team Udayavani |

ನವದೆಹಲಿ: ʼಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸೈನ್ಸಸ್ʼ (ಐಐಪಿಎಸ್) ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಗುರುವಾರ ಹೊಸ ಜಂಟಿ ಅಧ್ಯಯನದ ಸಂಶೋಧನೆಗಳನ್ನು ಬಿಡುಗಡೆ ಮಾಡಿದೆ. COVID-19 ನಿಂದಾಗಿ ಭಾರತದಲ್ಲಿ 2020 ರಲ್ಲಿ ಜನನದ ಜೀವಿತಾವಧಿಯು ಎರಡು ವರ್ಷಗಳಷ್ಟು ಕಡಿಮೆಯಾಗಿದೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ.

Advertisement

ವಿದ್ಯಾರ್ಥಿ ಲೇಖಕರ ಪ್ರಕಾರ, 35 ರಿಂದ 79 ವಯೋಮಾನದವರಲ್ಲಿ COVID-19 ನಿಂದ ಉಂಟಾದ ಹೆಚ್ಚಿನ ಸಾವುಗಳಿಂದಾಗಿ ಈ ಬದಲಾವಣೆ ಉಂಟಾಗಿವೆ.ಈ ಅಧ್ಯಯನವನ್ನು ಗುರುವಾರ ಬಿಎಂಸಿ ಪಬ್ಲಿಕ್ ಹೆಲ್ತ್ ಎಂಬ ಪೀರ್-ರಿವ್ಯೂಡ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಸಾಂಕ್ರಾಮಿಕ ರೋಗದಿಂದ ಉಂಟಾಗುದ ವ್ಯತಿರಿಕ್ತ ಪರಿಣಾಮದಿಂದಾಗಿ ಮಹಿಳೆಯರಿಗಿಂತ ಪುರುಷರ ಜೀವಿತಾವಧಿಯ ಮೇಲೆ ಹೆಚ್ಚು ಪ್ರಭಾವ ಬೀರಿವೆ.

ಇದನ್ನೂ ಓದಿ:-ಕೂಳೂರು: ನಾಗನ ಕಟ್ಟೆಗೆ ದುಷ್ಕರ್ಮಿಗಳಿಂದ ಹಾನಿ

ಹಿಂದೂಸ್ತಾನ್ ಟೈಮ್ಸ್‌ನ ವರದಿಯು ಐಐಪಿಎಸ್‌ನ ಪತ್ರಿಕೆಯ ಲೇಖಕರಾದ ಸೂರ್ಯಕಾಂತ್ ಯಾದವ್ ಅವರ ಮಾತನ್ನು ಉಲ್ಲೇಖಿಸಿದ್ದಾರೆ. “ಯುವ ಗುಂಪುಗಳ ಸಾವಿನಲ್ಲಿ ಪುರುಷ ಪ್ರಮಾಣವೇ ಹೆಚ್ಚಿದೆ. ಮಹಿಳೆಯರಿಗೆ ಹೋಲಿಸಿದರೆ ಪುರುಷರು ಬಾಹ್ಯ ವಾತಾವರಣಗಳಿಗೆ ಹೆಚ್ಚು ಒಗ್ಗಿಕೊಂಡಿದ್ದರಿಂದ ಅವರ ಜೀವಿತಾವಧಿ ಕಡಿಮೆಯಾಗಲು ಕಾರಣವಾಗಿರಬಹುದು.” ಎಂದು ಸೂರ್ಯಕಾಂತ್‌ ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜೀವಿತಾವಧಿಯು ಜನಸಂಖ್ಯೆಯ ಒಟ್ಟಾರೆ ಮರಣ ಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದೆ.

Advertisement

ಈ ಅಧ್ಯಯನವನ್ನು ನಡೆಸಲು, ಲೇಖಕರು ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿರುವ COVID-19-ಇಂಡಿಯಾ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಪೋರ್ಟಲ್‌ನಿಂದ ಜನವರಿ 30, 2020 ಮತ್ತು ಡಿಸೆಂಬರ್ 31, 2020 ರ ನಡುವಿನ ಜೀವಿತಾವಧಿ ಡೇಟಾವನ್ನು ಅಧ್ಯಯನಕ್ಕೆ ಪರಿಗಣಿಸಿದ್ದಾರೆ.

“ನಾವು ಈ ದತ್ತಾಂಶ ಸೆಟ್‌ಗಳನ್ನು ಒಟ್ಟುಗೂಡಿಸಿದ್ದೇವೆ ಮತ್ತು ಒಟ್ಟಾರೆಯಾಗಿ ಕೋವಿಡ್ -19 ಸೇರ್ಪಡೆಯೊಂದಿಗೆ ಸಾವಿಗೆ 22 ಕಾರಣಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದೇವೆ. ಕೋವಿಡ್ -19 ರ ಪರಿಣಾಮವನ್ನು ವಿಶ್ಲೇಷಿಸಲು ನಾವು ಲೈಫ್ ಟೇಬಲ್ ವಿಧಾನವನ್ನು ಬಳಸಿದ್ದೇವೆ ಮತ್ತು ಈ ಅಧ್ಯಯನದಿಂದ ಜನರ ಜೀವಿತಾವಧಿಯಲ್ಲಿ ಎರಡು ವರ್ಷಗಳ ಕುಸಿತವನ್ನು ಕಂಡುಕೊಂಡಿದ್ದೇವೆ”ಎಂದು ಯಾದವ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next