Advertisement

ಶೀತ, ಕೆಮ್ಮು ಜ್ವರಕ್ಕೆ ಡಾಕ್ಟರ್ ಚೀಟಿ ಇಲ್ಲದೇ ಔಷಧ ಖರೀದಿಸುವ ಗ್ರಾಹಕರ ಮಾಹಿತಿ ನೀಡಿ

08:59 AM Apr 21, 2020 | Hari Prasad |

ಹೊಸದಿಲ್ಲಿ: ಮೆಡಿಕಲ್‌ ಸ್ಟೋರ್‌, ಫಾರ್ಮಾಸಿಸ್‌ ಕಂಪೆನಿಗಳಲ್ಲಿ ಜ್ವರ, ಕೆಮ್ಮು, ನೆಗಡಿ – ಶೀತಕ್ಕೆ ಔಷಧ ಖರೀದಿ ಸುವ ಗ್ರಾಹಕರ ಮಾಹಿತಿ ಪಡೆಯುವಂತೆ ವಿವಿಧ ರಾಜ್ಯಗಳು ಸೂಚನೆ ನೀಡಿವೆ.

Advertisement

ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಬಿಹಾರ ಸರಕಾರಗಳು, ಈ ಕುರಿತು ಔಷಧ ಅಂಗಡಿಗಳಿಗೆ ಆದೇಶ ಹೊರಡಿಸಿವೆ.

ಕೋವಿಡ್ 19 ವೈರಸ್ ಸೋಂಕಿನ ಲಕ್ಷಣಗಳಾದ ಜ್ವರ, ಕೆಮ್ಮು, ನೆಗಡಿ – ಶೀತ ಕಾಣಿಸಿಕೊಂಡರವರು ಪರೀಕ್ಷೆಗೊಳಗಾಗದೇ ಮೆಡಿಕಲ್‌ ಸ್ಟೋರ್‌ಗಳಲ್ಲಿ ಪ್ಯಾರಾಸಿಟಮೊಲ್‌ ಸೇರಿದಂತೆ ಮತ್ತಿತರ ಔಷಧಗಳನ್ನು ತೆಗೆದುಕೊಳ್ಳುತ್ತಿರುವುದು ಕಂಡು ಬಂದಿದೆ. ತೆಲಂಗಾಣದಲ್ಲಿ ಅಂಥವರನ್ನು ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸಿದಾಗ ಹಲವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಹೀಗಾಗಿ ಸೋಂಕಿತರನ್ನು ಪತ್ತೆ ಹಚ್ಚಲು ಇದು ಕೂಡ ಅತ್ಯುತ್ತಮ ಮಾರ್ಗವಾಗಿದೆ. ಹೀಗಾಗಿ ಔಷಧ ಅಂಗಡಿಗಳಲ್ಲಿ ಯಾವುದೇ ವೈದ್ಯಕೀಯ ಶಿಫಾರಸು ಪತ್ರಗಳಿಲ್ಲದೇ ಜ್ವರ, ಕೆಮ್ಮು, ನೆಗಡಿಗೆ ಮಾತ್ರೆಗಳನ್ನು ಪಡೆಯುವ ಗ್ರಾಹಕರ ಹೆಸರು, ವಿಳಾಸ, ಮೊಬೈಲ್‌ ನಂಬರ್‌ ಸಂಗ್ರಹಿಸಿ, ಸಂಬಂಧಿಸಿದ ಇಲಾಖೆಗಳಿಗೆ ನೀಡುವಂತೆ ಸೂಚನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next