Advertisement
ಪಾಠಗಳೆಲ್ಲ ಆದ ಮೇಲೆ ಪರೀಕ್ಷೆಗಳು ನಡೆಯುವುದು ಸಾಮಾನ್ಯ. ಆದರೆ, ಸದ್ಯದ ಮಟ್ಟಿಗೆ, ಪರೀಕ್ಷೆಯ ಬಳಿಕ ಜನರು ಪಾಠ ಕಲಿಯುತ್ತಿದ್ದಾರೆ ಎಂಬುದೇ ನಿಜ.ಕೋವಿಡ್-19ವೆಂಬ ಮಹಾಮೇಷ್ಟ್ರು, ಜಗತ್ತಿಗೆ ಕಲಿಸುತ್ತಿರುವ ಪಾಠ ಅಂತಿಂಥದ್ದಲ್ಲ. ಉಳಿದೆಲ್ಲ ವಿಷಯಗಳು ಒತ್ತಟ್ಟಿಗಿರಲಿ, ಸದಾ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಮೇಷ್ಟ್ರುಗಳು, ತರಗತಿಗಳಲ್ಲೇ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು- ಎಲ್ಲರೂ, ನಾಲ್ಕು ಗೋಡೆಗಳಿಂದಾಚೆಯೂ ಪಾಠ ಹೇಳುವ ಮತ್ತು ಕೇಳುವ ಹೊಸ ದಾರಿಗಳೇನಿವೆ ಎಂಬ ಹುಡುಕಾಟದಲ್ಲಿ ತೊಡಗಿದ್ದಾರೆ.
ನಿನ್ನೆ ಮೊನ್ನೆಯವರೆಗೂ “ವರ್ಚುವಲ್ ಕ್ಲಾಸ್ ರೂಮ್’ಅನ್ನು, ಯಾವುದೋ ವಿದೇಶದ ಪರಿಕಲ್ಪನೆ ಎಂಬಂತೆ ನೋಡಲಾಗುತ್ತಿತ್ತು. ಹೆಚ್ಚೆಂದರೆ, ಅದೆಲ್ಲ ನಮ್ಮ ಮಹಾನಗರಗಳ ಹೈಟೆಕ್ ಶಿಕ್ಷಣ ಸಂಸ್ಥೆಗಳಲ್ಲಿ ದೊರೆಯಬಹುದಾದ ಸೌಕರ್ಯ ಎಂದಷ್ಟೇ ಗ್ರಹಿಸಲಾಗುತ್ತಿತ್ತು. ಕೊರೊನಾ, ಆ ಕಲ್ಪನೆಯನ್ನು ಅನಿವಾರ್ಯವಾಗಿ ನಮ್ಮ ಮನೆಬಾಗಿಲಿಗೇ ತಂದು ನಿಲ್ಲಿಸಿದೆ. ಪಟ್ಟಣಗಳಿಂದ ತೊಡಗಿ ಹಳ್ಳಿಗಳವರೆಗಿನ, ಶಾಲಾ- ಕಾಲೇಜು ಹುಡುಗರೆಲ್ಲ ತಮಗರಿವಿಲ್ಲದಂತೆಯೇ, ವರ್ಚುವಲ್ ಕ್ಲಾಸ್ ರೂಮ್‌ಗಳ ವಿದ್ಯಾರ್ಥಿಗಳಾಗಿ ಬದಲಾಗುತ್ತಿದ್ದಾರೆ. ಮೊಬೈಲ್ ಮೂಲಕವೇ ಪಾಠ!
