Advertisement

ಹೊರಗೆ ಕೋವಿಡ್-19 ಕಾಟ; ಒಳಗೆ ಪತಿಯ ಕಾಟ!

12:43 PM Apr 26, 2020 | Sriram |

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ದಿನವಿಡೀ ಮನೆಯೊಳಗೆ ಇರುವ ಪತಿ ಲೈಂಗಿಕ ಶೋಷಣೆ ನಡೆಸುತ್ತಿದ್ದಾರೆ, ದಿನಕ್ಕೊಂದು ಬಗೆಯ ಅಡುಗೆ ಮಾಡುವಂತೆ ಒತ್ತಡ ಹೇರುತ್ತಾರೆ, ಯಾರ ಜತೆಗಾದರೂ ಫೋನ್‌ನಲ್ಲಿ ಮಾತಾಡಿದರೆ ಸಂಶಯ, ತವರಿನಿಂದ ಹಣ ತರುವಂತೆ ಪೀಡಿಸುತ್ತಿದ್ದಾರೆ..

Advertisement

ಇವು ಲಾಕ್‌ಡೌನ್‌ನಿಂದ ಪಡಬಾರದ ಪಾಡು ಪಡುತ್ತಿರುವ ಸ್ತ್ರೀಯರು ಮಹಿಳಾ ಆಯೋಗಕ್ಕೆ ನೀಡಿರುವ ದೂರುಗಳ ಕೆಲವು ಮಾದರಿಗಳು.

ಇಂತಹ ಪ್ರಕರಣಗಳು ಸಾಮಾನ್ಯವಾದರೂ ಲಾಕ್‌ಡೌನ್‌ ಜಾರಿ ಬಳಿಕ ಹೆಚ್ಚಿದೆ. ದಿನವೂ ಇಂತಹ ನೂರಾರು ಕರೆಗಳು ಬರುತ್ತಿವೆ ಎಂದಿವೆ ಮಹಿಳಾ ಆಯೋಗದ ಮೂಲಗಳು.ಲಾಕ್‌ಡೌನ್‌ನಿಂದ ಕೆಲವರು ಕೆಲಸ ಕಳೆದುಕೊಂಡಿ ದ್ದಾರೆ. ಇನ್ನು ಕೆಲವರಿಗೆ ವೇತನ ಕಡಿತವಾಗಿದೆ. ಮತ್ತೆ ಹಲವರಿಗೆ ವರ್ಕ್‌ ಫಾರ್ಮ್ ‌ ಹೋಮ್‌, ಭವಿಷ್ಯದ ಬಗೆಗಿನ ಆತಂಕ ಮಾನಸಿಕ ಒತ್ತಡ ಉಂಟು ಮಾಡುತ್ತಿದೆ. ಆರ್ಥಿಕ ಸಮಸ್ಯೆಯೂ ಇದೆ. ಚಟಗಳಿಗೂ ಅವಕಾಶ ಇಲ್ಲ. ಇವೆಲ್ಲದರ ಪರಿಣಾಮ ಪತಿ-ಪತ್ನಿ ಸಂಬಂಧದ ಮೇಲೆ ಆಗಿದ್ದು, ಹೆಂಡತಿ ಮೇಲೆ ಹಲ್ಲೆ,ಲೈಂಗಿಕ ದೌರ್ಜನ್ಯ, ವರದಕ್ಷಿಣೆಗಾಗಿ ಪೀಡನೆ ಹೆಚ್ಚುತ್ತಿದೆ ಎಂದು ವರದಿಯಾಗಿದೆ.

ವಿವಿಧ ಅಡುಗೆಗೆ ಒತ್ತಡ
ಮಕ್ಕಳು, ಪತಿ ದಿನವಿಡೀ ಮನೆಯಲ್ಲಿಯೇ ಇರುವುದರಿಂದ ಬೇರೆ ಬೇರೆ ರೀತಿಯ ಅಡುಗೆ ಮಾಡಲು ಒತ್ತಡ ಹಾಕುತ್ತಿದ್ದಾರೆ. ಇದರಿಂದಾಗಿ ತನ್ನ ವರ್ಕ್‌ ಫಾರ್ಮ್ ಹೋಮ್‌ಗೆ ತೊಂದರೆಯುಂಟಾಗುತ್ತಿದೆ ಎಂಬ ಕರೆಗಳೂ ಬರುತ್ತಿವೆ ಎಂದು ಅಲವತ್ತು ಕೊಂಡಿರುವ ಮಹಿಳೆಯರೂ ಇದ್ದಾರೆ.ಆಯೋಗಕ್ಕೆ ಬರುವ ದೂರು ಇಮೇಲ್‌ಗ‌ಳ ಸಂಖ್ಯೆಯೂ 10 ಪಟ್ಟು ಹೆಚ್ಚಿದೆ ಎನ್ನುತ್ತಾರೆ ರಾಜ್ಯ ಮಹಿಳಾ ಆಯೋಗದ ಸದಸ್ಯರೊಬ್ಬರು.

ತಾಲೂಕು ಮಟ್ಟದಲ್ಲೂ ಸಹಾಯವಾಣಿ
ಶೋಷಣೆಗೀಡಾದ ಮಹಿಳೆಯರ ನೆರವಿಗಾಗಿ ಸಹಾಯವಾಣಿ ಸೌಲಭ್ಯವನ್ನು ತಾಲೂಕು ಮಟ್ಟದಲ್ಲಿಯೂ ಕಲ್ಪಿಸಿದೆ. ನೊಂದ ಮಹಿಳೆಯರು 181ಕ್ಕೆ ಕರೆ ಮಾಡಬಹುದು ಅಥವಾ ಪ್ರಮೀಳಾ ನಾಯ್ಡು ಅವರನ್ನು 948100 4367 ಈ ದೂರವಾಣಿ ಮೂಲಕ ಸಂಪರ್ಕಿಸಬಹುದು.

Advertisement

ನೊಂದ ಮಹಿಳೆ ಕರೆ ಮಾಡಿದರೆ
ದೂರವಾಣಿ ಮೂಲಕವೇ ಆಪ್ತ ಸಮಾ ಲೋಚನೆ ಒದಗಿಸಲಾಗುತ್ತದೆ. ಸವಾಲನ್ನು ಯಾವ ರೀತಿ ಎದುರಿಸಬೇಕು ಎಂಬ ಬಗ್ಗೆ ತಿಳಿಸಲಾಗುತ್ತಿದೆ. ಕರೆಗಳಲ್ಲಿ ಹೆಚ್ಚಿನವು ವರದಕ್ಷಿಣೆ ಪ್ರಕರಣಗಳು.
-ಪ್ರಮೀಳಾ ನಾಯ್ಡು,
ಮಹಿಳಾ ಆಯೋಗದ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next