Advertisement

ಸಾಯುವುದಾದರೆ ಸಾಯುವೆ, ದೇವರಿದ್ದಾನೆ !

01:41 AM Apr 23, 2020 | Hari Prasad |

ಮಣಿಪಾಲ: ಇದು ಆಸ್ಪತ್ರೆಗಳಲ್ಲಿ ಶವಗಳನ್ನು ಅಂತಿಮಯಾತ್ರೆಗೆ ಸಿದ್ಧಗೊಳಿಸುವವನ ಕಥೆ. ಕೋವಿಡ್ 19 ವೈರಸ್ ಇಡೀ ಜಗತ್ತನೇ ಶವಾಗಾರವನ್ನಾಗಿಸಿರುವ ಈ ಸಂದರ್ಭ ಇಂಡೋನೇಷ್ಯಾದ ಈ ವ್ಯಕ್ತಿಯ ಕರ್ತವ್ಯದ ಮೇಲಿನ ಬದ್ಧತೆಯ ಪರಿಚಯ ಇದು.

Advertisement

ಈ ತಿಂಗಳ ಆರಂಭದಲ್ಲಿ ಇಂಡೋನೇಷ್ಯಾದ ರಾಜಿಮನ್‌ ಸೋರ್ಮಿನ್‌ ತನ್ನ ಕರ್ತವ್ಯದಿಂದ ನಿವೃತ್ತರಾಗಿದ್ದರು. ಸುಮಾರು 12 ವರ್ಷಗಳ ಕಾಲ ಇಂಡೋನೇಷ್ಯಾದ ಮೇಡನ್‌ನ ಆ್ಯಡಂ ಮಲಿಕ್‌ ಪಬ್ಲಿಕ್‌ ಆಸ್ಪತ್ರೆಯಲ್ಲಿ ಮಾರ್ಟಿಶಿಯನ್‌ (ಮೃತಪಟ್ಟವರನ್ನು ಶವಾಗಾರಕ್ಕೆ ಸಾಗಿಸುವ ವೇಳೆ ದೇಹವನ್ನು ಬಟ್ಟೆಯಲ್ಲಿ ಸುತ್ತಿ, ಸಂಸ್ಕಾರಕ್ಕೆ ಸಿದ್ಧಗೊಳಿಸಿಸುವವರು) ಆಗಿ ಕೆಲಸದಲ್ಲಿದ್ದರು. ಇವರು ಶವಗಳನ್ನು ಸ್ನಾನ ಮಾಡಿಸಿ, ಬಟ್ಟೆ ತೊಡಿಸುತ್ತಿದ್ದವರು. ಇದೀಗ ನಿವೃತ್ತ ಜೀವನದಲ್ಲಿ ಆರಾಮಾಗಿರೋಣ ಎಂದರೆ ಕೋವಿಡ್ 19 ವೈರಸ್ ಬಿಡ್ತಿಲ್ಲ.

ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಅವರ ನಿದ್ದೆಗೆಡಿಸಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನನ್ನನ್ನು ಮತ್ತೆ ಕರ್ತವ್ಯಕ್ಕೆ ಕರೆಯುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ‘ಕರೆದರೆ ನಾನು ವಾಪಾಸು ಹೋಗುತ್ತೇನೆ, ಅವರಿಗೆ ಸಹಾಯ ಮಾಡುತ್ತೇನೆ. ಈ ವೇಳೆ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದರೆ ಸಾಯಲಿ, ದೇವರಿದ್ದಾನೆ. ನಾನ್ಯಾಕೆ ಭಯ ಪಡಲಿ’ ಎಂದು ಹೇಳಿದ್ದಾರೆ.

ಇಂಡೋನೇಷ್ಯಾ ಜಗತ್ತಿನಲ್ಲಿ ಅತೀ ಹೆಚ್ಚು ಕೋವಿಡ್‌ 19 ಸೋಂಕಿತರಿರುವ ರಾಷ್ಟ್ರಗಳಲ್ಲಿ ಒಂದು. ಮಾರ್ಚ್‌ 2 ರಿಂದ 170 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ. 1,790 ಜನರು ಸೋಂಕಿತರಾಗಿದ್ದಾರೆ. ಸರಕಾರ ಕೋವಿಡ್ 19 ವೈರಸ್ ಸಂಪರ್ಕಕ್ಕೆ ಜನರು ಬರದಂತೆ ತಡೆಯಲು ಸಾಕಷ್ಟು ಪ್ರಯತ್ನ ಪಡುತ್ತಿದ್ದು, ಆಸ್ಪತ್ರೆಗಳಲ್ಲಿ ವೈದ್ಯರ ರಕ್ಷಣೆಗೆ ಪಿಪಿಇ ಸಾಧನಗಳನ್ನು ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.