Advertisement
ಮಣಿಪಾಲ: ಕೋವಿಡ್-19 ಜಾಗತಿಕ ಆರ್ಥಿಕತೆಯನ್ನೇ ಅಪಾಯಕ್ಕೆ ತಳ್ಳಿದೆ. ದಿನದಿಂದ ದಿನಕ್ಕೆ ಉದ್ಯೋಗ ನಷ್ಟ ಹೆಚ್ಚುತ್ತಲೇ ಇದೆ. ಮುಖ್ಯವಾಗಿ ವಿಮಾನಯಾನ, ಸಾರಿಗೆ, ಹೊಟೇಲ್ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ನೇರ ಹೊಡೆತಕ್ಕೆ ಸಿಕ್ಕಿದ್ದು, ಕಂಪನಿಗಳ ಮೇಲೆ ಆರ್ಥಿಕ ನಷ್ಟದ ತೂಗುಗತ್ತಿ ನೇತಾಡುತ್ತಿದೆ.
ವಿಶ್ವಾದ್ಯಂತ ಅನೌಪಚಾರಿಕ ವಲಯದಲ್ಲಿನ ಎರಡು ಶತಕೋಟಿ ಉದ್ಯೋಗ ಕಡಿತವಾಗಲಿದ್ದು, ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಶೀಲ ದೇಶಗಳ ಹೆಚ್ಚಿನ ಉದ್ಯೋಗಸ್ಥರು ನಷ್ಟ ಅನುಭವಿಸಲಿದ್ದಾರೆ ಎಂದಿದೆ ವರದಿ. ಈಗಾಗಲೇ ಹತ್ತು ಲಕ್ಷ ಅನೌಪಚಾರಿಕ ಕಾರ್ಮಿಕರ ಮೇಲೆ ಕೋವಿಡ್-19 ಪರಿಣಾಮ ಬೀರಿದೆ ಎಂದು ಐಎಲ್‌ಒ ಎಚ್ಚರಿಕೆ ನೀಡಿದೆ.
Related Articles
Advertisement
ನಿರುದ್ಯೋಗಸ್ಥರ ಪ್ರಮಾಣ ಏರಿಕೆಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಾದ ಭಾರತ, ನೈಜೀರಿಯಾ ಮತ್ತು ಬ್ರೆಜಿಲ್‌ನ ದೇಶಗಳಲ್ಲಿ ಅನೌಪಚಾರಿಕ ವಲಯದ ಕಾರ್ಮಿಕರ ಸಂಖ್ಯೆ ಹೇರಳವಾಗಿದೆ. ಒಂದು ಅಂದಾಜಿನ ಪ್ರಕಾರ, ಸದ್ಯ 50 ಲಕ್ಷದಷ್ಟು ಇರುವ ನಿರುದ್ಯೋಗದ ಪ್ರಮಾಣ 2.5 ಕೋಟಿಯಷ್ಟು ಏರಿಕೆಯಾದೀತು ಎನ್ನಲಾಗಿದೆ. ಅರಬ್ ರಾಜ್ಯಗಳಲ್ಲಿ ಶೇ 8.15 (50 ಲಕ್ಷಕ್ಕೆ ಸಮ) ಯುರೋಪ್ ಶೇ. 7.8 (1.2 ಕೋಟಿ) ಮತ್ತು ಏಷ್ಯಾ ಮತ್ತು ಪೆಸಿಫಿಕ್ ಭಾಗಗಳಲ್ಲಿ ಶೇ.7.2ರಷ್ಟು (12.5 ಕೋಟಿ) ಪೂರ್ಣಾವಧಿಯ ಕೆಲಸಗಾರರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದ್ದು, ವಸತಿ ಮತ್ತು ಆಹಾರ ಸೇವೆಗಳು, ಉತ್ಪಾದನೆ, ಚಿಲ್ಲರೆ ವ್ಯಾಪಾರ ಮತು ಆಡಳಿತಾತ್ಮಕ ಚಟುವಟಿಕೆ ಕ್ಷೇತ್ರಗಳು ಹೆಚ್ಚಿನ ಆರ್ಥಿಕ ನಷ್ಟವನ್ನು ಎದುರಿಸಲಿವೆ ಎಂದು ಸಂಸ್ಥೆ ಹೇಳಿದೆ.