ವಿದ್ಯಾರ್ಥಿಗಳೇ ಏಕೆ, ಬಹುಪಾಲು ಅಧ್ಯಾಪಕರೂ ಇಂತಹದೊಂದು ಸನ್ನಿವೇಶಕ್ಕೆ ಹೊಸಬರೇ. ಕಂಪ್ಯೂಟರ್, ಪ್ರೊಜೆಕ್ಟರ್‌ಗಳನ್ನೇ ಪರಕೀಯ ಸಲಕರಣೆಗಳೆಂದು ಭಾವಿಸಿ, ಪಠ್ಯ ಪುಸ್ತಕ, ಕರಿಹಲಗೆಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದ ಅಧ್ಯಾಪಕರಿಗೂ, ಇದೀಗ ಆನ್‌ಲೈನ್ ತರಗತಿಗಳ ಅನಿವಾರ್ಯತೆ ಅರ್ಥವಾಗಿದೆ. ಈವರೆಗೂ, ತರಗತಿಯ ಕೊಠಡಿಗಳಷ್ಟೇ ಪಾಠದ ವೇದಿಕೆಗಳೆಂದು ಭಾವಿಸಿದ್ದ ಅಧ್ಯಾಪಕರೂ, ಯೂಟ್ಯೂಬ್
ವೀಡಿಯೋ ಕಾನ್ಫರೆನ್ಸ್, ಜೂಮ್ ಎಂದೆಲ್ಲಾ ಹೇಳುತ್ತಾ, ಉತ್ಸಾಹದಿಂದ ಎದ್ದುಕುಳಿತಿದ್ದಾರೆ.
Related Articles
Advertisement
ಯಾರೂ ಊಹಿಸಿರಲಿಲ್ಲ ಇನ್ನು, ಐದೋ ಹತ್ತೋ ವರ್ಷಕ್ಕೆ ಅನಿವಾರ್ಯವಾಗಬಹುದಾಗಿದ್ದ ವರ್ಚುವಲ್ ಕ್ಲಾಸ್ ರೂಮ್‌ಗಳನ್ನು, ಕೋವಿಡ್-19 ಈಗಲೇ ಅನಿವಾರ್ಯವಾಗಿಸಿದೆ. ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು, ವರ್ಷದ ಎರಡನೇ ಭಾಗವನ್ನು ಪೂರೈಸುವ ಮೊದಲೇ, ಅನಿರೀಕ್ಷಿತವಾಗಿ ಲಾಕ್ಡೌನ್ರಜೆಯನ್ನು ಎದುರಿಸಬೇಕಾಗಿ ಬಂದಿದೆ. ಪರಿಣಾಮ, ಪಾಠಪ್ರವಚನಗಳೆಲ್ಲ ಅಲ್ಲಲ್ಲೇ ನಿಂತುಬಿಟ್ಟಿವೆ. ಹಾಗಂತ, ಅನಿಶ್ಚಿತತೆಯಲ್ಲೇ ವಾರ, ತಿಂಗಳು ಕಳೆಯು ವುದು ಕಷ್ಟ. ಈಗ ಏನಾದರೂ ಮಾಡಲೇಬೇಕು ಎಂಬ ಪರಿಸ್ಥಿತಿ ಬಂದಿದೆ. ಇಂತಹದೊಂದು ಸಂದರ್ಭ, ನಮ್ಮ ಜೀವನದಲ್ಲಿ ಬಂದೀತು ಎಂದು ಯಾರೂ ಊಹಿಸಿರಲಿಲ್ಲ. ಹಾಗಾಗಿ, ಶಿಕ್ಷಣ ವಲಯವೂ ಅದನ್ನು ಹೇಗೆ ಎದುರಿಸುವುದೆಂದು ತಿಳಿಯದೆ, ಒಂದಷ್ಟು ದಿನ ತಬ್ಬಿಬ್ಟಾಗಿದ್ದು ನಿಜವೇ. ಆದರೆ, ಕೆಲವೇ
ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು, ಅಧ್ಯಾಪಕರು, ಮನೆಗಳಿಗೇ ಪಾಠ, ನೋಟ್ಸು ತಲುಪಿಸುತ್ತಿರುವುದನ್ನು ನೋಡಿ ವಿದ್ಯಾರ್ಥಿಗಳು ಸೋಜಿಗಪಟ್ಟಿದ್ದಾರೆ. ಕ್ಲಾಸ್ ರೂಮ್‌ನಲ್ಲಾದರೆ ಒಮ್ಮೆ ಕೇಳಿಸಿಕೊಂಡ ಪಾಠ ಅಷ್ಟಕ್ಕೇ ಸೀಮಿತ. ಹೆಚ್ಚೆಂದರೆ ನೋಟ್ಸ್ ಮಾಡಿಕೊಳ್ಳಬಹುದು. ಆದರೆ ಈಗ, ಅಧ್ಯಾಪಕರು ತಂತ್ರಜ್ಞಾನಗಳನ್ನು ಬಳಸಿಕೊಂಡು ಮೊಬೈಲುಗಳಿಗೇ ಕಳಿಸತೊಡಗಿರುವ ಆಡಿಯೋ- ವಿಡಿಯೋಗಳನ್ನು ಮತ್ತೆಮತ್ತೆ ಕೇಳಬಹುದು. ಅನುಕೂಲದ ಸಮಯದಲ್ಲಿ, ಅನುಕೂಲದ ಸ್ಥಳದಲ್ಲಿ ಕುಳಿತು ನೋಡಬಹುದು. ಛೇ! ಇದೆಲ್ಲ ಸಾಧ್ಯವಿತ್ತಲ್ಲವೇ ಎಂದು ವಿದ್ಯಾರ್ಥಿಗಳೂ ಅಧ್ಯಾಪಕರೂ ಮುಖಮುಖ ನೋಡಿಕೊಂಡು ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಜೂಮ್ ಆಪ್‌ನಲ್ಲಿ ಮೀಟಿಂಗ್ ಮಾಡಿಕೊಂಡು, ತಾವು ಇದ್ದಲ್ಲಿಂದಲೇ
ಪಾಠಪ್ರವಚನಗಳಲ್ಲಿ ಭಾಗವಹಿಸತೊಡಗಿದ್ದಾರೆ. ಮಿತಿಗಳೂ ಇವೆ…
ಇಲ್ಲಿ ಇತಿಮಿತಿಗಳು, ಕಷ್ಟಗಳು ಇಲ್ಲದಿಲ್ಲ. ಹಳ್ಳಿಗಳಿಂದ, ಆರ್ಥಿಕವಾಗಿ ಹಿಂದುಳಿದ ಮನೆಗಳಿಂದ ಬರುವ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಎಲ್ಲರಲ್ಲೂ ಆಂಡ್ರಾಯ್ಡ್ ಮೊಬೈಲುಗಳಿಲ್ಲ. ಇರುವವರಿಗೆ ನೆಟ್ ವರ್ಕ್ ಸಮಸ್ಯೆ ಇದೆ. ಹೀಗಾಗಿ, ಕೇವಲ ಆನ್‌ಲೈನ್ ತರಗತಿಗಳಿಂದಲೇ ಸಿಲೆಬಸ್
ಪೂರೈಸಿ ಪರೀಕ್ಷೆಗಳನ್ನು ನಡೆಸುವುದು ಸಾಧ್ಯವಿಲ್ಲ. ಡಿಜಿಟಲ್ ಡಿವೈಡ್‌ನ ಆಚೆ ಇರುವ ಎಷ್ಟೋ ವಿದ್ಯಾರ್ಥಿಗಳಿಗೆ ಪರಿಹಾರ ಪಾಠಗಳನ್ನು ನಡೆಸುವುದೂ ಅನಿವಾರ್ಯ. ಹಾಗೆಂದು, ಈ ಪರಿಸ್ಥಿತಿಯೇನೂ ಶಾಶ್ವತವಲ್ಲ. ಇಂತಹ ಸನ್ನಿವೇಶಗಳು ಎದುರಾದಾಗ ಏನು ಮಾಡಬೇಕು ಎಂದು ಯೋಚಿಸುವಂತೆ ಕೊರೊನಾ ಮಾಡಿದೆ. ಜೀವನ ಒಂದು ನಿರಂತರ ಕಲಿಕೆ ಎಂಬುದು ನಿಜವಾಗಿದ್ದರೆ, ಇದು ಅದರ ಒಂದು ಭಾಗವಷ್ಟೇ! ಆನ್‌ಲೈನ್ ಕಲಿಕೆಗೆ ಹತ್ತಾರು ದಾರಿ
ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಸಂಪರ್ಕದಲ್ಲಿರಲು, ತಂತ್ರಜ್ಞಾನ ಹತ್ತುಹಲವು ಹಾದಿಗಳನ್ನು ತೆರೆದಿಟ್ಟಿದೆ.
