Advertisement

ಕೋವಿಡ್ ಅಸ್ಪೃಶ್ಯತೆ ವಿರುದ್ಧ ಪ್ರತಿಜ್ಞೆ ; ಸೋಂಕು ಪೀಡಿತರ ಅವಗಣನೆ ಮಾಡದಿರಲು ಹೊಸ ಯತ್ನ

04:01 AM May 29, 2020 | Hari Prasad |

ಹೊಸದಿಲ್ಲಿ: ಕೋವಿಡ್ ನ ಕಾಲಘಟ್ಟದಲ್ಲಿ ಆ ವೈರಾಣುಗಳ ಸೋಂಕಿಗೆ ಒಳಗಾದವರು ಹಾಗೂ ಸೋಂಕಿನಿಂದ ಗುಣಮುಖರಾದವರನ್ನು ಸಮಾಜವು ನಿಕೃಷ್ಟವಾಗಿ ನೋಡುತ್ತಿರುವುದನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ.

Advertisement

ಇದಕ್ಕಾಗಿ, ಕೇಂದ್ರದ mygov.in ಜಾಲತಾಣದ ಅಡಿಯಲ್ಲಿ ಈ ಕುರಿತಂತೆ ಪ್ರತಿಜ್ಞೆ ಕೈಗೊಳ್ಳಲು ಎಲ್ಲಾ ನಾಗರಿಕರಿಗೆ ಅನುವು ಮಾಡಿಕೊಟ್ಟಿದೆ.

#BreakTheStigmaPledge ಹೆಸರಿನ ಈ ಅಭಿಯಾನದಲ್ಲಿ, https://pledge.mygov.in/breakthestigma/ ಪುಟಕ್ಕೆ ಭೇಟಿ ನೀಡುವ ಮೂಲಕ ಅಲ್ಲಿ ತಮ್ಮ ಹೆಸರು, ಇನ್ನಿತರ ವಿವರಗಳನ್ನು ನೋಂದಾಯಿಸುವ ಮೂಲಕ ನಾಗರಿಕರು ಪ್ರತಿಜ್ಞೆ ಕೈಗೊಳ್ಳಬಹುದು.

ಕೋವಿಡ್ ಪೀಡಿತರನ್ನು ಸುತ್ತಲಿನ ಸಮಾಜದ ಮಾನಸಿಕ ಹಿಂಸೆಯಿಂದ ಮುಕ್ತಿ ಮಾಡಿ ಈ ಸಮಾಜವನ್ನು ಅವರ ಪಾಲಿಗೆ ಸುಂದರವಾಗಿಸುವ ಪ್ರಯತ್ನ ಇದಾಗಿದೆ.

ಮೊದಲ ಪುಟದಲ್ಲಿ ಹೆಸರು, ಜನ್ಮದಿನಾಂಕ, ಲಿಂಗ, ಇ-ಮೇಲ್‌ ವಿಳಾಸ, ವಾಸಿಸುವ ನಗರದ ಪಿನ್‌ಕೋಡ್‌, ರಾಜ್ಯ, ಜಿಲ್ಲೆಗಳನ್ನು ನಮೂದಿಸಬೇಕು. ಆನಂತರ ಅದೇ ಪುಟದಲ್ಲಿ ಕೆಳಗೆ ಭಾಷೆಗಳ ಆಯ್ಕೆಯಲ್ಲಿ (ಇಂಗ್ಲೀಷ್‌ ಅಥವಾ ಹಿಂದಿ) ಒಂದನ್ನು ಆಯ್ಕೆ ಮಾಡಿಕೊಂಡು ಮುಂದುವರಿಯಬೇಕು.

Advertisement

ನಂತರದ ವೆಬ್‌ಪುಟದಲ್ಲಿ ಕೊರೊನಾ ಪೀಡಿತರನ್ನು ನಿಕೃಷ್ಟವಾಗಿ ಕಾಣೆನು ಎಂಬ ವಾಕ್ಯ ಮೂಡಿಬರುತ್ತದೆ ಹಾಗೂ ಅದನ್ನು ಓದುವಂತೆ ಸೂಚನೆ ಪರದೆಯ ಮೇಲೆ ಮೂಡುತ್ತದೆ. ವಾಕ್ಯ ಓದಿದ ನಂತರ ಕೆಳಗಿರುವ ಪ್ಲೆಡ್ಜ್ ಎಂಬ ಐಕಾನ್‌ ಕ್ಲಿಕ್‌ ಮಾಡಿದರೆ ನಿಮ್ಮ ಪ್ರತಿಜ್ಞೆಯನ್ನು ಪ್ರಮಾಣ ಪತ್ರದ ರೂಪದಲ್ಲಿ ನಿಮಗೆ ಕಳಿಸುವ ಆಯ್ಕೆ ಬರುತ್ತದೆ.

ಅಲ್ಲಿ, ನೀವಾಗಲೇ ನಮೂದಿಸಿರುವ ಇ-ಮೇಲ್‌ ಅಥವಾ ಮೊಬೈಲ್‌ಗೆ ಕಳುಹಿಸಬೇಕೇ ಎಂದು ಕೇಳಲಾಗುತ್ತದೆ. ನೀವು ಯಾವುದನ್ನು ಆಯ್ಕೆ ಮಾಡುವಿರೋ ಅದಕ್ಕೆ (ಇ-ಮೇಲ್‌ ಅಥವಾ ಮೊಬೈಲ್‌) ಸರ್ಟಿಫಿಕೇಟ್‌ ಡೌನ್‌ಲೋಡ್‌ ಮಾಡುವ ಲಿಂಕ್‌ ಕಳುಹಿಸಲಾಗುತ್ತದೆ. ಅದನ್ನು ಕ್ಲಿಕ್ಕಿಸಿ ನಿಮ್ಮ ಪ್ರಮಾಣ ಪತ್ರವನ್ನು ಡೌನ್‌ಲೋಡ್‌ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next