Advertisement

ಕೋವಿಡ್‌ 19: ಹಳೆಯ ಔಷಧದಿಂದ ಹೊಸದು!

02:19 PM May 02, 2020 | sudhir |

ಮಣಿಪಾಲ: ವಿಶ್ವದಲ್ಲೆಡೆ ಕೋವಿಡ್‌-19 ಅನ್ನು ಹತ್ತಿಕ್ಕಲು ಹತ್ತಾರು ಸಂಶೋಧಕರ ತಂಡ ಅಧ್ಯಯನ ನಡೆಸುತ್ತಿದೆ. ಆದರೆ ಸದ್ಯದ ಸ್ಥಿತಿಯಲ್ಲಿನ ಔಷಧದ ಕೊರತೆ ಪ್ರಸ್ತುತ ಲಭ್ಯವಿರುವ ಸಂಪನ್ಮೂಲಗಳ ಹೊಸ ಮಾದರಿಯ ಬಳಕೆಗೆ ಉತ್ತೇಜಿಸುತ್ತಿದೆಯೇ? ಈ ಅನಿವಾರ್ಯ ಸೃಷ್ಟಿಯಾಗಿದೆಯೇ?

Advertisement

ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳನ್ನು ಕಂಡರೆ ಹೌದು ಎನ್ನುವಂತಾಗಿದೆ. ಈ ಸಂಬಂಧ ದಿ ನ್ಯೂಯಾರ್ಕ್‌ ಟೈಮ್ಸ್‌ ವರದಿಯೊಂದು ಮಾಡಿದೆ.

1950ರ ಅಸುಪಾಸಿನಲ್ಲಿ ಮನೋವ್ಯಾಧಿಗೆ ಕಂಡು ಹಿಡಿಯಲಾದ ಕ್ಲೋರೋ ಪ್ರೋಮೋಜೋನ್‌ 7 ದಶಕಗಳ ನಂತರ ಅಂದರೆ ಇಂದಿಗೂ ಆಂಟಿ-ಸೈಕೋಟಿಕ್‌ ಮದ್ದಾಗಿ ಬಳಸಲಾಗುತ್ತದೆ. ಕೇವಲ ಮನೋವ್ಯಾಧಿಗೆ ಸೀಮಿತವಾಗಿ ಉಳಿಯದ ಕ್ಲೋರೋಪ್ರೋಮೋಜೋನ್‌ ಅನ್ನು ಕೆಲವು ವೈರಲ್‌ ಸೋಂಕುಗಳಿಗೆ ಬಳಸಲಾಗುತ್ತಿದೆ.

ಇಂತಹ ಅದೆಷ್ಟೋ ಔಷಧಗಳಲ್ಲಿ , ಲಸಿಕೆಗಳಲ್ಲಿ ಹಲವು ರೋಗಗಳನ್ನು ನಿಯಂತ್ರಿಸುವ ಶಕ್ತಿ ಅಡಗಿದೆ ಎಂಬ ಅಂಶ ಬೆಳಕಿಗೆ ಬಂದಿದ್ದು, ಹಿಂದಿನ ಸಂಶೋಧನೆಗಳ ಇತಿಹಾಸ ಕೊಟ್ಟ ಸುಳಿವನ್ನು ಗಮನಿಸಿದ ಸಂಶೋಧಕರ ತಂಡ ಹೊಸ ಪ್ರಯತ್ನ ಆರಂಭಿಸಿದೆ.

ಈಗಾಗಲೇ ಚಾಲ್ತಿಯಲ್ಲಿರುವ ಔಷಧಗಳಿಗೆ ಕೋವಿಡ್‌-19ನ ವಿರುದ್ಧ ಹೋರಾಡುವ ಸಾಮರ್ಥ್ಯ ಇದೆಯೇ ಎಂಬುದನ್ನು ಮರು ಸಂಶೋಧನೆ ಮಾಡಲು ಮುಂದಾಗಿದೆ. ಈ ವಿಧಾನವನ್ನು ಡ್ರಗ್‌ ರೀ ಪರ್ಪಸಿಂಗ್‌ ಎಂದು ಕರೆಯುತ್ತಾರೆ ಎನ್ನಲಾಗಿದೆ.

