Advertisement

ಶಂಕಿತರ ಮನೆಗೆ ಬೀಗ ಹಾಕಿದವರ ಬಂಧನ

01:58 AM Mar 17, 2020 | Hari Prasad |

ಕೊರೊನಾ ವೈರಸ್‌ ಇದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ತೃಶ್ಶೂರ್‌ನಲ್ಲಿ ವೃದ್ಧ ದಂಪತಿಯನ್ನು ಅಕ್ರಮವಾಗಿ ಕೂಡಿ ಹಾಕಿದ ಆರೋಪದ ಹಿನ್ನೆಲೆಯಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಸೌದಿ ಅರೇಬಿಯಾದಿಂದ ತೃಶ್ಶೂರ್‌ಗೆ ಬಂದು ಹಿರಿಯ ದಂಪತಿ ವಾಸವಾದ್ದರು. ವಿಮಾನ ನಿಲ್ದಾಣದಲ್ಲಿ ಸೋಂಕು ಪರೀಕ್ಷೆಗೆ ಕೂಡ ಒಳಗಾಗಿದ್ದರು ಮತ್ತು ಅವರಿಗೆ ಯಾವುದೇ ರೀತಿಯಲ್ಲಿ ಸೋಂಕು ಇರುವ ಬಗ್ಗೆ ಪತ್ತೆಯಾಗಿರಲಿಲ್ಲ.

Advertisement

ಅಪಾರ್ಟ್‌ಮೆಂಟ್‌ಗೆ ಅವರು ಆಗಮಿಸಿದಾಗ ಅಲ್ಲಿನ ನಿವಾಸಿಗಳು ಅವರು ಹೊರಗೆ ಬರದಂತೆ ಬೀಗ ಹಾಕಿದ್ದರು. ವೃದ್ಧ ದಂಪತಿಗಳ ಸಹಾಯಕ ಅಡುಗೆ ಮತ್ತು ದಿನಸಿ ಸಾಮಗ್ರಿಗಳನ್ನು ಅಂಗಡಿಯಿಂದ ತಂದು ಬಾಗಿಲ ಬಳಿ ಇಟ್ಟು ಹೋಗಿದ್ದರು.

ಅದನ್ನು ಪಡೆಯಲೆಂದು ಹೋಗುವಾಗ ಮನೆಯ ಬಾಗಿಲಿಗೆ ಹೊರಗಿನಿಂದ ಯಾರೋ ಬೀಗ ಹಾಕಿರುವ ವಿಚಾರಗೊತ್ತಾಗಿದೆ. ಅವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಹಿರಿಯ ಅಧಿಕಾರಿಗಳು ವೃದ್ಧ ದಂಪತಿಯನ್ನು ರಕ್ಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next