ಜೂಮ್ ಆ್ಯಪ್: ಅಧ್ಯಾಪಕ ಒಮ್ಮೆಗೆ 100 ಮಂದಿಯೊಂದಿಗೆ ಏಕಕಾಲಕ್ಕೆ ಸಂಪರ್ಕ ಸಾಧಿಸಬಹುದು. ತಲಾ 40 ನಿಮಿಷಗಳ ಪಾಠ ಮಾಡಬಹುದು. ವಿದ್ಯಾರ್ಥಿಗಳು, ತಾವಿರುವಲ್ಲಿಂದಲೇ ಪಾಠ ಕೇಳಬಹುದು, ಮೇಷ್ಟ್ರೊಂದಿಗೆ ಸಂವಾದ ಕೂಡ ನಡೆಸಬಹುದು. ಗೂಗಲ್ ಹ್ಯಾಂಗೌಟ್: ವಿಡಿಯೋ ಕಾನ್ಫರೆನ್ಸಿಗೆ ತುಂಬ ಅನುಕೂಲವಾಗಿರುವ ಜನಪ್ರಿಯ ಆ್ಯಪ್ ಇದು. ಪಾಠದ ನೇರಪ್ರಸಾರ ಅಷ್ಟೇ ಅಲ್ಲದೆ ಟೈಪ್ ಮಾಡುವ ಮೂಲಕವೂ ಪ್ರಶ್ನೋತ್ತರ ಮಾಡಬಹುದು. ಯೂಟ್ಯೂಬ್: ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವ ಪಾಠಗಳನ್ನು ಯೂಟ್ಯೂಬಿಗೆ ಹಾಕುವ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಬಹುದು.ವಿಡಿಯೋಗಳನ್ನು ಮತ್ತೆ ಮತ್ತೆ ನೋಡುವ ಅನುಕೂಲವೂ ಇದೆ. ವಾಟ್ಸ್ಆ್ಯಪ್/ ಇಮೇಲ್: ಅಧ್ಯಾಪಕರು 20- 30 ನಿಮಿಷಗಳ ಪಾಠಗಳನ್ನು ಆಡಿಯೋ/ ವಿಡಿಯೊ ರೆಕಾರ್ಡ್ ಮಾಡಿ ವಿದ್ಯಾರ್ಥಿಗಳಿಗೆ ತಲುಪಿಸಬಹುದು. ಮೊಬೈಲ್ ಬಳಸಿಕೊಂಡೇ ಇದನ್ನೆಲ್ಲ ಮಾಡಬಹುದು. ಪವರ್ ಪಾಯಿಂಟ್ ಪ್ರಸೆಂಟೇಶನ್, ನೋಟ್ಸ್ ಇತ್ಯಾದಿ ಅಧ್ಯಯನ ಸಾಮಗ್ರಿಗಳನ್ನು ಹಂಚಿಕೊಳ್ಳಬಹುದು. ಆಡಿಯೋ/ ವಿಡಿಯೋ ಫೈಲ್‌ಗಳು ದೊಡ್ಡದಿದ್ದಾಗ ಗೂಗಲ್ ಡ್ರೈವ್‌ನಲ್ಲಿ ಸೇವ್ ಮಾಡಿ ಲಿಂಕ್ ಹಂಚಿಕೊಳ್ಳಬಹುದು. ಕ್ಲೌಡ್ ಶೇರಿಂಗ್ ಕೂಡ
ಮಾಡಬಹುದು. ಶಾಲ್ಮಲಾ