Advertisement

ಮತ್ತೂಂದು ಔಷಧ
ಹೀಗೆಯೇ ಮತ್ತೂಂದು ಔಷಧ ಈಗ ನಿರ್ದಿಷ್ಟ ಉದ್ದೇಶಕ್ಕೆ ಬಳಸಲಾಗುತ್ತಿದೆ. ಅದರಲ್ಲೂ ಕೋವಿಡ್‌-19 ಸೋಂಕನ್ನು ಮಣಿಸುವ ಶಕ್ತಿಯಿದೆ. ಅಲ್ಲದೇ ಮರು ಸೋಂಕನ್ನು ತಡೆಯಬಹುದು ಎಂದು ವಿಜ್ಞಾನಿಗಳು ಸಂಶೋಧನೆ ನಿರತರಾಗಿದ್ದಾರೆ.

ಈ ವಿಧಾನ ಭಾಗಶಃ ಯಶಸ್ವಿಯಾಗಬಹುದು ಎಂಬುದಕ್ಕೆ ಹಲವಾರು ಉದಾಹರಣೆಗಳಿದ್ದು, ಹಿಂದೆ ಕ್ಯಾನ್ಸರ್‌ ಚಿಕಿತ್ಸೆಗೆ ಎಂದು ಕಂಡುಹಿಡಿಯಲಾದ ಔಷಧವನ್ನು ಎಚ್‌.ಐ.ವಿ. ಮೊದಲ ಬಾರಿಗೆ ಕಾಣಸಿಕೊಂಡಾಗ ಅದರ ವಿರುದ್ಧ ಪ್ರಯೋಗ ಮಾಡಲಾಗಿತ್ತು. ಅಚ್ಚರಿ ಎಂಬಂತೆ ಈ ಲಸಿಕೆಯಿಂದ ಪ್ರಯೋಜನವಾಗಿತ್ತಲ್ಲದೆ, ಈ ಔಷಧ ಬಳಕೆಗೆ ಯುಸ್‌ನ ಆಹಾರ ಮತ್ತು ಔಷಧ ಆಡಳಿತ ಕೇಂದ್ರ ಹಸುರು ನಿಶಾನೆ ತೋರಿಸಿತ್ತು. ಇಂತಹ ಹತ್ತು ಹಲವಾರು ನಿದರ್ಶನಗಳು ಈ ಹಿಂದೆ ನಡೆದಿದ್ದು, ಇದೀಗ ಡಾ| ಚಂದಾ ಮತ್ತು ಇತರ ಸಂಶೋಧಕರುಗಳ ತಂಡ ಸಾವಿರಾರು ಔಷಧಗಳನ್ನು ಮರು ಸಂಶೋಧನೆಗೆ ಒಳಪಡಿಸಿದ್ದು, ಕೋವಿಡ್‌-19ನ ವಿರುದ್ಧ ಹೋರಾಡುವ ಅಸ್ತ್ರಕ್ಕಾಗಿ ಹುಡುಕಾಟ ನಡೆಸಿದೆ.

ಪ್ರಸ್ತುತ ಭಾರತವೂ ಸಹಿತ ಹಲವು ರಾಷ್ಟ್ರಗಳಲ್ಲಿ ಕೋವಿಡ್‌ 19 ಗೆ ಲಸಿಕೆ ಸಂಶೋಧನೆ ನಡೆಯುತ್ತಿದೆ. ಪ್ರತಿ ರಾಷ್ಟ್ರಗಳ ಸಂಶೋಧಕರು ಇದರಲ್ಲಿ ಕಾರ್ಯ ನಿರತರಾಗಿದ್ದು, ಯಾರ ಪಾಲಾಗಬಹುದು ಎಂಬ ಕುತೂಹಲವನ್ನೂ ಮೂಡಿಸಿದೆ. ಚೀನ, ದಕ್ಷಿಣ ಕೊರಿಯಾ, ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವು ರಾಷ್ಟ್ರಗಳು ಈ ಪಟ್ಟಿಯಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next